Virat Kohli special Story : ಆತ ಎದ್ದು ನಿಂತ ಖದರ್’ಗೆ ಅದುರಿ ಹೋಯಿತು ಐಪಿಎಲ್ (IPL 2024). ಆತ ಬ್ಯಾಟ್ ಬೀಸಿದ ರಭಸಕ್ಕೆ ಆ ತಂಡದೊಳಗೆ ಹುಟ್ಟಿದ್ದು ಭರವಸೆ ಎಂಬ ಉಸಿರು. ಆತನ ಬ್ಯಾಟಿಂಗ್ ಸ್ಟ್ರೈಕ್’ರೇಟ್ ಬಗ್ಗೆ ಮಾತಾಡಿ ಬಿಟ್ಟರು ಒಬ್ಬ ದಿಗ್ಗಜ. ಆತನೋ.. ಮೊದಲೇ ಬೆಂಕಿ.. ಜ್ವಾಲಾಮುಖಿಯಾಗಲು ಅಷ್ಟೇ ಸಾಕಿತ್ತು.. ಅವರು ಉರಿಸಿದರು, ಇವನು ಉರಿದು ಬಿದ್ದ, ಉರಿದು ಬಿಟ್ಟ.. ಧಗ ಧಗ ಧಗ ಧಗ. ಬಹುಶಃ ಸುನಿಲ್ ಗವಾಸ್ಕರ್ ಅವತ್ತು ವಿರಾಟ್ ಕೊಹ್ಲಿಯ ಸ್ಟ್ರೈಕ್’ರೇಟ್ ಬಗ್ಗೆ ಮಾತಾಡದೇ ಇದ್ದಿದ್ದರೆ ಆತನ ಎದೆಯೊಳಗೆ ಇಂಥಾ ಒಂದು ಕಿಚ್ಚು ಹೊತ್ತಿಕೊಳ್ಳುತ್ತಲೇ ಇರುತ್ತಿರಲಿಲ್ಲವೇನೋ..

ತನ್ನ ಇಡೀ ಕ್ರಿಕೆಟ್ ಜೀವನದಲ್ಲಿ ಒಬ್ಬ ದಿಗ್ಗಜನ ಬಗ್ಗೆ ವಿರಾಟ್ ಕೊಹ್ಲಿ ಯಾವತ್ತೂ ಇಷ್ಟೊಂದು ಆಕ್ರಮಣಕಾರಿಯಾಗಿ ಮಾತಾಡಿದ್ದಿಲ್ಲ. ಅಂಥಾ ಕೊಹ್ಲಿ ತನ್ನ ಸ್ಟ್ರೈಕ್’ರೇಟ್ ಪ್ರಶ್ನೆ ಮಾಡಿದ್ದ ಗವಾಸ್ಕರ್’ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾನೆ ಎಂದರೆ ಆತ ಕೆರಳಿದ್ದ ಎಂದೇ ಅರ್ಥ. ‘’ಗಾಯಗೊಂಡ ಸಿಂಹದ ಉಸಿರು ಘರ್ಜನೆಗಿಂತ ಭಯಂಕರ’’ ಎಂಬ ಮಾತು ಸತ್ಯ.
ವಿರಾಟ್ ಕೊಹ್ಲಿಯ ಎದೆಯಲ್ಲಿ ಧಗಧಗಿಸಿದ ಆ ಬೆಂಕಿ, ಭರವಸೆಗಳೇ ಬತ್ತಿ ಹೋಗಿದ್ದ RCB ಆಟಗಾರರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿ ಬಿಟ್ಟಿತ್ತು.
ಮೊದಲ 8 ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದು 7ರಲ್ಲಿ ಸೋತು ಕೂತಿದ್ದಾಗ, ಆರ್’ಸಿಬಿ ಪ್ಲೇ ಆಫ್ ತಲುಪಿಯೇ ತಲುಪಲಿದೆ ಎಂದು ಅದೆಷ್ಟು ಮಂದಿಗೆ ಅನಿಸಿರಲು ಸಾಧ್ಯ..?
ಇದನ್ನೂ ಓದಿ : Hardik Pandya Ban : ಐಪಿಎಲ್’ನಲ್ಲಿ ಆಟ ಮುಗಿದ ಮೇಲೆ ಹಾರ್ದಿಕ್ ಪಾಂಡ್ಯಗೆ ಒಂದು ಮ್ಯಾಚ್ ಬ್ಯಾನ್ ಶಿಕ್ಷೆ! ಏನಿದು ಕಥೆ ?
