ಸೋಮವಾರ, ಏಪ್ರಿಲ್ 28, 2025
HomeSportsCricketRohit Sharma video viral: ಹೋಟೆಲ್‌ಗೆ ಹೋದ ರೋಹಿತ್ ಶರ್ಮಾಗೆ ಶಾಕ್, ಫ್ಯಾನ್ಸ್ ಕಾಟಕ್ಕೆ ಹಿಟ್‌ಮ್ಯಾನ್...

Rohit Sharma video viral: ಹೋಟೆಲ್‌ಗೆ ಹೋದ ರೋಹಿತ್ ಶರ್ಮಾಗೆ ಶಾಕ್, ಫ್ಯಾನ್ಸ್ ಕಾಟಕ್ಕೆ ಹಿಟ್‌ಮ್ಯಾನ್ ಮಾಡಿದ್ದೇನು ಗೊತ್ತಾ?

- Advertisement -

ಮುಂಬೈ: ( Rohit Sharma video viral) ಕ್ರಿಕೆಟಿಗರು ಹೋದಲೆಲ್ಲಾ ಅಭಿಮಾನಿಗಳು ಸುತ್ತುವರಿಯೋದು, ಫೋಟೋ ಸೆಲ್ಫಿಗೆ ಮುಗಿ ಬೀಳೋದು ಸಾಮಾನ್ಯ. ಫ್ಯಾನ್ಸ್ ಕಾಟ ಹೇಗಿರತ್ತೆ ಎಂಬುದರ ಅನುಭವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಆಗಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗೆ ದೇಶಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆ ಅಭಿಮಾನಿಗಳ ಪವರ್ ಎಂಥದ್ದು ಅನ್ನೋದು ರೋಹಿತ್ ಶರ್ಮಾ ಅವರಿಗೆ ಪ್ರತ್ಯಕ್ಷವಾಗಿ ಅರಿವಾಗಿದೆ. ವಿಷ್ಯ ಏನಂದ್ರೆ, ರೋಹಿತ್ ಶರ್ಮಾ ಮಂಗಳವಾರ ಮುಂಬೈನ ಕೊಲಾಬದಲ್ಲಿರು “ದಿ ಟೇಬಲ್” ಎಂಬ ರೆಸ್ಟೋರೆಂಟ್’ಗೆ ಹೋಗಿದ್ರು.

ಹೋಟೆಲ್’ನಿಂದ ಹೊರ ಬರುತ್ತಿದ್ದಂತೆ ರೋಹಿತ್ ಶರ್ಮಾಗೆ ಶಾಕ್. ರೋಹಿತ್ ಶರ್ಮಾ ಹೋಟೆಲ್’ಗೆ ಬಂದಿದ್ದಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಹೋಟೆಲ್ ಹೊರಗೆ ಸೇರಿದ್ದರು.ಅಭಿಮಾನಿಗಳು ಎಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ರು ಅಂದ್ರೆ, ಅವರಿಂದ ತಪ್ಪಿಸಿಕೊಂಡು ಹೋಗೋದು ಸಾಧ್ಯವೇ ಇರ್ಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದ ರೋಹಿತ್ ಶರ್ಮಾ ಮತ್ತೆ ಹೋಟೆಲ್’ಗೆ ವಾಪಸ್ಸಾಗಿದ್ದಾರೆ.

ಏಷ್ಯಾ ಕಪ್ ಟಿ20 ಟೂರ್ನಿಗೆ ಸಜ್ಜಾಗುತ್ತಿರುವ ರೋಹಿತ್ ಶರ್ಮಾ ಸದ್ಯ ಕ್ರಿಕೆಟ್’ನಿಂದ ವಿರಾಮ ಪಡೆದಿದ್ದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಆದರೆ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ರೆಸ್ಟೋರೆಂಟ್’ಗೆ ಹೋಗಿದ್ದ ಟೀಮ್ ಇಂಡಿಯಾ ನಾಯಕನಿಗೆ ವಾಪಸ್ ಬರಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಅಭಿಮಾನಿಗಳು ಕಾಟ ಕೊಟ್ಟಿದ್ದಾರೆ. ರೋಹಿತ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ The table ರೆಸ್ಟೋರೆಂಟ್ ಮುಂದೆ ಸೇರಿದ್ರಿಂದ ಸುತ್ತಮುತ್ತಲಿನ ರಸ್ತೆಗಳೆಲ್ಲಾ ಬ್ಲಾಕ್ ಆಗಿದ್ವು.

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ಆಗಸ್ಟ್ 23ರಂದು ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಲಿದೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಂದು ಆರಂಭವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ರಿಷಭ್ ಪಂತ್, ದೀಪಕ್ ಹೂಡ, ರವಿ ಬಿಷ್ಣೋಯ್, ಆವೇಶ್ ಖಾನ್.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ
Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಇದನ್ನೂ ಓದಿ : Indian ABD Suryakumar Yadav: ಸೂರ್ಯಕುಮಾರ್ ಯಾದವ್ ಭಾರತದ ಎಬಿ ಡಿ’ವಿಲಿಯರ್ಸ್ ಎಂದ ಆಸ್ಟ್ರೇಲಿಯಾ ದಿಗ್ಗಜ

ಇದನ್ನೂ ಓದಿ : KL Rahul fan in Zimbabwe team : ಜಿಂಬಾಬ್ವೆ ತಂಡದಲ್ಲಿದ್ದಾನೆ ಕೆ.ಎಲ್ ರಾಹುಲ್ ಅಭಿಮಾನಿ

Thousands of fans gathers outside a hotel to get glimpse of Indian captain Rohit Sharma video viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular