Tokyo Olympics 2020: ಭಾರತದ ಪಿವಿ ಸಿಂಧೂ ಭರ್ಜರಿ ಆರಂಭ : ಇಸ್ರೇಲ್‌ ವಿರುದ್ದ ಭರ್ಜರಿ ಗೆಲುವು

ಟೋಕಿಯೋ : ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧೂ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಗ್ರೂಪ್ ಜೆನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಇಸ್ರೇಲಿನ ಸಿನಿಯಾ ಪೊಲಿಕಾರ್ಪೋವಾ ವಿರುದ್ಧ ಭರ್ಜರಿ ಜಯ ಸಾಧಿಸಿ ಗೆಲುವಿನ ಅಭಿಯಾನ ಆರಂಭಸಿದ್ದಾರೆ.

ಪಂದ್ಯ ಆರಂಭವಾಗುತ್ತಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಪಿ.ವಿ.ಸಿಂಧೂ ಮೊದಲ ಸುತ್ತಿನಲ್ಲಿಯೇ ಭರ್ಜರಿ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಪಿಸಿ ಸಿಂಧೂ ಅವರ ಆಟಕ್ಕೆ ಮಂಡಿಯೂರಿದ ಪೊಲಿಕಾರ್ಪೋವಾ ಎರಡನೇ ಸುತ್ತಿನಲ್ಲಿಯೂ ಪ್ರತಿದಾಳಿ ನಡೆಸಲು ಸಿಂಧೂ ಅವಕಾಶವನ್ನೇ ನೀಡಲಿಲ್ಲ. ಕೇವಲ 28 ನಿಮಿಷಗಳಲ್ಲಿ ಮೊದಲ ಪಂದ್ಯ ಮುಗಿಸಿದ ಸಿಂಧೂ 21-7, 21-10 ಅಂಕಗಳ ಅಂತರದಿಂದ ಭಾರೀ ದೊಡ್ಡ ಜಯ ಸಾಧಿಸಿದರು. ಟೋಕಿಯೋ ಒಲಿಂಪಿಕ್ಸ್ 2020 ರ ಚೊಚ್ಚಲ ಪಂದ್ಯದಲ್ಲಿಯೇ ಗೆಲುವು ಸಾಧಿಸಿದ್ದಾರೆ.

ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧೂ ಮೇಲೆ ಅಪಾರ ನಿರೀಕ್ಷೆಯನ್ನು ಹೊಂದಲಾಗಿದೆ. ಅನುಭವಿ ಆಟಗಾರ್ತಿ ಈ ಬಾರಿಯೂ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ಭಾರತ ಒಂದು ಬೆಳ್ಳಿ ಪದಕ ಪಡೆದುಕೊಂಡಿದ್ದು, ಹಲವು ಕ್ರೀಡಾಪಟುಗಳು ಪದಕದ ನಿರೀಕ್ಷೆಯಿದೆ. ಪುರುಷರ ರೋಯಿಂಗ್​ನಲ್ಲಿ ಭಾರತದ ಅರ್ಜುನ್ ಜತ್ ಮತ್ತು ಅರ್ವಿಂಗ್ ಸಿಂಗ್ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಆದರೆ ಶೂಟಿಂಗ್‌ ವಿಭಾಗದಲ್ಲಿ ಮನು ಭಾಕೆರ್ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ನಿರಾಸೆ ಮೂಡಿಸಿದ್ದಾರೆ.

Comments are closed.