ಸೋಮವಾರ, ಏಪ್ರಿಲ್ 28, 2025
HomeSportsCricketVenkatesh Iyer Head Injury : ವೆಂಕಟೇಶ್ ಅಯ್ಯರ್ ತಲೆಗೆ ಗಾಯ; ಆಸ್ಪತ್ರೆಗೆ ಹೊತ್ತೊಯ್ಯಲು ಮೈದಾನಕ್ಕೇ...

Venkatesh Iyer Head Injury : ವೆಂಕಟೇಶ್ ಅಯ್ಯರ್ ತಲೆಗೆ ಗಾಯ; ಆಸ್ಪತ್ರೆಗೆ ಹೊತ್ತೊಯ್ಯಲು ಮೈದಾನಕ್ಕೇ ನುಗ್ಗಿದ ಆ್ಯಂಬುಲೆನ್ಸ್

- Advertisement -

ಕೊಯಂಬತ್ತೂರು: ದುಲೀಪ್ ಟ್ರೋಫಿ (Duleep Trophy) ಪಂದ್ಯದ ವೇಳೆ ಸೆಂಟ್ರಲ್ ಝೋನ್ ತಂಡದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer Head Injury ) ತಲೆಗೆ ಗಂಭೀರ ಗಾಯವಾಗಿದೆ. ವೆಂಕಟೇಶ್ ಅಯ್ಯರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಕ್ರಿಕೆಟ್ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.

ಕೊಯಂಬತ್ತೂರಿನಲ್ಲಿ ನಡೆಯುತ್ತಿರುವ ಪಶ್ಚಿಮ ವಲಯ (West Zone) ವಿರುದ್ಧದ ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ತಲೆಗೆ ಗಂಭೀರ ಗಾಯವಾಗಿದೆ. ಕೇಂದ್ರ ವಲಯ (Central Zone) ಪರ ಆಡುತ್ತಿರುವ ವೆಂಕಟೇಶ್ ಅಯ್ಯರ್, ವೆಸ್ಟ್ ಝೋನ್ ತಂಡದ ಮಧ್ಯಮ ವೇಗಿ ಚಿಂತನ್ ಗಜ (Chintan Gaja) ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದಾಗ ಚೆಂಡು ಬೌಲರ್ ಕೈ ಸೇರಿತು. ಸಿಕ್ಸರ್ ಹೊಡೆಸಿಕೊಂಡಿದ್ದ ಕೋಪದಲ್ಲಿದ್ದ ಚಿಂತನ್ ಗಜ ಚೆಂಡನ್ನು ವೆಂಕಟೇಶ್ ಅಯ್ಯರ್ ಅವರತ್ತ ಎಸೆತದರು. ಚೆಂಡು ನೇರವಾಗಿ ವೆಂಕಟೇಶ್ ಅಯ್ಯರ್ ಅವರ ತಲೆಯ ಹಿಂಭಾಗಕ್ಕೆ ಬಡಿಯಿತು. ಕೂಡಲೇ ಅಯ್ಯರ್ ನೆಲಕ್ಕುರುಳಿದರು.

ಅಸಾಧ್ಯ ನೋವಿನಿಂದ ಬಳಸಿದ ವೆಂಕಟೇಶ್ ಅಯ್ಯರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಮೈದಾನಕ್ಕೇ ಎಂಟ್ರಿ ಕೊಡುವಂತಾಯಿತು. ಆದರೆ ಆ್ಯಂಬುಲೆನ್ಸ್ ಹತ್ತದ ಅಯ್ಯರ್ ನಡೆದುಕೊಂಡೇ ಪೆವಿಲಿಯನ್ ಸೇರಿದರು. ಬಳಿಕ ಚೇತರಿಸಿಕೊಂಡು ಮತ್ತೆ ಕ್ರೀಸ್’ಗಿಳಿದರಾದರೂ, 14 ರನ್ ಗಳಿಸಿ ಔಟಾದರು.

ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ (Ajinkya Rahane) ನಾಯಕತ್ವದ ಪಶ್ಚಿಮ ವಲಯ, ಕೇಂದ್ರ ವಲಯ (Central Zone) ವಿರುದ್ಧ ಉತ್ತಮ ಸ್ಥಿತಿಯಲ್ಲಿದೆ. ಮೊದಲ ಇನ್ನಿಂಗ್ಸ್’ನಲ್ಲಿ 257 ರನ್ನಿಗೆ ಆಲೌಟಾದ್ರೂ ಬೌಲರ್’ಗಳ ಅಮೋಘ ಪ್ರದರ್ಶನದಿಂದ ಕೇಂದ್ರ ವಲಯ ತಂಡವನ್ನು 128 ರನ್ನಿಗೆ ಕಟ್ಟಿಹಾಕುವಲ್ಲಿ ಯಶಸ್ವಿ ಯಾಯ್ತು. 129 ರನ್’ಗಳ ದೊಡ್ಡ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಪಶ್ಚಿಮ ವಲಯ ತಂಡ, 2ನೇ ದಿನದಾಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದ್ದು, ಒಟ್ಟಾರೆ 259 ರನ್’ಗಳ ಮುನ್ನಡೆ ಪಡೆದಿದೆ. ಸ್ಫೋಟಕ ಶತಕ ಬಾರಿಸಿರುವ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಪೃಥ್ವಿ ಶಾ (Prithvi Shaw), 96 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 104 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : Indian Cricket Team: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಔಟಾದ್ರೆ ಟಿ20ಯಲ್ಲಿ ಭಾರತ 60 ರನ್ನಿಗೆ ಆಲೌಟ್

Team india Top Allrounder Venkatesh Iyer Head Injury Duleep Trophy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular