Tilak Varma: ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಪಾರ್ಟಿ ಕೊಟ್ಟ ತಿಲಕ್ ವರ್ಮಾ, ಯುವ ಕ್ರಿಕೆಟಿಗನ ಮನೆಗೆ ಬಂದ ಕ್ರಿಕೆಟ್ ದೇವರು

ಹೈದರಾಬಾದ್: (Tilak Varma) ಐಪಿಎಲ್-2023 ಟೂರ್ನಿಯಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮಂಗಳವಾರ ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಸನ್ ರೈಸರ್ಸ್ ವಿರುದ್ಧದ ಪಂದ್ಯಕ್ಕಾಗಿ ಸೋಮವಾರ ಹೈದರಾಬಾದ್’ಗೆ ಬಂದಿಳಿದಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಮವಾರ ರಾತ್ರಿ ವಿಶೇಷ ಆತಿಥ್ಯ ಕಾದಿತ್ತು. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಹೈದರಾಬಾದ್ ಆಟಗಾರ ತಿಲಕ್ ವರ್ಮಾ ಇಡೀ ತಂಡಕ್ಕೆ ತಮ್ಮ ಮನೆಯದಲ್ಲಿ ವಿಶೇಷ ಆತಿಥ್ಯ ನೀಡಿದ್ದಾರೆ (Tilak Varma host entire Mumbai Indians).

ತಿಲಕ್ ವರ್ಮಾ ಅವರ ಮನೆಗೆ ನಾಯಕ ರೋಹಿತ್ ಶರ್ಮಾ ಸಹಿತ ಮುಂಬೈ ಇಂಡಿಯನ್ಸ್ ತಂಡದ ಬಹುತೇಕ ಆಟಗಾರರು ಆಗಮಿಸಿದ್ದರು. ಮುಂಬೈ ತಂಡದ ಮೆಂಟರ್ ಆಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ತಿಲಕ್ ವರ್ಮಾ ಅವರ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದ್ದಾರೆ. ಮನೆಗೆ ಬಂದ ಮುಂಬೈ ತಂಡವನ್ನು ತಿಲಕ್ ವರ್ಮಾ ಅವರ ಕುಟುಂಬಸ್ಥರು ಸ್ವಾಗತಿಸಿದ್ದಾರೆ. ಈ ಚಿತ್ರಗಳನ್ನು ತಿಲಕ್ ವರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, “ಮುಂಬೈ ಪಲ್ಟನ್ ಕುಟುಂಬಕ್ಕೆ ಆತಿಥ್ಯ ನೀಡಿರುವುದು ನನ್ನ ಪಾಲಿಗೆ ಗೌರವದ ಸಂಗತಿ. ಈ ಅದ್ಭುತ ರಾತ್ರಿಯನ್ನು ನಾನು ಮತ್ತು ನನ್ನ ಕುಟುಂಬ ಮರೆಯಲು ಸಾಧ್ಯವಿಲ್ಲ. ಮನೆಗೆ ಬಂದದ್ದಕ್ಕಾಗಿ ಮುಂಬೈ ಪಲ್ಟನ್’ಗೆ ಧನ್ಯವಾದಗಳು” ಎಂದು ಟ್ವಿಟರ್’ನಲ್ಲಿ ತಿಲಕ್ ವರ್ಮಾ ಬರೆದುಕೊಂಡಿದ್ದಾರೆ.

20 ವರ್ಷದ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ ತವರು ಮೈದಾನ ರಾಜೀವ್ ಗಾಂಧಿ ಮೈದಾನದಲ್ಲಿ ಮೊದಲ ಐಪಿಎಲ್ ಪಂದ್ಯವಾಡುತ್ತಿರುವ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ಇಲ್ಲಿಯವರೆಗೆ ಮನೆಯಂಗಳದಲ್ಲಿ ಯಾವುದೇ ಐಪಿಎಲ್ ಪಂದ್ಯಗಳನ್ನಾಡಿಲ್ಲ. ಈ ಬಾರಿಯ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಿಂಚುತ್ತಿರುವ ತಿಲಕ್ ವರ್ಮಾ ಆಡಿರುವ 4 ಪಂದ್ಯಗಳಿಂದ 150ರ ಸ್ಟ್ರೈಕ್’ರೇಟ್’ನಲ್ಲಿ 59ರ ಸರಾಸರಿಯಲ್ಲಿ 177 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Rahul Dravid scuba diving : ಮಾಲ್ದೀವ್ಸ್‌ನಲ್ಲಿ ದ್ರಾವಿಡ್ ಫ್ಯಾಮಿಲಿ, ಸ್ಕೂಬಾ ಡೈವಿಂಗ್ ಸಾಹಸದಲ್ಲಿ ಮಿಂದೆದ್ದ “ದಿ ಗ್ರೇಟ್ ವಾಲ್”

ಇದನ್ನೂ ಓದಿ : Dhoni Vs Kohli : ಇಂದು ತಲಾ Vs ಕಿಂಗ್ ಮುಖಾಮುಖಿ, ಚಿನ್ನಸ್ನಾಮಿಯಲ್ಲಿ ಹೇಗಿದೆ ಗೊತ್ತಾ ದಿಗ್ಗಜ ಬ್ಯಾಟಿಂಗ್ ದರ್ಬಾರ್?

ಇದನ್ನೂ ಓದಿ : Virat Kohli unfollows Sourav Ganguly : ತಾರಕಕ್ಕೇರಿದ ಕಿಂಗ್ Vs ದಾದಾ ಫೈಟ್, ಗಂಗೂಲಿಯನ್ನು ಇನ್‌ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಕೊಹ್ಲಿ

Tilak Varma: Tilak Varma, who threw a huge party for the Mumbai Indians team, is the cricket god who came to the home of the young cricketer.

Comments are closed.