World Cup 2023 Squad Announced : ವಿಶ್ವಕಪ್ 2023 ರಲ್ಲಿ ಭಾರತ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಹೊತ್ತಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದೆ. 12 ಆಟಗಾರರ ತಂಡಕ್ಕೆ ವಿರಾಟ್ ಕೊಹ್ಲಿ (Virat Kohli) ನಾಯಕರಾಗಿದ್ದು, ಭಾರತೀಯರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಸೋಲನ್ನೇ ಕಾಣದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ತಂಡದಲ್ಲಿ ಸ್ಥಾನ ಪಡೆದಿಲ್ಲ.
ಬಿಸಿಸಿಐ ಆಯೋಜನೆ ಮಾಡಿರುವ ವಿಶ್ವಕಪ್ 2023 ರ ಪಂದ್ಯಾವಳಿಯಲ್ಲಿ ಲೀಗ್ ಹಂತದ ಪಂದ್ಯಗಳು ಇದೀಗ ಮುಕ್ತಾಯ ಕಂಡಿವೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿವೆ. ಭಾರತ ತಂಡ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಸವಾಲು ಒಡ್ಡಲಿದೆ.
ವಿಶ್ವಕಪ್ ಸೆಮಿಫೈನಲ್ ಪಂದ್ಯ ಆರಂಭಕ್ಕೂ ಮೊದಲೇ ಕ್ರಿಕೆಟ್ ಆಸ್ಟ್ರೇಲಿಯಾ 12 ಮಂದಿ ಆಟಗಾರರ ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಅಲ್ಲದೇ ಮೊಹಮ್ಮದ್ ಸೆಮಿ, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಸ್ಥಾನ ಪಡೆದು ಕೊಂಡಿದ್ದಾರೆ. ಆದ್ರೆ ನಾಯಕ ರೋಹಿತ್ ಶರ್ಮಾಗೆ ತಂಡದಲ್ಲಿ ಸ್ಥಾನ ನೀಡಿಲ್ಲ.

ವಿರಾಟ್ ಕೊಹ್ಲಿ ಸೇರಿದಂತೆ ಒಟ್ಟು ನಾಲ್ವರು ಭಾರತೀಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ರೆ, ದಕ್ಷಿಣ ಆಫ್ರಿಕಾ ತಂಡದಿಂದ 3 ಮಂದಿ, ಆಸ್ಟ್ರೇಲಿಯಾ ದಿಂದ 3, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡದಿಂದ ತಲಾ ಓರ್ವರು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಇದು ಕೊನೆಯ ವಿಶ್ವಕಪ್ !
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಹಲವು ಆಟಗಾರರು ದಾಖಲೆಯ ಸುರಿಮಳೆಗೈದಿದ್ದಾರೆ. ಹಾಗಾದ್ರೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು ಯಾರು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): ಆಫ್ರಿಕಾದ ಆರಂಭಿಕ ಆಟಗಾರ ಆಡಿದ 9 ಪಂದ್ಯಗಳಲ್ಲಿ 65.67 ಸರಾಸರಿಯಲ್ಲಿ 591 ರನ್ ಗಳಿಸಿದ್ದಾರೆ. ಅಲ್ಲದೇ ವಿಶ್ವಕಪ್‌ನಲ್ಲಿ 4 ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರನಿಗೆ ವಿಶ್ವಕಪ್ ತಂಡದಲ್ಲಿಯೂ ಆರಂಭಿಕ ಆಟಗಾರನ ಸ್ಥಾನ ನೀಡಲಾಗಿದೆ.

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಆಡಿದ 9 ಪಂದ್ಯಗಳಲ್ಲಿ 55.44 ಸರಾಸರಿಯಲ್ಲಿ 499 ರನ್ ಗಳಿಸಿದ್ದಾರೆ. 2 ಶತಕ ಮತ್ತು 2 ಅರ್ಧಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ವಾರ್ನರ್ ಇದೀಗ ಡಿಕಾಕ್ ಜೊತೆಗೆ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ರಚಿನ್ ರವೀಂದ್ರ (ನ್ಯೂಜಿಲೆಂಡ್): ಭಾರತ ಮೂಲದ ಯುವ ಆಟಗಾರ ರಚಿನ್ ರವೀಂದ್ರ 3 ನೇ ಕ್ರಮಾಂಕದಲ್ಲಿ ಸ್ಥಾನ ನೀಡಲಾಗಿದೆ. ಒಟ್ಟು 9 ಪಂದ್ಯಗಳನ್ನು ಆಡಿರುವ ರಚಿನ್ ರವೀಂದ್ರ 565 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 2 ಅರ್ಧ ಶತಕ ಒಳಗೊಂಡಿದೆ. ಜೊತೆಗ ಬೌಲಿಂಗ್‌ನಲ್ಲಿಯೂ ಮಿಂಚಿದ್ದು 5 ವಿಕೆಟ್ ಕಬಳಿಸಿದ್ದಾರೆ.

