Virat Kohli : ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World cup 2024) ಓಪನರ್ ಆಗಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಸತತ 4ನೇ ಪಂದ್ಯದಲ್ಲೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಬ್ರಿಡ್ಜ್’ಟೌನ್’ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಗುರುವಾರ ನಡೆದ ಮೊದಲ ಸೂಪರ್-8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿ ಔಟಾಗಿದ್ದರು.

ಲೀಗ್ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಕೊಹ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಐರ್ಲೆಂಡ್ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ 1 ರನ್ನಿಗೆ ಔಟಾಗಿದ್ದ ವಿರಾಟ್ ಕೊಹ್ಲಿ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಔಟಾಗಿದ್ದರು. ಕ್ರಿಕೆಟ್ ಶಿಶು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಐಸಿಸಿ ಟಿ20 ವಿಶ್ವಕಪ್’ನಲ್ಲಿ ಕೊಹ್ಲಿ ಗಳಿಸಿರುವ ರನ್
01 Vs ಐರ್ಲೆಂಡ್ (ಲೀಗ್ ಪಂದ್ಯ)
04 Vs ಪಾಕಿಸ್ತಾನ (ಲೀಗ್ ಪಂದ್ಯ)
00 Vs ಅಮೆರಿಕ (ಲೀಗ್ ಪಂದ್ಯ)
24 Vs ಅಫ್ಘಾನಿಸ್ತಾನ (ಸೂಪರ್-8 ಪಂದ್ಯ)

ಟಿ20 ವಿಶ್ವಕಪ್’ನ ನಾಲ್ಕು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿರುವ ವಿರಾಟ್ ಕೊಹ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲೂ ವಿಫಲರಾಗಿದ್ದಾರೆ.
ಇದನ್ನೂ ಓದಿ : Smriti Mandhana: ದ್ರಾವಿಡ್ ಕೊಟ್ಟ ಬ್ಯಾಟ್‌ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಳು Queen Of Cricket
ಟಿ20 ವಿಶ್ವಕಪ್’ನಲ್ಲಿ ಭಾರತದ ಆರಂಭಿಕ ಜೊತೆಯಾಟ
22 Vs ಐರ್ಲೆಂಡ್ (ಲೀಗ್ ಪಂದ್ಯ)
12 Vs ಪಾಕಿಸ್ತಾನ (ಲೀಗ್ ಪಂದ್ಯ)
01 Vs ಅಮೆರಿಕ (ಲೀಗ್ ಪಂದ್ಯ)
11 Vs ಅಫ್ಘಾನಿಸ್ತಾನ (ಸೂಪರ್-8 ಪಂದ್ಯ)
ವಿರಾಟ್ ಕೊಹ್ಲಿ ಅವರಷ್ಟೇ ಅಲ್ಲ, ರೋಹಿತ್ ಶರ್ಮಾ ಕೂಡ ಎಡವಿದ್ದಾರೆ. ಐರ್ಲೆಂಡ್ ವಿರುದ್ಧ ಅಜೇಯ 52 ರನ್ ಬಾರಿಸಿದ್ದ ರೋಹಿತ್ ನಂತರ ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್ 24. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆರಂಭಿಕ ಜೋಡಿಯನ್ನು ಬದಲಿಸಬೇಕೆಂದು ಕ್ರಿಕೆಟ್ ಪ್ರಿಯರು ಆಗ್ರಹಿಸುತ್ತಿದ್ದಾರೆ. ರೋಹಿತ್ ಶರ್ಮಾ ಜೊತೆ ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸಿ ವಿರಾಟ್ ಕೊಹ್ಲಿ ಅವರನ್ನು ಅವರ ನೆಚ್ಚಿನ 3ನೇ ಕ್ರಮಾಂಕದಲ್ಲಿ ಆಡಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ : ಮುಂದಿನ ತಿಂಗಳು ಟೀಮ್ ಇಂಡಿಯಾಗೆ ಹೊಸ ಕೋಚ್ : ಗೌತಮ್ ಗಂಭೀರ್ ಅಲ್ಲ, ವಿವಿಎಸ್ ಲಕ್ಷ್ಮಣ್
ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಭಾರತ, ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ತನ್ನ 2ನೇ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಜೂನ್ 24ರಂದು ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ಸ್ಟೇಡಿಯಂನಲ್ಲಿ ನಡೆಯುವ ಅಂತಿಮ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಎರಡು ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಲಾ ಎರಡು ತಂಡಗಳು ಸೆಮಿಫೈನಲ್’ಗೆ ಅರ್ಹತೆ ಪಡೆಯಲಿವೆ.
ಇದನ್ನೂ ಓದಿ : ಅಂದು ಬ್ರೆಟ್ ಲೀ , ಇಂದು ಪ್ಯಾಟ್ ಕುಮಿನ್ಸ್ ಹ್ಯಾಟ್ರಿಕ್, ಇದು ಭಾರತ ವಿಶ್ವಕಪ್ ಗೆಲ್ಲುವ ಸೂಚನೆನಾ ?
Virat Kohli Again Fail ICC T20 World cup 2024 Super -8 India Vs Bangladesh