ಕಳೆದ ವರ್ಷ WPLನಲ್ಲಿ ಆರ್’ಸಿಬಿ ಮಹಿಳಾ ತಂಡ ಸೋತು ಕೈಚೆಲ್ಲಿ ಕೂತಿದ್ದಾಗ ಆರ್’ಸಿಬಿ ಕ್ಯಾಂಪ್’ಗೆ ಎಂಟ್ರಿ ಕೊಟ್ಟಿದ್ದ ಕೊಹ್ಲಿ, ಅಲ್ಲಿ ಒಂದು ಮಾತು ಹೇಳಿದ್ದ. There is a 1% chance and sometimes that chance is good enough.
Yes.. RCBಗೆ ಈ ಬಾರಿ ಇದ್ದದ್ದು ಅದೇ 1% ಚಾನ್ಸ್. ಸತತ 6 ಪಂದ್ಯಗಳನ್ನು ಸೋತಿದ್ದ ರಾಯಲ್ ಚಾಲೆಂಜರ್ಸ್, ಮುಂದಿನ ಆರೂ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ತಲುಪಿದೆ. ಅಷ್ಟರ ಮಟ್ಟಿಗೆ ಇದು ಕ್ರಿಕೆಟ್ ಜಗತ್ತಿನ greatest comebackಗಳಲ್ಲಿ ಒಂದು. ಇದು ಬರೀ ಹೊಡೆದಿರುವುದಲ್ಲ, ಇಷ್ಟು ರನ್’ಗಳಿಂದ ಹೊಡೆಯುತ್ತೇವೆ ಎಂದು ಹೇಳಿ ಹೊಡೆದಿರುವುದು. ಆರ್’ಸಿಬಿಯನ್ನು ಇವತ್ತು ಇಲ್ಲಿಗೆ ತಂದು ನಿಲ್ಲಿಸಿದ್ದು ವಿರಾಟ್ ಕೊಹ್ಲಿಯ ಎನರ್ಜಿ ಮತ್ತು ಆತನ ಅಮೋಘ ಬ್ಯಾಟಿಂಗ್.

ಅವರು ಆತನ ಸ್ಟ್ರೈಕ್’ರೇಟ್ ಬಗ್ಗೆ ಮಾತಾಡಿದರು..
ಆತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಿಟ್ಟ..!
ಅವರು ಅವನಿಗೆ ದೊಡ್ಡ ದೊಡ್ಡ ಸಿಕ್ಸರ್’ಗಳನ್ನು ಬಾರಿಸಲು ಬರುವುದಿಲ್ಲ ಎಂದರು.. ಆತ ನಿನ್ನೆ ಚೆನ್ನೈ ವಿರುದ್ಧ ಬಾರಿಸಿದ ಸಿಕ್ಸರ್ ಒಂದು ಚಿನ್ನಸ್ವಾಮಿ ಕ್ರೀಡಾಂಗಣದ rooftopಗೆ (ಮೇಲ್ಛಾವಣಿ) ಬಡಿದು ಬಿಟ್ಟಿತು.
ಇದನ್ನೂ ಓದಿ :IPL 2024 Food Poisoning For RCB Fan: ಪಂದ್ಯ ವೀಕ್ಷಿಸಲು ಬಂದವರಿಗೆ ಹಳಸಿದ ಆಹಾರ ಕೊಟ್ಟ ಆರೋಪ, KSCA ವಿರುದ್ಧ ಎಫ್ಐಆರ್!
ಅವರು ಅವನ aerial shots ಬಾರಿಸುವ abilityಯನ್ನೇ ಪ್ರಶ್ನಿಸಿದರು..
ಆತ ಈ ಐಪಿಎಲ್’ನಲ್ಲೇ ಅತೀ ಹೆಚ್ಚು (37) ಸಿಕ್ಸರ್’ಗಳನ್ನು ಚಚ್ಚಿ ಬಿಸಾಕಿದ. ಮತ್ತು ಇದು ಇಲ್ಲಿಗೇ ಮುಗಿದಿಲ್ಲ..
https://x.com/KohliMyHeart/status/1786973344090534321
ಇದನ್ನೂ ಓದಿ : Virat Kohli’s Daughter: ಅಪ್ಪನಂತೆ ಮಗಳು, 3ನೇ ವಯಸ್ಸಲ್ಲೇ ಬ್ಯಾಟ್ ಬೀಸುತ್ತಿದ್ದಾಳಂತೆ ವಿರಾಟ್ ಕೊಹ್ಲಿ ಪುತ್ರಿ !
Virat Kohli special Story IPL 2024 RCB vs CSK