ಮುಂಬೈ: ಕ್ರಿಕೆಟ್’ನಿಂದ ಬಿಡುವು ಪಡೆದಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಯುರೋಪ್ ಪ್ರವಾಸ ಮುಗಿಸಿ ಮುಂಬೈಗೆ ಮರಳಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಜೊತೆ ಯುರೋಪ್ ಪ್ರವಾಸದಲ್ಲಿದ್ದ ವಿರಾಟ್ ಕೊಹ್ಲಿ (Virat Kohli return to Mumbai), ಸುದೀರ್ಘ ಪ್ರವಾಸ ಮುಗಿಸಿ ತವರಿಗೆ ವಾಪಸ್ಸಾಗಿದ್ದಾರೆ.
ವಿರಾಟ್ ದಂಪತಿ ಮತ್ತು ಪುತ್ರಿ ಮುಂಬೈನ ಛತ್ರಪತಿ ಶಿವಾಜಿ ಇಂಟರ್’ನ್ಯಾಷನಲ್ ಏರ್’ಪೋರ್ಟ್’ಗೆ ಬಂದಿಳಿಸಿದರು. ಈ ವೇಳೆ ವಿರುಷ್ಕಾ ದಂಪತಿ ವಿಮಾನ ನಿಲ್ದಾಣದಲ್ಲಿದ್ದ ಫೋಟೋಗ್ರಾಫರ್’ಗಳಿಗೆ ಪೋಸ್ ಕೊಟ್ಟರು.
ಪತ್ನಿ ಅನುಷ್ಕಾ (Anushka Sharma) ಜೊತೆ ಫೋಟೋಗ್ರಾಫರ್”ಗಳಿಗೆ ಪೋಸ್ ಕೊಟ್ಟ ವಿರಾಟ್ ಕೊಹ್ಲಿ, ಪುತ್ರಿಯ ಫೋಟೋ ಕ್ಲಿಕ್ಕಿಸದಂತೆ ಮನವಿ ಮಾಡಿದರು. ಕಳೆದ ಇಂಗ್ಲೆಂಡ್ ಪ್ರವಾಸದ ವೈಫಲ್ಯದ ನಂತರ ವಿರಾಟ್ ಕೊಹ್ಲಿ ಪತ್ನಿ ಮತ್ತು ಮಗಳೊಂದಿಗೆ (Virak Kohli Daughter Vamika) ಯುರೋಪ್ ಪ್ರವಾಸಕ್ಕೆ ತೆರಳಿದ್ದರು. ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಆಗಸ್ಟ್ 18ರಿಂದ 22ರವರೆಗೆ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲೂ ಆಡುತ್ತಿಲ್ಲ.
ಇದೇ ತಿಂಗಳ ಅಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್’ನಲ್ಲಿ ಆರಂಭವಾಗಿರುವ ಏಷ್ಯಾಕಪ್ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆ. ಆಗಸ್ಟ್ 28ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಏಷ್ಯಾ ಕಪ್ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Shreyas Iyer : ಶ್ರೇಯಸ್ ಅಯ್ಯರ್‌ಗೆ ಪದೇ ಪದೇ ಅವಕಾಶದ ಗುಟ್ಟೇನು..? ಮುಂಬೈ ಲಾಬಿನಾ..? ದ್ರಾವಿಡ್ ಇದ್ದೂ ಹೀಗಾದ್ರೆ ಹೇಗೆ..?
ಇದನ್ನೂ ಓದಿ : India Vs West Indies T20 : ಒಂದೇ ಮ್ಯಾಚಲ್ಲಿ 3 ಅರ್ಷದೀಪ್’ಗಳು, ಇದು ಹೇಗೆ ಸಾಧ್ಯ ?
ಇದನ್ನೂ ಓದಿ : Heath Davis : ಸಲಿಂಗ ಕಾಮಿಯಾಗಿದ್ದ ನ್ಯೂಜಿಲೆಂಡ್‌ನ ಈ ಟೆಸ್ಟ್ ಕ್ರಿಕೆಟರ್
Virat Kohli return to Mumbai, What Kohli said to those who clicked his daughter’s photo