ಸೋಮವಾರ, ಏಪ್ರಿಲ್ 28, 2025
HomeSportsCricketVirat Kohli doubtful : ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಕೊಹ್ಲಿ ಡೌಟ್ !

Virat Kohli doubtful : ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಕೊಹ್ಲಿ ಡೌಟ್ !

- Advertisement -

ಲಂಡನ್: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli doubtful for 2nd ODI) ಅವರ ಟೈಮ್ ಯಾಕೋ ಸರಿಯಿದ್ದಂತೆ ಕಾಣುತ್ತಿಲ್ಲ. ಇಂಗ್ಲೆಂಡ್ ವಿರುದ್ಧ ಟೆಸ್ಟ್ , ಟಿ20 ಸರಣಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದ ವಿರಾಟ್ ಕೊಹ್ಲಿ, ಗಾಯದ ಕಾರಣ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು.

ತೊಡೆಸಂಧು (Groin Injury) ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ, ಗುರುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲೂ ಆಡುವುದು ಅನುಮಾನ. ಕೊಹ್ಲಿ ಫಿಟ್ನೆಸ್ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಬಲ್ಲಮೂಲಗಳ ಪ್ರಕಾರ ಕೊಹ್ಲಿ ಇನ್ನೂ ಸಂಪೂರ್ಣ ವಾಗಿ ಚೇತರಿಸಿಕೊಳ್ಳದ ಕಾರಣ 2ನೇ ಏಕದಿನ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.

ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಆಡಿದ್ದ ಭಾರತ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್”ನಲ್ಲಿ ನಡೆಯಲಿರುವ ದ್ವಿತೀಯ ಏಕದಿನ ಪಂದ್ಯವನ್ನು ಗೆದ್ದರೆ ಏಕದಿನ ಸರಣಿಯೂ ರೋಹಿತ್ ಶರ್ಮಾ ಬಳಗದ ಕೈವಶವಾಗಲಿದೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1ರ ಅಂತರದಲ್ಲಿ ಗೆದ್ದುಕೊಂಡಿತ್ತು. ಟಿ20 ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ವಿಫಲರಾಗಿದ್ದ ಕೊಹ್ಲಿ, ಕೇವಲ 12 ರನ್ ಗಳಿಸಿದ್ದರು. ಅದಕ್ಕೂ ಮೊದಲು ನಡೆದಿದ್ದ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದ್ದ ಕೊಹ್ಲಿ, ಎರಡೂ ಇನ್ನಿಂಗ್ಸ್’ಗಳಿಂದ ಕೇವಲ 31 ರನ್ ಕಲೆ ಹಾಕಿದ್ದರು.

Virat Kohli doubtful: ಎರಡೂವರೆ ವರ್ಷಗಳಿಂದ ಕೊಹ್ಲಿ ಶತಕ ಬಾರಿಸಿಲ್ಲ:

ವೃತ್ತಿಜೀವನದ ಅತ್ಯಂತ ಕಠಿಣ ಸನ್ನಿವೇಶವನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಶತಕ ಬಾರಿಸದೆ 32 ತಿಂಗಳುಗಳೇ ಕಳೆದಿವೆ. 2019ರ ನವೆಂಬರ್”ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಕಿಂಗ್ ಕೊಹ್ಲಿ ಬ್ಯಾಟ್’ನಿಂದ ಒಂದೂ ಶತಕ ಸಿಡಿದಿಲ್ಲ.

ಇದನ್ನೂ ಓದಿ : 20 Years for NatWest Final : ದಾದಾ ಶರ್ಟ್ ಬಿಚ್ಚಿ ಅಬ್ಬರಿಸಿದ್ದ ಕ್ಷಣಕ್ಕೆ.., ಭಾರತೀಯ ಕ್ರಿಕೆಟ್’ನ ಮಹೋನ್ನತ ಗೆಲುವಿಗೆ ತುಂಬಿತು 20 ವರ್ಷ

ಇದನ್ನೂ ಓದಿ : Rohit Sharma and Shikhar Dhawan : ಭಾರತೀಯ ಕ್ರಿಕೆಟ್‌ನ ಮತ್ತೊಂದು ಭಲೇ ಜೋಡಿ, ಸಚಿನ್ -ದಾದಾ ದಾಖಲೆ ಮುರೀತಾರ ರೋಹಿತ್-ಶಿಖರ್ ?

Virat Kohli doubtful for India Vs England 2nd ODI

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular