VVS Laxman : ಏಷ್ಯನ್ ಗೇಮ್ಸ್’ನಲ್ಲಿ ಆಡಲಿರುವ ಯಂಗ್ ಇಂಡಿಯಾಗೆ ವಿವಿಎಸ್ ಲಕ್ಷ್ಲ್ಮಣ್ ಕೋಚ್

ಬೆಂಗಳೂರು : ಮುಂಬರುವ ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಆಡಲಿರುವ ಭಾರತದ ಟಿ20 ತಂಡಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಹೆಡ್ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ.

ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಚೀನಾದ ಹಾಂಗ್’ಜೌನಲ್ಲಿ ನಡೆಯಲಿವೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದ ವೇಳೆಯೇ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಕೂಡ ನಡೆಯಲಿರುವ ಕಾರಣ, ಏಷ್ಯನ್ ಗೇಮ್ಸ್’ನಲ್ಲಿ ಪೂರ್ಣ ಸಾಮರ್ಥ್ಯದ ಭಾರತದ ಪುರುಷರ ತಂಡ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯುವ ತಂಡವನ್ನು ಕಳುಹಿಸಲು ಭಾರತ ನಿರ್ಧರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್’ಮನ್, ಮಹಾರಾಷ್ಟ್ರದ ಯುವ ಓಪನರ್ ರುಜುರಾತ್ ಗಾಯಕ್ವಾಡ್ ಏಷ್ಯನ್ ಗೇಮ್ಸ್’ನಲ್ಲಿ ಯುವ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಈ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (National Cricket Academy – NCA) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ. ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಈ ಹಿಂದೆ ಲಕ್ಷ್ಮಣ್ ಕೆಲ ಸರಣಿಗಳಲ್ಲಿ ಭಾರತ ತಂಡದ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಏಷ್ಯನ್ ಗೇಮ್ಸ್ 2023 (Asian Games 2023) ಇದೇ ವರ್ಷದ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್’ಜೌನಲ್ಲಿ (Hangzhou, China) ನಡೆಯಲಿದ್ದು, ಭಾರತ ಪುರುಷರ (India men’s cricket team) ಮತ್ತು ಮಹಿಳೆಯರ ಕ್ರಿಕೆಟ್ ತಂಡಗಳು (India Women’s cricket team) ಏಷ್ಯನ್ ಗೇಮ್ಸ್’ನಲ್ಲಿ ಭಾಗವಹಿಸಲಿದೆ.

ಏಷ್ಯನ್ ಗೇಮ್ಸ್’ನಲ್ಲಿ 2ನೇ ದರ್ಜೆಯ ಭಾರತ ಪುರುಷರ ತಂಡ ಹಾಗೂ ಪೂರ್ಣ ಸಾಮರ್ಥ್ಯದ ಭಾರತದ ಮಹಿಳಾ ತಂಡಗಳು ಭಾಗವಹಿಸಲಿವೆ.ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರ ಪೈಕಿ ಬಹುತೇಕರು ಆಡಲಿದ್ದು, ಅಲ್ಲಿ ಅವಕಾಶ ಪಡೆಯದವರು ಏಷ್ಯನ್ ಗೇಮ್ಸ್’ನಲ್ಲಿ ಆಡಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಭಾರತದ ಆತಿಥ್ಯದಲ್ಲಿ ನಡೆಯಲಿದೆ.

ಇದನ್ನೂ ಓದಿ : Virat Kohli : ವಿಕಿಪೀಡಿಯಾದಲ್ಲೂ ವಿರಾಟ್ ಕೊಹ್ಲಿ ದಾಖಲೆ, ಕಿಂಗ್ ಕೊಹ್ಲಿ ಜನಪ್ರಿಯತೆ ಮುಂದೆ ಧೋನಿಯೂ ಇಲ್ಲ, ಕ್ರಿಕೆಟ್ ದೇವರೂ ಇಲ್ಲ!

ಇದನ್ನೂ ಓದಿ : Rain Restaurant : ನೆದರ್ಲೆಂಡ್ಸ್’ನಲ್ಲಿ ರೆಸ್ಟೋರೆಂಟ್ ಬ್ಯುಸಿನೆಸ್ ಶುರು ಮಾಡಿದ ಸುರೇಶ್ ರೈನಾ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಭಾರತದ ಪುರುಷರ ಕ್ರಿಕೆಟ್ ತಂಡ:
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಬ್ ಸಿಮ್ರನ್ ಸಿಂಗ್ (ವಿಕೆಟ್ ಕೀಪರ್).
ಮೀಸಲು ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ಸಾಯಿ ಸುದರ್ಶನ್.

VVS Laxman Team India coach: VVS Laxman coach for Young India to play in Asian Games

Comments are closed.