ಗೂಗಲ್‌ ಫಿಕ್ಸೆಲ್‌ 8 ಬೆನ್ನಲ್ಲೇ ಬಿಡುಗಡೆ ಆಯ್ತು ವಿವೋ ವಿ29, ವಿವೋ ವಿ29ಪ್ರೋ

ಗೂಗಲ್‌ ಫಿಕ್ಸೆಲ್‌ 8 (Google Pixel 8) ಹಾಗೂ 8 ಪ್ರೋ (Google Pixel 8 pro) ಮೊಬೈಲ್‌ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿವೋ ವಿ29 (Vivo V29) ಹಾಗೂ ವಿ29 ಪ್ರೋ (Vivo V29 Pro) ಮೊಬೈಲ್‌ ಬಿಡುಗಡೆ ಮಾಡಿದೆ.

ದಸರಾ ಹಬ್ಬದ ಸಂದರ್ಭದಲ್ಲಿಯೇ ಸ್ಮಾರ್ಟ್‌ಪೋನ್‌ ಕಂಪೆನಿಗಳು ಹೊಸ ಹೊಸ ಮೊಬೈಲ್‌ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಗೂಗಲ್‌ ಫಿಕ್ಸೆಲ್‌ 8 (Google Pixel 8) ಹಾಗೂ 8 ಪ್ರೋ (Google Pixel 8 pro) ಮೊಬೈಲ್‌ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿವೋ ವಿ29 (Vivo V29) ಹಾಗೂ ವಿ29 ಪ್ರೋ (Vivo V29 Pro) ಮೊಬೈಲ್‌ ಬಿಡುಗಡೆ ಮಾಡಿದೆ.

ಒನ್‌ ಪ್ಲಸ್‌, ಗೂಗಲ್‌ ಫಿಕ್ಸೆಲ್‌ (Google Pixel) ಸ್ಮಾರ್ಟ್‌ಪೋನ್‌ಗಳಿಗೆ ವಿವೋ ವಿ29 ಹಾಗೂ ವಿ29 ಪ್ರೋ ಮೊಬೈಲ್‌ ಪ್ರಬಲ ಸ್ಪರ್ಧೆಯನ್ನು ಒಡ್ಡಲಿದೆ. ವಿವೋ ಕಂಪೆನಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರವ ಸ್ಮಾರ್ಟ್‌ ಪೋನ್‌ ಬಿಡುಗಡೆ ಮಾಡಿದೆ. ನೋಡಲು ವಿವೋ V29 ಮತ್ತು V29 Pro ಬಹುತೇಕ ಒಂದೇ ತೆರನಾಗಿದೆ.

Vivo v29 v29 pro was launched right after google fixel 8 new
Image credit : vivo

ಆದರೆ ಈ ಮೊಬೈಲ್‌ಗಳ ಪ್ರೊಸೆಸರ್‌ ಹಾಗೂ ಕ್ಯಾಮೆರಾದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. Vivo V29 Qualcomm Snapdragon 778G ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದರೆ, ಉನ್ನತ-ಮಟ್ಟದ Vivo V29 Pro ಆವೃತ್ತಿಯು MediaTek ಡೈಮೆನ್ಸಿಟಿ 8200 SOC ನಿಂದ ಚಾಲಿತವಾಗಿದೆ. ಇನ್ನು ಕ್ಯಾಮೆರಾ ವಿಚಾರದಲ್ಲಿಯೂ ಕೂಡ ಎರಡೂ ಮೊಬೈಲ್‌ಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಇದನ್ನೂ ಓದಿ : ಗೂಗಲ್ ಪಿಕ್ಸೆಲ್ 8, ಗೂಗಲ್ ಪಿಕ್ಸೆಲ್ 8 ಪ್ರೊ ಬಿಡುಗಡೆ : ಬೆಲೆ ಎಷ್ಟು ಗೊತ್ತಾ ?

Vivo V29 50MP ಕ್ಯಾಮೆರಾ ಒಳಗೊಂಡದ್ದು f/1.88 ಫೀಚರ್ಸ್‌ ಜೊತೆಗೆ 8MP ವೈಡ್-ಆಂಗಲ್ ಮತ್ತು 2MP ಬೊಕೆ ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು Vivo V29 ಸ್ಮಾರ್ಟ್‌ಪೋನ್‌ನಲ್ಲಿ f/1.88 ಅಪರ್ಚರ್ 50 MP ಪ್ರೈಮರಿ ಲೆನ್ಸ್ ಮತ್ತು 8 MP ವೈಡ್-ಆಂಗಲ್ ಕ್ಯಾಮೆರಾ ಒಳಗೊಂಡಿದೆ. ಇನ್ನು ಬೇಸ್ ಮಾಡೆಲ್‌ನಲ್ಲಿ 2 MP ಬೊಕೆ ಲೆನ್ಸ್ ಬದಲಿಗೆ 12 MP ಪೋರ್ಟ್ರೇಟ್ ಕ್ಯಾಮೆರಾ ನೀಡಲಾಗಿದೆ.

