Virat Kohli instagram post: ಒಂದು ಇನ್’ಸ್ಟಾಗ್ರಾಂ ಪೋಸ್ಟ್’ಗೆ 11.45 ಕೋಟಿ, ವರ್ಷಕ್ಕೆ 300 ಕೋಟಿ; ಇದೆಲ್ಲಾ ಸುಳ್ಳು ಅಂದಿದ್ದೇಕೆ ಕಿಂಗ್ ಕೊಹ್ಲಿ?

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli instagram post) ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ. ಅಷ್ಟೇ ಅಲ್ಲ, ಸಮಕಾಲೀನ ಕ್ರಿಕೆಟ್’ನ ಅತ್ಯಂತ ದೊಡ್ಡ ಬ್ರ್ಯಾಂಡ್ ಕೂಡ ಹೌದು. ಆಟದಲ್ಲಷ್ಟೇ ಅಲ್ಲ, ಬ್ರ್ಯಾಂಡ್’ನಲ್ಲೂ ವಿರಾಟ್ ಕೊಹ್ಲಿ ನಂ.1. ಈ ವಿಚಾರದಲ್ಲಿ ಅವರನ್ನು ಮೀರಿಸುವ ಮತ್ತೊಬ್ಬ ಆಟಗಾರ ಜಗತ್ತಿನಲ್ಲೇ ಇಲ್ಲ. 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ, ಈಗ ನೂರಾರು ಕೋಟಿಗಳ ಒಡೆಯ.

ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯ ಹೇಗಿದೆ ಅಂದ್ರೆ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಒಂದೊಂದು ಪೋಸ್ಟ್’ಗೆ ಕೋಟಿ ಕೋಟಿ ಹಣ ಪಡೆಯುತ್ತಾರೆ. ಅದರಲ್ಲೂ ಕೊಹ್ಲಿ ಅವರ ಇನ್’ಸ್ಟಾಗ್ರಾಂ ಪೋಸ್ಟ್’ಗಳಿಗೆ ಭಾರೀ ಡಿಮ್ಯಾಂಡ್ ಇದ್ದು, ಇದೇ ಕಾರಣದಿಂದ ಇನ್’ಸ್ಟಾಗ್ರಾಂನಲ್ಲಿ ಕೊಹ್ಲಿ ಯಾವುದಾದರೂ ಜಾಹೀರಾತನ್ನು ಪ್ರಕಟಿಸಿದರೆ, ಅದಕ್ಕಾಗಿ ಕೊಹ್ಲಿ 11.45 ಕೋಟಿ ರೂಪಾಯಿ ಜೇಬಿಗಿಳಿಸುತ್ತಾರೆ. ಈ ಮಾಹಿತಿಯನ್ನು ಹಾಪರ್ HQ (Hopper HQ) ಸಂಸ್ಥೆ ಬಹಿರಂಗ ಪಡಿಸಿದೆ.

ಜೂನ್’ನಲ್ಲಿ ಬಿಡುಗಡೆಯಾಗಿದ್ದ ಮಾಹಿತಿ ಪ್ರಕಾರ ವಿರಾಟ್ ಕೊಹ್ಲಿ ತಮ್ಮ ಇನ್’ಸ್ಟಾಗ್ರಾಂ ಪೋಸ್ಟ್’ಗೆ 8.9 ಕೋಟಿ ರೂಪಾಯಿ ಪಡೆಯುತ್ತಿದ್ದರು. ಕೇವಲ ಒಂದೇ ತಿಂಗಳಲ್ಲಿ ಕೊಹ್ಲಿ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚಿದ್ದು, ಈಗ 11.45 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ನಿಜವಿಲ್ಲ ಎಂದು ಸ್ವತಃ ವಿರಾಟ್ ಕೊಹ್ಲಿ ಅವರೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಟ್ವಿಟರ್’ನಲ್ಲಿ ವಿರಾಟ್ ಕೊಹ್ಲಿ ಪ್ರಕಟಿಸುವ ಪ್ರತೀ ಜಾಹೀರಾತಿಗೆ 2.5 ಕೋಟಿ ರೂಪಾಯಿ ಪಡೆಯುತ್ತಾರೆ. ಸ್ಟಾಕ್ ಗ್ರೋ (StockGro) ಸಂಸ್ಥೆ ನೀಡಿರುವ ಮಾಹಿತಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿ ಮೌಲ್ಯ 1050 ಕೋಟಿ ರೂಪಾಯಿ. ಬಿಸಿಸಿಐನ A+ಗ್ರೇಡ್ ಆಟಗಾರನಾಗಿರುವ ಕೊಹ್ಲಿ ಇದಕ್ಕಾಗಿ ವಾರ್ಷಿಕ 7 ಕೋಟಿ ಪಡೆಯುತ್ತಾರೆ. ಇನ್ನು ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಾರ್ಷಿಕ 15 ಕೋಟಿ ರೂ. ಸಂಭಾವನೆಯನ್ನು ಕೊಹ್ಲಿ ಅವರಿಗೆ ನೀಡುತ್ತಿದೆ. ಇನ್ನು ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ , ಏಕದಿನ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ 3 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದನ್ನೂ ಓದಿ : Prithvi Shaw: ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ಸಿಡಿಲಬ್ಬರದ ದ್ವಿಶಥಕ ಬಾರಿಸಿದ ಪೃಥ್ವಿ ಶಾ

Virat Kohli instagram post: 11.45 crore per ‘Instagram post’, 300 crore per year; Why is this all a lie, King Kohli?

Comments are closed.