virat Kohli win RCB in IPL 2024 Play off : ಅಹ್ಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕಿಂದು ಐಪಿಎಲ್-2024 (IPL 2024) ಟೂರ್ನಿಯಲ್ಲಿ ಅತ್ಯಂತ ಮಹತ್ವದ ಪಂದ್ಯ. ಸತತ ಆರು ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಆರ್’ಸಿಬಿ ಪಡೆ, ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ 2008ರ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

17 ವರ್ಷಗಳಿಂದ ಐಪಿಎಲ್’ನಲ್ಲಿ ನಿರಂತರವಾಗಿ ಮುಗ್ಗರಿಸುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಒಮ್ಮೆಯೂ ಕಪ್ ಗೆದ್ದಿಲ್ಲ. ಆದರೆ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಅಧಮ್ಯ ಆತ್ಮವಿಶ್ವಾಸದಲ್ಲಿದೆ. ಈ ಆತ್ಮವಿಶ್ವಾಸಕ್ಕೆ ಕಾರಣ ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಅಮೋಘ ಫಾರ್ಮ್. ಈ ಬಾರಿಯ ಐಪಿಎಲ್’ನಲ್ಲಿ ಅದ್ಭುತ ಆಟವಾಡುತ್ತಿರುವ ವಿರಾಟ್ ಕೊಹ್ಲಿ (Virat Kohli), ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 155.60ರ ಅತ್ಯುತ್ತಮ ಸ್ಟ್ರೈಕ್’ರೇಟ್’ನಲ್ಲಿ 708 ರನ್ ಬಾರಿಸಿದ್ದಾರೆ.
https://x.com/RCBTweets/status/1792895914719522962
64.36ರ ಅತ್ಯಮೋಘ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿರುವ ಕಿಂಗ್ ಕೊಹ್ಲಿ, ಒಂದು ಶತಕ ಹಾಗೂ 5 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಕೊಹ್ಲಿ ಅವರ ಬ್ಯಾಟ್’ನಿಂದ 59 ಬೌಂಡರಿ ಹಾಗೂ 37 ಸಿಕ್ಸರ್’ಗಳು ಸಿಡಿದಿವೆ. ವಿರಾಟ್ ಕೊಹ್ಲಿ ತಮ್ಮ ಲೀಗ್ ಹಂತದ ಫಾರ್ಮನ್ನು ಎಲಿಮಿನೇಟರ್ ಪಂದ್ಯದಲ್ಲೂ ಮುಂದುವರಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ತಲುಪುವುದರಲ್ಲಿ ಅನುಮಾನವೇ ಇಲ್ಲ.
https://x.com/RCBTweets/status/1793122110933733870
ಆರ್’ಸಿಬಿ ತಂಡ ಮೊದಲ 8 ಲೀಗ್ ಪಂದ್ಯಗಳಲ್ಲಿ 7ರಲ್ಲಿ ಸೋಲು ಪ್ಲೇ ಆಫ್ ರೇಸ್’ನಿಂದ ಹೊರ ಬೀಳುವ ಆತಂಕದಲ್ಲಿದ್ದಾಗ ತಂಡವನ್ನು ಪಾತಾಳದಿಂದ ಮೇಲೆತ್ತಿದ್ದೇ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಆರ್ಭಟಿಸಲು ಶುರು ಮಾಡುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ತಂಡದ ನಸೀಬೇ ಬದಲಾಗಿ ಹೋಯಿತು.
ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!
ಕೊಹ್ಲಿ ಅವರ ಆಕ್ರಮಣಕಾರಿ ಆಟ, ಆಕ್ರಮಣಕಾರಿ ಮನೋಭಾವ ತಂಡದ ಇಡೀ ತಂಡದಲ್ಲಿ ಹೋರಾಟದ ಕಿಚ್ಚು ತುಂಬಿತ್ತು. ಕೊಹ್ಲಿ ತುಂಬಿದ ಕಿಚ್ಚಿನ ಪರಿಣಾಮ ಲೀಗ್ ಹಂತದ ಕೊನೆಯ ಆರೂ ಪಂದ್ಯಗಳನ್ನು ಗೆದ್ದ ಆರ್’ಸಿಬಿ ನಂಬಲಸಾಧ್ಯ ರೀತಿಯಲ್ಲಿ ಐಪಿಎಲ್ ಪ್ಲೇ ಆಫ್’ಗೆ ಲಗ್ಗೆ ಇಟ್ಟಿದೆ. ಮೇ 18ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ ಆಫ್ ತಲುಪಿತ್ತು.

ಇಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ (IPL Eliminator) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ (RCB Vs RR) ಶುಕ್ರವಾರ ಚೆನ್ನೈನಲ್ಲಿ ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ : RCB Vs RR IPL 2024 Play Off: ಐಪಿಎಲ್ ಎಲಿನೇಟರ್ ಪಂದ್ಯ: ಆರ್’ಸಿಬಿಗೆ ರಾಯಲ್ಸ್ ಎದುರಾಳಿ, ಫೈನಲ್’ಗೆ ಮೂರೇ ಮೆಟ್ಟಿಲು !
virat Kohli win RCB in IPL 2024 Play off rcb vs rr