Vivo v29 v29 pro was launched right after google fixel 8
Image credit : vivo

Vivo V29 ಮತ್ತು V29 Pro ಎರಡೂ 6.78-ಇಂಚಿನ AMOLED ಡಿಸ್ಪ್ಲೇ ಜೊತೆಗೆ 2800 x 1260 ರೆಸಲ್ಯೂಶನ್ ಮತ್ತು ಅದೇ 4600 mAh ಬ್ಯಾಟರಿಯೊಂದಿಗೆ 80W ವೇಗದ ಚಾರ್ಜಿಂಗ್ ಮಾಡಬಹುದಾಗಿದೆ. ಎರಡೂ ಮೊಬೈಲ್‌ಗಳಲ್ಲಿಯೂ 8GB RAM ಜೊತೆಗೆ 256GB ROM ಮತ್ತು 12GB RAM ಜೊತೆಗೆ 512GB ROM ಸೌಲಭ್ಯವನ್ನು ನೀಡಲಾಗಿದೆ.

ಇದನ್ನೂ ಓದಿ : OnePlus ಸ್ಮಾರ್ಟ್‌ಪೋನ್‌ ಮೇಲೆ ಬಾರೀ ಡಿಸ್ಕೌಂಟ್‌ : ದೀಪಾವಳಿ ಡಿಸ್ಕೌಂಟ್‌ನಲ್ಲಿ ಯಾವ ಪೋನ್‌ಗೆ ಎಷ್ಟು ಬೆಲೆ

ವಿವೊ ವಿ29 (Vivo V29)8GB/128GB ಆವೃತ್ತಿಗೆ 32,999 ರೂಪಾಯಿ ಮತ್ತು 12GB/256GB ಆವೃತ್ತಿಗೆ 36,999 ರೂಪಾಯಿ ಇದೆ. ಜೊತೆಗೆ ಈ ಎರಡೂ ಮೊಬೈಲ್‌ಗಳಲ್ಲಿ ಒಟ್ಟು ಮೂರು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಹಿಮಾಲಯನ್ ಬ್ಲೂ, ಮೆಜೆಸ್ಟಿಕ್ ರೆಡ್ ಮತ್ತು ಸ್ಪೇಸ್ ಬ್ಲ್ಯಾಕ್ ಕಲರ್‌ಗಳಲ್ಲಿ ಲಭ್ಯವಿದೆ.

Vivo v29 v29 pro was launched right after google fixel 8
Image credit : vivo

ಇನ್ನು ವಿವೋ V29 Pro 8GB RAM/256GB ಸ್ಟೋರೇಜ್ ಆವೃತ್ತಿಯ ಮೊಬೈಲ್‌ 39,999 ರೂಪಾಯಿ ಮತ್ತು 12GB RAM/512GB ಆವೃತ್ತಿ 42,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಆದರೆ ಈ ಸ್ಮಾರ್ಟ್‌ ಪೋನ್‌ ಹಿಮಾಲಯನ್ ಬ್ಲೂ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಮಾತ್ರವೇ ಲಭ್ಯವಿದೆ.

ವಿವೋ ಕಂಪೆನಿ ಬಿಡುಗಡೆ ಮಾಡಿರುವ ಹೊಸ ಮೊಬೈಲ್‌ಗಳನ್ನು ವಿವೋದ ಅಧಿಕೃತ ವೆಬ್‌ಸೈಟ್‌, ಫ್ಲಿಪ್‌ಕಾರ್ಟ್‌, ರಿಲಯನ್ಸ್‌ ರಿಟೇಲ್‌ ಮತ್ತು ಆಫ್‌ಲೈನ್‌ ರಿಟೇಲ್‌ ಸ್ಟೋರ್‌ ಗಳಲ್ಲಿ ಲಭ್ಯವಿದೆ. ಎರಡೂ ಮೊಬೈಲ್‌ಗಳನ್ನು ಗ್ರಾಹಕರು ಇಂದಿನಿಂದಲೇ ಮುಂಗಡ ಬುಕ್ಕಿಂಗ್‌ ಮಾಡಬಹುದಾಗಿದೆ.

Vivo v29 v29 pro was launched right after google fixel 8
Image credit : vivo

ಇದನ್ನೂ ಓದಿ : Googe Pixel 7 ಬೆಲೆಯಲ್ಲಿ ಇಳಿಕೆ : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಬಾರೀ ರಿಯಾಯಿತಿ

ವಿವೋ ವಿ೨೯ ಪ್ರೋ ( Vivo V29 Pro) ಮೊಬೈಲ್‌ ಪೋನ್‌ ಅನ್ನು ಅಕ್ಟೋಬರ್ 10 ರಿಂದ ಹಾಗೂ ವಿವೋ ವಿ೨೯ ( Vivo V29) ಮೊಬೈಲ್ ಅಕ್ಟೋಬರ್ 17 ರಿಂದ ಖರೀದಿಗೆ ಲಭ್ಯವಿರುತ್ತದೆ. ಹಬ್ಬದ ಸಂದರ್ಭದಲ್ಲಿ ವಿವೋ ಕಂಪೆನಿಯ ಮೊಬೈಲ್‌ಗಳ ಮೇಲೆ ಬಾರೀ ರಿಯಾಯಿತಿ ಘೋಷಣೆ ಆಗುವ ಸಾಧ್ಯತೆಯಿದೆ.

vivo v29 vivo v29 pro was launched right after google fixel 8

Comments are closed.