ಸರ್ವರೋಗಗಳಿಗೆ ರಾಮಬಾಣ ವೀಳ್ಯದೆಲೆ : ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ವೀಳ್ಯದ ಎಲೆ

ಪಾನ್​ ಮಸಾಲಾ , ಗುಟ್ಕಾ ತಿನ್ನುವುದನ್ನು (health news betel nut) ಹೊರತುಪಡಿಸಿ ವೀಳ್ಯದೆಲೆಯನ್ನು ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಬಳಸಲಾಗುತ್ತದೆ. ತಂಬಾಕಿನ ಜೊತೆಯಲ್ಲಿ ವೀಳ್ಯದೆಲೆಯ ಸೇವನೆ ಮಾಡುವುದರಿಂದ ಪಾನ್​ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಲಾಗುತ್ತದೆ. ಆದರೆ ಆರ್ಯುವೇದದ ಪ್ರಕಾರ ವೀಳ್ಯದೆಲೆ ಕೂಡ ಒಂದು ಉತ್ತಮ ಔಷಧಿಯಾಗಿದೆ. ಇದು ಅನೇಕ ರೋಗಗಳಿಗೆ ಔಷಧಿಯಾಗಿದೆ. ಬಾಯಿ ಹಾಗೂ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನೀವು ವೀಳ್ಯದೆಲೆಯ ಮೂಲಕ ಸರಿಪಡಿಸಬಹುದಾಗಿದೆ.

ಬಾಯಿ ಹುಣ್ಣುಗಳು ಅಥವಾ ಹೊಟ್ಟೆ ಹುಳುಗಳು ಅಥವಾ ವಾಂತಿ ಮತ್ತು ಲೂಸ್-ಮೋಷನ್‌ನಂತಹ ಸಮಸ್ಯೆಗಳಿರಲಿ, ವೀಳ್ಯದೆಲೆಯ ಬಳಕೆಯು ಎಲ್ಲದರಲ್ಲೂ ಬಹಳ ಪ್ರಯೋಜನಕಾರಿಯಾಗಿದೆ. ವೀಳ್ಯದೆಲೆಯ ಇಂತಹ ಕೆಲವು ಔಷಧೀಯ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ :

ಬಾಯಿ ಹುಣ್ಣು : ಬಾಯಿ ಹುಣ್ಣಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಇದ್ದರೆ ಒಣ ಶುಂಠಿ, ತೆಂಗಿನಕಾಯಿ, ಕಾಳು ಮೆಣಸು, ಗೋಮೂತ್ರ ಮತ್ತು ವೀಳ್ಯದೆಲೆಯೊಂದಿಗೆ ನೀರು ಹಾಕಿ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಹುಣ್ಣು ಉಪಶಮನವಾಗುತ್ತದೆ. ಇದಲ್ಲದೆ ವೀಳ್ಯದೆಲೆ ಮತ್ತು ದೊಡ್ಡ ಏಲಕ್ಕಿ ಧೂಪವನ್ನು ಜೇನುತುಪ್ಪದೊಂದಿಗೆ ಬೆರೆಸಿ ಹುಣ್ಣುಗಳ ಮೇಲೆ ಲೇಪಿಸುವುದು ಸಹ ಉತ್ತಮ ಪರಿಹಾರವನ್ನು ನೀಡುತ್ತದೆ.

ಹೊಟ್ಟೆ ನೋವು : ವೀಳ್ಯದೆಲೆಯ ಕಷಾಯ ಮಾಡಿ ಕುಡಿದರೆ ಹೊಟ್ಟೆ ಹುಳುಗಳು ಮಾಯವಾಗುತ್ತವೆ. ಇದಲ್ಲದೇ ವೀಳ್ಯದೆಲೆಯ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಹುಳುಗಳೂ ನಿವಾರಣೆಯಾಗಿ ಹೊಟ್ಟೆಯಲ್ಲಿ ಶೇಖರವಾದ ವಿಷದ ಅಂಶಗಳೆಲ್ಲವೂ ಮಲದ ಮೂಲಕ ಹೊರಹೋಗುತ್ತದೆ.

ವಾಂತಿ : ಒಂದರಿಂದ ಮೂರು ಗ್ರಾಂ ವೀಳ್ಯದೆಲೆ ಮತ್ತು ಅರಿಶಿಣ ಪುಡಿಯನ್ನು ಸಕ್ಕರೆಯೊಂದಿಗೆ ಸೇವಿಸಿದರೆ ವಾಂತಿ ನಿಲ್ಲುತ್ತದೆ. ಹಾಗೆಯೇ ವೀಳ್ಯದೆಲೆಯನ್ನು ನೀರಿನಲ್ಲಿ ಬೇವಿನ ತೊಗಟೆಯೊಂದಿಗೆ ಕುದಿಸಿ, ಸೋಸಿದ ನಂತರ ಕುಡಿಯುವುದರಿಂದಲೂ ವಾಂತಿ ಸಮಸ್ಯೆಗೆ ಉತ್ತಮ ಪರಿಹಾರ ದೊರೆಯುತ್ತದೆ.

ಇದನ್ನೂ ಓದಿ : ಎಚ್​ಡಿಎಫ್​ಸಿ ಬ್ಯಾಂಕ್ ಗ್ರಾಹಕರಿಗೆ ಒಳ್ಳೆ ಸುದ್ದಿ; ಉಳಿತಾಯ ಖಾತೆ ಬಡ್ಡಿ ದರ ಪರಿಷ್ಕರಣೆ

ಇದನ್ನು ಓದಿ : Vastu Tips For Marriage : ಮದುವೆಯ ವಯಸ್ಸು ಮೀರಿದರೂ ಸಂಗಾತಿಯು ಸಿಗುತ್ತಿಲ್ಲವೇ..? ಹಾಗಾದರೆ ಅನುಸರಿಸಿ ಈ ವಾಸ್ತುಟಿಪ್ಸ್​

ಇದನ್ನೂ ಓದಿ : ತಮಿಳುನಾಡಲ್ಲಿ ಹುಟ್ಟಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬದುಕಿನ ಕುತೂಹಲಕರ ಮಾಹಿತಿ

health news betel nut or supari benefits for health

Comments are closed.