PV Sindhu : ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪಿ.ವಿ. ಸಿಂಧುಗೆ ಭರ್ಜರಿ ಗೆಲುವು

ಟೋಕಿಯೋ : ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧೂ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಂಗಾಂಗ್‌ನ ಚೆಯುಂಗ್ ನ್ಗಾನ್ ಯಿ ವಿರುದ್ದದ ಪಂದ್ಯದಲ್ಲಿ ಸಿಂಧು 21-9, 21-16 ಅಂತರದಿಂದ ಗೆಲುವು ಕಂಡಿದ್ದಾರೆ.

ಆರಂಭದಿಂದಲೂ ಪಿ.ವಿ.ಸಿಂಧೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದಾರೆ. ಮೊದಲ ಸುತ್ತಿನಲ್ಲೇ 21-9 ಅಂತರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಸಿಂಧೂ ಎರಡನೇ ಸುತ್ತಿನಲ್ಲಿಯೂ ಎದುರಾಳಿಗೆ ಪ್ರತಿಸ್ಪರ್ಧೆ ನೀಡಲು ಅವಕಾಶವನ್ನೇ ನೀಡಲಿಲ್ಲ. ಎರನಡೇ ಸುತ್ತಿನಲ್ಲಿ 21-16ರಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಹಾಂಗ್ ಕಾಂಗ್ ಚೆಯುಂಗ್ ನ್ಗಾನ್ ಯಿಗೆ ಸೋಲುನ ರುಚಿ ತೋರಿಸಿದ್ದಾರೆ.

ಗೆಲುವಿನ ಮೂಲಕ ಪಿ.ವಿ.ಸಿಂಧೂ ಪದಕ ಗೆಲ್ಲುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಈಗಾಗಲೇ ಹಲವು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸಿಂಧೂ ಅಕ್ರಮ ಕ್ರಮಾಂಕವನ್ನು ಕಾಯ್ದುಕೊಂಡಿದ್ದಾರೆ.

Comments are closed.