ಲಂಡನ್ : ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಖ್ಯಾತ ಆಟಗಾರನೋರ್ವನಿಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ ಎಂದು ವರದಿಯಾಗಿದೆ. ಇದು ಇಂಗ್ಲೆಂಡ್ ಸರಣಿಯ ಮೇಲೆ ಕರಿನೆರಳು ಬಿದ್ದಿದೆ.

ಟೀ ಇಂಡಿಯಾದ ಕೀಪರ್ ರಿಷಬ್ ಪಂತ್ ಅವರ ಕೊರೊನಾ ಟೆಸ್ಟ್ ವರದಿಯಲ್ಲಿ ಪಾಸಿಟಿವ್ ಬಂದಿದೆ ಎಂದು ಸ್ಪೋರ್ಟ್ ಟಾಕ್ ವರದಿ ಮಾಡಿದೆ. ಟೀ ಇಂಡಿಯಾದ ಒಟ್ಟು 23 ಮಂದಿ ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು. 20 ದಿನಗಳ ವಿಶ್ರಾಂತಿಯ ಬಳಿಕ ಆಟಗಾರರು ಬಯೋ ಬಬಲ್ ನಿಂದ ಹೊರ ಬಂದಿದ್ದಾರೆ. ಈ ವೇಳೆಯಲ್ಲಿಯೇ ಸೋಂಕು ತಗುಲಿರುವ ಸಾಧ್ಯತೆಯಿದೆ.

ಟೀ ಇಂಡಿಯಾದ ಆಟಗಾರ ರಿಷಬ್ ಪಂತ್, ಜಸ್ಪ್ರಿತ್ ಬುಮ್ರಾ, ಹನುಮ ವಿಹಾರಿ ಯುರೋ ಕಪ್ ವೀಕ್ಷಣೆಗೆ ತೆರಳಿದ್ದರೆ. ಕೋಚ್ ರವಿಶಾಸ್ತ್ರಿ ಅವರು ವಿಂಬಲ್ಡನ್ ಫೈನಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇವರೆಲ್ಲರೂ ಕೊರೊನಾ ನಿಯಮಗಳನ್ನು ಮೀರಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ರಿಷಬ್ ಪಂತ್ ಖುದ್ದು ಯುರೋ ಕಪ್ ವೇಳೆಯಲ್ಲಿ ಅಭಿಮಾನಿಗಳ ಜೊತೆಗೆ ನಿಂತು ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲಿಂದಲೇ ಕೊರೊನಾ ಸೋಂಕು ಬಂದಿರಬಹುದು ಎಂದು ಹೇಳಲಾಗುತ್ತಿದೆ.