World Athletics Championship: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್: ಬೆಳ್ಳಿ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

ಒರೆಗನ್: ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಸ್ಟಾರ್ ಜಾವೆಲಿನ್ ತಾರೆ ನೀರಜ್ ಚೋಪ್ರಾ (Neeraj Chopra) ಅಮೆರಿಕದ ಒರೆಗನ್’ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್’ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ.

ಪುರುಷರ ವಿಭಾಗದ ಜಾವೆಲಿನ್ ಸ್ಪರ್ಧೆಯ ತಮ್ಮ 4ನೇ ಪ್ರಯತ್ನದಲ್ಲಿ 88.13 ಮೀ. ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ, 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿ ಕೊಂಡರು. ಇದರೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್’ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ದಾಖಲೆ ಬರೆದರು.

2003ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್’ಷಿಪ್’ನಲ್ಲಿ ಭಾರತದ ಲಾಂಗ್ ಜಂಪ್ ತಾರೆ ಅಂಜು ಬಾಬ್ಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.

ಅಮೆರಿಕದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಇತ್ತ ಹರ್ಯಾಣದ ಪಾಣಿಪತ್’ನಲ್ಲಿರುವ ಚೋಪ್ರಾ ಮನೆಯಲ್ಲಿ ಕುಟುಂಬ ಸದಸ್ಯರ ಸಂಭ್ರಮ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ : Brian Lara : ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆರಿಬಿಯನ್ ಕ್ರಿಕೆಟ್ ದಿಗ್ಗಜ ಮಾಡಿದ್ದೇನು ನೋಡಿ

ಇದನ್ನೂ ಓದಿ : Sunil Gavaskar : ಗವಾಸ್ಕರ್‌ಗೆ ಕ್ರಿಕೆಟ್ ಜನಕರ ನಾಡಿನಲ್ಲಿ ದೊಡ್ಡ ಗೌರವ, ಲೀಸೆಸ್ಟರ್ ಕ್ರಿಕೆಟ್ ಮೈದಾನಕ್ಕೆ ಬ್ಯಾಟಿಂಗ್ ದಿಗ್ಗಜನ ಹೆಸರು

World Athletics Championship Silver win Neeraj Chopra

Comments are closed.