U19 ಕ್ರಿಕೆಟ್ ವಿಶ್ವಕಪ್ 2022 : 5 ನೇ ಬಾರಿಗೆ ವಿಶ್ವಕಪ್‌ ಗೆದ್ದ ಭಾರತ : ಇಂಗ್ಲೆಂಡ್‌ಗೆ ಮತ್ತೆ ನಿರಾಸೆ

ಆಂಟಿಗುವಾ : ಆಲ್‌ರೌಂಡರ್‌ ರಾಜ ಬಾವಾ, ರವಿಕುಮಾರ್‌ ಹಾಗೂ ಶೇಖ್‌ ರಶೀದ್‌ ಅದ್ಬುತ ಆಟದ ನೆರವಿನಿಂದ ಯಶ್‌ ಧುಲ್‌ ನೇತೃತ್ವದ ಭಾರತ ಕಿರಿಯರ ತಂಡ ಇಂಗ್ಲೆಂಡ್‌ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐದನೇ ಬಾರಿಗೆ U19 ಕ್ರಿಕೆಟ್ ವಿಶ್ವಕಪ್ 2022ನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಮಾರ್ಗದರ್ಶನದಲ್ಲಿ ಮೊದಲ ವಿಶ್ವಕಪ್‌ (U19 Cricket World Cup 2022) ಜಯಿಸಿದ ಸಾಧನೆಯನ್ನು ಮಾಡಿದೆ.

ಶನಿವಾರ ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭಿಕ ಆಘಾತವನ್ನು ನೀಡಿದ್ರು. ಪಂದ್ಯದ ಆರಂಭದಿಂದಲೇ ಆರ್ಭಟಿಸೋದಕ್ಕೆ ಶುರು ಮಾಡಿದ್ದ ಭಾರತೀಯ ಬೌಲರ್‌ ರವಿ ಕುಮಾರ್‌ ಹಾಗೂ ರಾಜ್‌ ಬಾವಾ ಇಂಗ್ಲೆಂಡ್‌ ಬ್ಯಾಟ್ಸಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಜೇಮ್ಸ್‌ ರಿವ್‌ 116 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ 95 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದ್ರು. ಉಳಿದಂತೆ ಜೇಮ್ಸ್‌ ಸೇಲ್ಸ್ 34, ಜಾರ್ಜ್‌ ಥೋಮಸ್‌ 27, ರೆಹಾನ್‌ ಅಹ್ಮದ್‌ 10, ಅಲೆಕ್ಸ್‌ ಹಾರ್ಟನ್‌ 10 ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಕೂಡ ಎರಡಂಕಿ ರನ್‌ ದಾಟಲೇ ಇಲ್ಲ. ಅಂತಿಮವಾಗಿ ಇಂಗ್ಲೆಂಡ್‌ ತಂಡ 44.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 189ರನ್‌ಗೆ ಸರ್ವಪತನ ಕಂಡಿತ್ತು.

ಇಂಗ್ಲೆಂಡ್‌ ತಂಡ ನೀಡಿದ್ದ ಸುಲಭ ಗುರಿಯನ್ನು ಬೆನ್ನತ್ತಲು ಹೊರಟ ಟೀಂ ಇಂಡಿಯಾಕ್ಕೆ ಆರಂಭಿಕ ಆಟಗಾರ ರಘುವಂಶಿ ನಿರಾಸೆ ಮೂಡಿಸಿದ್ದಾರೆ. ನಂತರ ಹರ್ನೂರ್‌ ಸಿಂಗ್‌ ಹಾಗೂ ಶೇಖ್‌ ರಶೀದ್‌ ಉತ್ತ ಜೊತೆಯಾಟ ನೀಡಿದ್ರು. ನಂತರದಲ್ಲಿ ಬಂದ ನಾಯಕ ಯಶ್‌ ಧುಲ್‌ ಆಟ ಕೇವಲ 17ರನ್‌ಗಳಿಗೆ ಮಾತ್ರವೇ ಸೀಮಿತವಾಯ್ತು. ಆದರೆ ಶೇಖ್‌ ರಶೀದ್‌ ಹಾಗೂ ನಿಶಾಂತ್‌ ಸಿಂಧೂ ತಲಾ 50 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದ್ರು. ಅಂತಿಮವಾಗಿ ರಾಜ್‌ ಬಾವ ಹಾಗೂ ನಿಶಾಂತ್‌ ಸಿಂಧೂ ಭರ್ಜರಿ ಆಟದ ನೆರವಿನಿಂದ ಟೀಂ ಇಂಡಿಯಾ ಭರ್ಜರಿ ನಾಲ್ಕು ವಿಕೆಟ್‌ಗಳಿಂದ ಗೆಲುವುದು ದಾಖಲಿಸಿದೆ. ಕೋವಿಡ್ -19 ಬಿಕ್ಕಟ್ಟಿನ ನಡುವಲ್ಲೂ ಭಾರತ ಅಂಡರ್‌ -19 ತಂಡ ಅದ್ಬುತ ಸಾಧನೆ ಮಾಡಿರುವುದನ್ನು ಕೋಚ್‌ ವಿವಿಎಸ್‌ ಲಕ್ಷ್ಮಣ್‌ ಶ್ಲಾಘಿಸಿದ್ದಾರೆ. ಭಾರತ 2000, 2008, 2012, ಮತ್ತು 2018ರಲ್ಲಿ U19 ವಿಶ್ವಕಪ್ ಗೆದ್ದಿತ್ತು.

ಇದನ್ನೂ ಓದಿ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡ್ತಾರೆ RCB ಮಾಜಿ ಆಟಗಾರ ಹರ್ಷಲ್ ಪಟೇಲ್

ಇದನ್ನೂ ಓದಿ : ಧವನ್, ಶ್ರೇಯಸ್ ಅಯ್ಯರ್ ಸೇರಿ ಐವರಿಗೆ ಕೋವಿಡ್ ಪಾಸಿಟಿವ್, ಮಯಾಂಕ್ ಅಗರ್ವಾಲ್ ತಂಡಕ್ಕೆ ಸೇರ್ಪಡೆ

( U19 Cricket World Cup 2022: India won first world cup under VVS Laxman)

Comments are closed.