ಲಂಡನ್: Virat Kohli : ಭಾರತ ಮತ್ತು ಆಸ್ಟ್ರೇಲಿಯಾ (Indis Vs Australia) ತಂಡಗಳ ಮಧ್ಯೆ ಲಂಡನ್’ನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯದ ಮೊದಲ ದಿನವೇ ಕಾಂಗರೂಗಳು ಮೇಲುಗೈ ಸಾಧಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡ ಪ್ರಥಮ ದಿನದಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರ ಆರಂಭದಲ್ಲಿ ಫಲ ಕೊಟ್ಟಿತು. 76 ರನ್’ಗಳ ಒಳಗೆ ಕಾಂಗರೂ ಪಡೆಯ ಅಗ್ರ ಮೂವರು ಆಟಗಾರರನ್ನು ಔಟ್ ಮಾಡುವಲ್ಲಿ ಭಾರತೀಯ ಬೌಲರ್’ಗಳು ಯಶಸ್ವಿಯಾದರು.
ಆದರೆ 4ನೇ ವಿಕೆಟ್’ಗೆ ಜೊತೆಗೂಡಿದ ಮಾಜಿ ನಾಯಕ ಸ್ಟೀವನ್ ಸ್ಮಿತ್ (ಅಜೇಯ 95) ಮತ್ತುಟ್ರಾವಿಸ್ ಹೆಡ್ (ಅಜೇಯ 146) ಅಮೋಘ ಜೊತೆಯಾಟದ ಮೂಲಕ ಭಾರತಕ್ಕೆ ಸಡ್ಡು ಹೊಡೆದು ನಿಂತಿದ್ದಾರೆ. ಈ ಜೋಡಿ ಮುರಿಯದ 4ನೇ ವಿಕೆಟ್’ಗೆ ಈಗಾಗಲೇ 251 ರನ್’ಗಳ ಜೊತೆಯಾಟವಾಡಿ ಆಸ್ಟ್ರೇಲಿಯಾಗೆ ಆಸರೆಯಾಗಿ ನಿಂತಿದೆ.
25 ಓವರ್’ಗಳ ಒಳಗೆ 3 ವಿಕೆಟ್ ಕಬಳಿಸಿದ್ದ ಭಾರತೀಯ ಬೌಲರ್’ಗಳು ನಂತರದ 60 ಓವರ್’ಗಳಲ್ಲಿ ಒಂದೂ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಇದು ಬೌಲರ್’ಗಳ ವೈಫಲ್ಯದ ಜೊತೆ ರೋಹಿತ್ ಶರ್ಮಾ ಅವರ ನಾಯಕತ್ವದ ವೈಫಲ್ಯವೂ ಹೌದು ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ನಾಯಕತ್ವವನ್ನು ಭಾರತ ತಂಡ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಕ್ರಿಕೆಟ್ ಫ್ಯಾನ್ಸ್ ನೆನಪು ಮಾಡಿಕೊಳ್ಳುತ್ತಿದ್ದಾರೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕರಾಗಿದ್ದಾಗ ಇಂತಹ ಸಾಕಷ್ಟು ಸನ್ನಿವೇಶಗಳಲ್ಲಿ ತಂಡಕ್ಕೆ ಕೆಚ್ಚು, ಕಿಚ್ಚು ತುಂಬಿ ಭಾರತ ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಕಾರಣರಾಗಿದ್ದರು. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 2018ರಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿತ್ತು. 2021ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2-1ರ ಮುನ್ನಡೆ ಸಾಧಿಸಿತ್ತು. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಅಮೋಘ ನಾಯಕತ್ವದ ಮೂಲಕ ಭಾರತಕ್ಕೆ ಕೊಹ್ಲಿ ಗೆಲುವು ತಂದುಕೊಟ್ಟದ್ದನ್ನು ಕ್ರಿಕೆಟ್ ಪ್ರಿಯರು ಈಗ ಸ್ಮರಿಸುತ್ತಿದ್ದಾರೆ. ಅಂತಹ ನಾಯಕತ್ವದ ಗುಣ ರೋಹಿತ್ ಶರ್ಮಾ ಅವರಲ್ಲಿ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Dinesh Karthik : ಆರ್‌ಸಿಬಿಯಲ್ಲಿ ಕ್ರಿಕೆಟ್ ಪುನರ್ಜನ್ಮ ಆರ್‌ಸಿಬಿಯಲ್ಲೇ ಖೇಲ್ ಖತಂ.. ಮತ್ತೆ ಕಾಮೆಂಟೇಟರ್ ಅವತಾರದಲ್ಲಿ ಡಿಕೆ !
ಇದನ್ನೂ ಓದಿ : Rahul Dravid : ಆರ್.ಅಶ್ವಿನ್ ಬೌಲಿಂಗ್ ರಹಸ್ಯವನ್ನು ಕನ್ನಡದಲ್ಲೇ ಬಿಚ್ಚಿಟ್ಟ ಕೋಚ್ ರಾಹುಲ್ ದ್ರಾವಿಡ್
World Cricket won't see another Test captain like Virat Kohli. The greatest ever. pic.twitter.com/AFscv55Tgs
— Johns. (@Cric_crazyjohns) June 7, 2023
We lost virat kohli. pic.twitter.com/8JEZHbbZmP
— Kia. (@Kohlis_Girl) June 8, 2023
.@DineshKarthik on Virat Kohli Captaincy. pic.twitter.com/pz9MV8tTiP
— CricketGully (@thecricketgully) June 7, 2023
Virat Kohli Cricket fans Demand Virat Kohli should have been the captain in the WTC final ind vs aus