ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli Retirement : ನಿವೃತ್ತಿಗೂ ಮೊದಲು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡ್ಬೇಕಂತೆ

Virat Kohli Retirement : ನಿವೃತ್ತಿಗೂ ಮೊದಲು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡ್ಬೇಕಂತೆ

- Advertisement -

ಲಾಹೋರ್: Virat Kohli Retirement : ಅಲ್ಲಿ ಪಂದ್ಯ ನಡೆದದ್ದು ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ. ಆದ್ರೆ ಅಲ್ಲಿ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ಪೋಸ್ಟರ್ ಹಿಡಿದದ್ದು ಟೀಮ್ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿಯವರದ್ದು (Virat Kohli). ಕಿಂಗ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿ ಗಳಿದ್ದಾರೆ. ವಿರಾಟ್ ಕೊಹ್ಲಿ ಆಟವನ್ನು ಮನಸಾರೆ ಇಷ್ಟ ಪಡುವ ಫ್ಯಾನ್ಸ್ ಇದ್ದಾರೆ. ಅದು ಲಾಹೋರ್’ನಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ 6ನೇ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

ಪಂದ್ಯದ ವೇಳೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ಹಿಡಿದಿದ್ದ ಪೋಸ್ಟರ್ ಒಂದು ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಆ ಪೋಸ್ಟರ್’ನಲ್ಲಿ ಏನಿತ್ತು ಗೊತ್ತಾ..? “ವಿರಾಟ್ ಕೊಹ್ಲಿಯವರೇ, ನಿವೃತ್ತಿಗೂ ಮುನ್ನ ಪಾಕಿಸ್ತಾನದಲ್ಲಿ ದಯವಿಟ್ಟು ಒಂದು ಕ್ರಿಕೆಟ್ ಪಂದ್ಯವಾಡಿ”. ಹೀಗಂತ ಪೋಸ್ಟರ್ ಹಿಡಿದು ವಿರಾಟ್ ಕೊಹ್ಲಿಯವರಿಗೆ ಮನವಿ ಮಾಡಿದ್ದಾನೆ ಪಾಕಿಸ್ತಾನ ಆ ಕ್ರಿಕೆಟ್ ಫ್ಯಾನ್.

ಭಾರತ ಕ್ರಿಕೆಟ್ ತಂಡ 2006ರ ನಂತರ ಪಾಕಿಸ್ತಾನ ಪ್ರವಾಸಕ್ಕೆ ಹೋಗಿಲ್ಲ. ಅಷ್ಟೇ ಅಲ್ಲ, ಕಳೆದ 15 ವರ್ಷಗಳಿಂದ ಎರಡು ದೇಶಗಳ ಮಧ್ಯೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಏಷ್ಯಾ ಕಪ್ ಹಾಗೂ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಇತ್ತೀಚೆಗೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎದುರು ಬದುರಾಗಿದ್ದವು. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿದ್ದ ಭಾರತ, ಸೂಪರ್-8 ಹಂತದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು.

ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಇದುವರೆಗೆ ಪಾಕ್ ವಿರುದ್ಧ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ (13 ಏಕದಿನ+ 9 ಟಿ20) ವಿರಾಟ್ ಕೊಹ್ಲಿ, 55.41ರ ಅತ್ಯುತ್ತಮ ಸರಾಸರಿಯಲ್ಲಿ 2 ಶತಕಗಳ ಸಹಿತ 942 ರನ್ ಗಳಿಸಿದ್ದಾರೆ. 2012ರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ವೃತ್ತಿಜೀವನ ಶ್ರೇಷ್ಠ 183 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಅಡಿಲೇಡ್’ನಲ್ಲಿ ನಡೆದ 2015ರ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ 107 ರನ್ ಗಳಿಸಿದ್ದರು.

ಇದನ್ನೂ ಓದಿ : Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ

ಇದನ್ನೂ ಓದಿ : T20 World Cup 2022: ಟಿ20 ವಿಶ್ವಕಪ್ ಕ್ಯಾಶ್ ಪ್ರೈಜ್ ₹45 ಕೋಟಿ, ಚಾಂಪಿಯನ್ಸ್‌ಗೆ ಸಿಗಲಿದೆ ₹13 ಕೋಟಿ

Virat Kohli should play in Pakistan before retirement

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular