ದುಬೈ: (Asia cup 2022 ind vs Afg) 1020 ದಿನಗಳು. ಅಂದ್ರೆ 2 ವರ್ಷ 9 ತಿಂಗಳು, 16 ದಿನ. ಒಟ್ಟು 33 ತಿಂಗಳು, 16 ದಿನ. 145 ವಾರ, ಐದು ದಿನ… ಸಾವಿರ ದಿನಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. 1020 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಶತಕ (Virat Kohli T20I Century) ಬಾರಿಸಿದ್ದಾರೆ.
ಏಷ್ಯಾ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ (Asia Cup 2022) ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ. 2019ರ ನವೆಂಬರ್ 23ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಶತಕ ಬಾರಿಸಿದ ನಂತರ ಕೊಹ್ಲಿ ಅವರ ಬ್ಯಾಟ್’ನಿಂದ ಶತಕ ಸಿಡಿದಿರಲಿಲ್ಲ. ಇದೀಗ 34 ತಿಂಗಳುಗಳ ನಂತರ ಶತಕ ಬಾರಿಸಿ ಅಬ್ಬರಿಸಿರುವ ವಿರಾಟ್ ಕೊಹ್ಲಿ, ಟೀಕಾಕಾರರ ಬಾಯಿ ಮುಚ್ಟಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭಿಕನಾಗಿ ಅಖಾಡಕ್ಕಿಳಿದು ಅಕ್ಷರಶಃ ಅಬ್ಬರಿಸಿದ ಕಿಂಗ್ ಕೊಹ್ಲಿ ಕೇವಲ 61 ಎಸೆತಗಳಲ್ಲಿ 12 ಬೌಂಡರಿಗಳು ಹಾಗೂ 6 ಸಿಕ್ಸರ್’ಗಳ ನೆರವಿನಿಂದ ಅಜೇಯ 122 ರನ್ ಬಾರಿಸಿ ಶತಕದ ಬರ ನೀಗಿಸಿಕೊಂಡರು. ವಿಶೇಷ ಏನೆಂದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ವಿರಾಟ್ ಕೊಹ್ಲಿ ಸಿಡಿಸಿದ ಮೊದಲ ಶತಕವೂ ಹೌದು.
Virat Kohli while returning to the pavilion after his unbeaten century: "Abhi Hai Cricket Baaki"#ViratKohli #ViratKohli𓃵 #INDvsAFG pic.twitter.com/5Ogqo9KMSA
— GOPAL JIVANI (@Haa_Haa_Medico) September 8, 2022
70ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ನಂತರ 71ನೇ ಶತಕಕ್ಕಾಗಿ ಕೊಹ್ಲಿ 1020 ದಿನ ಕಾಯುವಂತಾಗಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ವಿರಾಟ್ ಕೊಹ್ಲಿ ಅವರ ಯುಗ ಅಂತ್ಯವಾಯಿತು ಎಂಬರ್ಥದಲ್ಲಿ ಕ್ರಿಕೆಟ್ ಪಂಡಿತರು ಮಾತನಾಡಿದ್ದರು. ಅವರಿಗೆಲ್ಲಾ ಕೊಹ್ಲಿ ಬ್ಯಾಟ್’ನಿಂದಲೇ ಉತ್ತರ ಕೊಟ್ಟಿದ್ದಾರೆ. ಕೊಹ್ಲಿ ಅವರ ಶತಕಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಭಾರತ, ಪಾಕಿಸ್ತಾನ ಸೇರಿದಂತೆ ಕ್ರಿಕೆಟ್ ಜಗತ್ತಿನ ಹಲವರು King is Back ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Arshadeep Singh : ಅರಬ್ ನಾಡಿನಲ್ಲಿ ಅರ್ಷದೀಪ್ ಸಿಂಗ್‌ರನ್ನು ದೇಶದ್ರೋಹಿ ಎಂದು ಹೀಯಾಳಿಸಿದ ಭಾರತೀಯ
ಇದನ್ನೂ ಓದಿ : KL Rahul Captain : ಅಫ್ಘಾನಿಸ್ತಾನ ವಿರುದ್ಧ ರಾಹುಲ್ ನಾಯಕ; ಅದ್ವಿತೀಯ ದಾಖಲೆ ಬರೆದ ಕನ್ನಡಿಗ
Virat Kohli Scores His Maiden T20I Century After 1020 Days international match Asia cup 2022 ind vs Afg