Gautam Gambhir India Coach: ಐಪಿಎಲ್-2024 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ, ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir) ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ (Team India Head Coach) ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಈ ಬಗ್ಗೆ ಸ್ವತಃ ಗಂಭೀರ್ ಅವರೇ ಸುಳಿವು ಬಿಟ್ಟು ಕೊಟ್ಟಿದ್ದಾರೆ.

ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಜೂನ್ 31ಕ್ಕೆ ಅಂತ್ಯಗೊಳ್ಳಲಿದೆ. ಐಸಿಸಿ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆ ತೊರೆಯಲಿದ್ದಾರೆ. ಹೀಗಾಗಿ ನೂತನ ಕೋಚ್ ಆಯ್ಕೆಗೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !
ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ನೂತನ ಹೆಡ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಒಲವು ಹೊಂದಿದೆ. ಟೀಮ್ ಇಂಡಿಯಾ ಕೋಚ್ ಆಗಿ ಆಯ್ಕೆಯಾಗುವ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಗಂಭೀರ್ ಸ್ಪಷ್ಟನೆ ಕೊಟ್ಟಿದ್ದಾರೆ.
“ನಾನು ಭಾರತ ತಂಡಕ್ಕೆ ಕೋಚಿಂಗ್ ನೀಡುವುದನ್ನು ನಿಜಕ್ಕೂ ಇಷ್ಟ ಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವುದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ” ಎಂದು ಅಬುಧಾಬಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಗೌತಮ್ ಗಂಭೀರ್ ಹೇಳಿದ್ದಾರೆ.
ಗಂಭೀರ್ ಅವರ ಹೇಳಿಕೆಯನ್ನು ನೋಡಿದರೆ ಅವರೇ ಭಾರತ ತಂಡದ ನೂತನ ಕೋಚ್ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದು ಇನ್ನೂ ಖಚಿತ ಪಟ್ಟಿಲ್ಲ. ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು.
ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’

ಭಾರತ ತಂಡದ ನೂತನ ಮುಖ್ಯ ಕೋಚ್ ಅವಧಿ ಮೂರೂವರೆ ವರ್ಷಗಳದ್ದಾಗಿರುತ್ತದೆ. 2024ರ ಜುಲೈ 1ಕ್ಕೆ ಆರಂಭವಾಗಿ 2027ರ ಡಿಸೆಂಬರ್ 31ಕ್ಕೆ ಕೋಚ್ ಹುದ್ದೆ ಅವಧಿ ಕೊನೆಗೊಳ್ಳಲಿದೆ. ಭಾರತ ಪುರುಷರ ತಂಡದ ಪರ್ಫಾಮೆನ್ಸ್ ಮತ್ತು ಮ್ಯಾನೇಜ್ಮೆಂಟ್ ಜವಾಬ್ದಾರಿ ಮುಖ್ಯ ತರಬೇತುದಾರನದ್ದಾಗಿರುತ್ತದೆ.
ಇದನ್ನೂ ಓದಿ : ICC T20 World Cup 2024 : ಐಸಿಸ್ ಬೆದರಿಕೆಯ ಮಧ್ಯೆಯೂ ಅಮೆರಿಕದಲ್ಲಿ ಬೀದಿ ಸುತ್ತುತ್ತಿದ್ದಾರೆ ರೋಹಿತ್ ಬಾಯ್ಸ್!
- ಭಾರತ ತಂಡದ ಕೋಚ್ ಆಗಲು ಬಿಸಿಸಿಐ ನಿಗದಿ ಪಡಿಸಿದ್ದ ಮಾನದಂಡಗಳು:
30 ಟೆಸ್ಟ್ ಅಥವಾ 50 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರಬೇಕು; ಅಥವಾ - ಪೂರ್ಣ ಸದಸ್ಯತ್ವ ಹೊಂದಿರುವ ಟೆಸ್ಟ್ ಆಡುವ ರಾಷ್ಟ್ರೀಯ ತಂಡಕ್ಕೆ ಕನಿಷ್ಠ ಎರಡು ವರ್ಷ ಕೋಚ್ ಆಗಿ ಕಾರ್ಯನಿರ್ವಹಿಸಿರಬೇಕು; ಅಥವಾ
- ಅಸೋಸಿಯೇಟ್ ಸದಸ್ಯ ರಾಷ್ಟ್ರಗಳ ತಂಡದ ಹೆಡ್ ಕೋಚ್/ಐಪಿಎಲ್ ಅಥವಾ ಅದಕ್ಕೆ ಸರಿಸಮನಾದ ಅಂತರಾಷ್ಟ್ರೀಯ ಲೀಗ್/ಫಸ್ಟ್ ಕ್ಲಾಸ್ ತಂಡಗಳ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿರಬೇಕು; ಅಥವಾ
- ಕನಿಷ್ಠ 3 ವರ್ಷ ರಾಷ್ಟ್ರೀಯ ಎ ತಂಡಗಳ ಕೋಚ್ ಆಗಿರಬೇಕು; ಅಥವಾ
- ಬಿಸಿಸಿಐನ ಲೆವೆಲ್ 3 ಸರ್ಟಿಫಿಕೇಟ್ ಹೊಂದಿರಬೇಕು
- ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರಬೇಕು.
Team india Coach Gautam Gambhir fix