Virat Kohli Vs Sachin Tendulkar : 71ನೇ ಶತಕ ಬಾರಿಸಲು ತೆಗೆದುಕೊಂಡದ್ದು 1020 ದಿನ.. ಆದರೂ ಸಚಿನ್ ತೆಂಡೂಲ್ಕರ್‌ಗಿಂತ ಸ್ಪೀಡು ಕಿಂಗ್ ಕೊಹ್ಲಿ

ದುಬೈ: (Virat Kohli Vs Sachin Tendulkar) ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಕೊಹ್ಲಿಯಲ್ಲೇ ಸುದ್ದಿ, ಕಿಂಗ್ ಕೊಹ್ಲಿಯದ್ದೇ ಸದ್ದು. ಬರೋಬ್ಬರಿ 1020 ದಿನಗಳ ಕಾಯುವಿಕೆಯ ನಂತರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿದ್ದಾರೆ. ಏಷ್ಯಾ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ (Asia Cup 2022) ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ 71ನೇ ಶತಕ ಸಿಡಿಸಿದ್ದಾರೆ. 71ನೇ ಶತಕಕ್ಕಾಗಿ ಕೊಹ್ಲಿ 1020 ದಿನ ಕಾದರೂ, ಈ ಹಾದಿಯಲ್ಲಿ ಕಿಂಗ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗಿಂತ ಸ್ಪೀಡು.

https://twitter.com/jitendra4149/status/1568071564587077639?s=20&t=X8gIKH5rTxcJztjqY9gA0Q

ವಿರಾಟ್ ಕೊಹ್ಲಿ ತಮ್ಮ 522ನೇ ಅಂತಾರಾಷ್ಟ್ರೀಯ ಇನ್ನಿಂಗ್ಸ್’ನಲ್ಲಿ 71ನೇ ಶತಕ ಬಾರಿಸಿದ್ದಾರೆ. 71 ಶತಕಗಳನ್ನು ಬಾರಿಸಲು ಸಚಿನ್ ತೆಂಡೂಲ್ಕರ್ ತೆಗೆದುಕೊಂಡ ಇನ್ನಿಂಗ್ಸ್’ಗಳ ಸಂಖ್ಯೆ 523. ಶತಕಕ್ಕಾಗಿ ಸಾವಿರಕ್ಕೂ ಹೆಚ್ಚು ದಿನ ಕಾಯುವಂತಾದರೂ ಸಚಿನ್ ಅವರಿಗಿಂತ ಕೊಹ್ಲಿ ವೇಗವಾಗಿ 71 ಅಂತಾರಾಷ್ಟ್ರೀಯ ಶತಕಗಳನ್ನು ಪೂರ್ತಿಗೊಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದು ಅವರು 71 ಅಂತಾರಾಷ್ಟ್ರೀಯ ಶತಕಗಳಿಗಾಗಿ 652 ಇನ್ನಿಂಗ್ಸ್’ಗಳನ್ನು ಆಡಿದ್ದಾರೆ.

ಅತೀ ವೇಗವಾಗಿ 71 ಅಂತಾರಾಷ್ಟ್ರೀಯ ಶತಕ (Virat Kohli Vs Sachin Tendulkar)

ವಿರಾಟ್ ಕೊಹ್ಲಿ: 522 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್: 523 ಇನ್ನಿಂಗ್ಸ್
ರಿಕಿ ಪಾಂಟಿಂಗ್: 652 ಇನ್ನಿಂಗ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದವರ ಸಾಲಿನಲ್ಲಿ ವಿರಾಟ್ ಕೊಹ್ಲಿ ಈಗ 2ನೇ ಸ್ಥಾನಕ್ಕೇರಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ ಎರಡನೇ ಸ್ಥಾನ ಹಾಗೂ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳು (ಟಾಪ್ 10)

100: ಸಚಿನ್ ತೆಂಡೂಲ್ಕರ್ (ಭಾರತ), 782 ಇನ್ನಿಂಗ್ಸ್
71: ವಿರಾಟ್ ಕೊಹ್ಲಿ (ಭಾರತ), 522 ಇನ್ನಿಂಗ್ಸ್.
71: ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), 668 ಇನ್ನಿಂಗ್ಸ್
63: ಕುಮಾರ ಸಂಗಕ್ಕಾರ (ಶ್ರೀಲಂಕಾ), 666 ಇನ್ನಿಂಗ್ಸ್
62: ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ), 617 ಇನ್ನಿಂಗ್ಸ್
55: ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ), 437 ಇನ್ನಿಂಗ್ಸ್
54: ಮಹೇಲ ಜಯವರ್ಧನೆ (ಶ್ರೀಲಂಕಾ), 725 ಇನ್ನಿಂಗ್ಸ್
53: ಬ್ರಯಾನ್ ಲಾರಾ (ವೆಸ್ಟ್ ಇಂಡೀಸ್), 521 ಇನ್ನಿಂಗ್ಸ್
48: ರಾಹುಲ್ ದ್ರಾವಿಡ್ (ಭಾರತ), 605 ಇನ್ನಿಂಗ್ಸ್
47: ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ), 484 ಇನ್ನಿಂಗ್ಸ್
2019ರ ನವೆಂಬರ್ 23ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಶತಕ ಬಾರಿಸಿದ ನಂತರ ಕೊಹ್ಲಿ ಅವರ ಬ್ಯಾಟ್’ನಿಂದ ಶತಕ ಸಿಡಿದಿರಲಿಲ್ಲ. ಇದೀಗ 34 ತಿಂಗಳುಗಳ ನಂತರ ಶತಕ ಬಾರಿಸಿ ಅಬ್ಬರಿಸಿರುವ ವಿರಾಟ್ ಕೊಹ್ಲಿ, ಟೀಕಾಕಾರರ ಬಾಯಿ ಮುಚ್ಟಿಸಿದ್ದಾರೆ.

https://twitter.com/balugoud01/status/1568094015203180544?s=20&t=X8gIKH5rTxcJztjqY9gA0Q

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭಿಕನಾಗಿ ಅಖಾಡಕ್ಕಿಳಿದು ಅಕ್ಷರಶಃ ಅಬ್ಬರಿಸಿದ ಕಿಂಗ್ ಕೊಹ್ಲಿ ಕೇವಲ 61 ಎಸೆತಗಳಲ್ಲಿ 12 ಬೌಂಡರಿಗಳು ಹಾಗೂ 6 ಸಿಕ್ಸರ್’ಗಳ ನೆರವಿನಿಂದ ಅಜೇಯ 122 ರನ್ ಬಾರಿಸಿ ಶತಕದ ಬರ ನೀಗಿಸಿಕೊಂಡರು. ವಿಶೇಷ ಏನೆಂದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ವಿರಾಟ್ ಕೊಹ್ಲಿ ಸಿಡಿಸಿದ ಮೊದಲ ಶತಕವೂ ಹೌದು.

ಇದನ್ನೂ ಓದಿ : Virat Kohli T20I Century : 1020 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಶತಕ.. ಇನ್ನು ಶುರು ರಣಬೇಟೆಗಾರನ ಶತಕ ಬೇಟೆ

ಇದನ್ನೂ ಓದಿ : KL Rahul Captain : ಅಫ್ಘಾನಿಸ್ತಾನ ವಿರುದ್ಧ ರಾಹುಲ್ ನಾಯಕ; ಅದ್ವಿತೀಯ ದಾಖಲೆ ಬರೆದ ಕನ್ನಡಿಗ

Virat Kohli Vs Sachin Tendulkar king Kohli is faster than Sachin Tendulkar

Comments are closed.