ವಿರಾಟ್ ಕೊಹ್ಲಿ (ಭಾರತ): ಟೀಂ ಇಂಡಿಯಾದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ವಿಶ್ವಕಪ್ ತಂಡದಲ್ಲಿ ನಾಯಕತ್ವ ನೀಡಲಾಗಿದೆ. ವಿಶ್ವಕಪ್‌ನಲ್ಲಿ 9 ಪಂದ್ಯಗಳನ್ನು ಆಡಿದ್ದು, 99.00 ಸರಾಸರಿಯಲ್ಲಿ 594 ರನ್ ಗಳಿಸಿದ್ದಾರೆ. 2 ಶತಕ ಮತ್ತು 5 ಅರ್ಧಶತಕ ಸಿಡಿಸಿದ್ದಾರೆ.
ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತ್ತುಗೊಳಿಸಿದ ಐಸಿಸಿ : ಅನಿಶ್ಚಿತತೆಯಲ್ಲಿ T20 ವಿಶ್ವಕಪ್ ಭವಿಷ್ಯ
ಏಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ): ಆಫ್ರಿಕಾದ ಏಡೆನ್ ಮಾರ್ಕ್ರಾಮ್ 9 ಪಂದ್ಯಗಳನ್ನು ಆಡಿದ್ದು, 49.50 ಸರಾಸರಿಯಲ್ಲಿ 396 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಿಡಿಸಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ): ಬ್ಯಾಟಿಂಗ್ ಆಲ್‌ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದಿರುವ ಮ್ಯಾಕ್ಸ್‌ವೆಲ್ 7 ಪಂದ್ಯಗಳಲ್ಲಿ 1 ದ್ವಿಶತಕ ಸೇರಿದಂತೆ 397 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲೂ 5 ವಿಕೆಟ್ ಪಡೆದರು.
ಮಾರ್ಕೊ ಜಾನ್ಸೆನ್ (ದಕ್ಷಿಣ ಆಫ್ರಿಕಾ): ಬೌಲಿಂಗ್ ಆಲ್ ರೌಂಡರ್ 8 ಪಂದ್ಯಗಳಲ್ಲಿ ಅರ್ಧಶತಕ ಸೇರಿದಂತೆ 157 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ 6.40 ಎಕಾನಮಿ ದರದಲ್ಲಿ 17 ವಿಕೆಟ್ ಪಡೆದಿದ್ದಾರೆ.
ರವೀಂದ್ರ ಜಡೇಜಾ (ಭಾರತ) : ಭಾರತದ ಸ್ಟಾರ್ ಆಲ್‌ರೌಂಡರ್ 9 ಪಂದ್ಯಗಳಲ್ಲಿ 111 ರನ್ ಗಳಿಸಿದ್ದಾರೆ ಮತ್ತು ಇದುವರೆಗೆ 3.96 ಎಕಾನಮಿ ದರದಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೊಹಮ್ಮದ್ ಶಮಿ (ಭಾರತ) : ಶಮಿ ಈ ಬಾರಿಯ ವಿಶ್ವಕಪ್‌ನಲ್ಲಿ ಕೇವಲ 5 ಪಂದ್ಯಗಳಲ್ಲಿ 4.78 ಎಕಾನಮಿ ದರದಲ್ಲಿ 16 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ಈ ಟೂರ್ನಿಯಲ್ಲಿ ಎರಡು ಬಾರಿ 5 ವಿಕೆಟ್ ಪಡೆದಿದ್ದಾರೆ.
ಆಡಮ್ ಝಂಪಾ (ಆಸ್ಟ್ರೇಲಿಯಾ) : ಆಸೀಸ್ ಸ್ಪಿನ್ನರ್ ಝಂಪಾ ಆಡಿರುವ 9 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.
ಜಸ್ಪ್ರೀತ್ ಬುಮ್ರಾ (ಭಾರತ) : ಯಾರ್ಕರ್ ಕಿಂಗ್ ಬುಮ್ರಾ 17 ಗಳಿಸಿದ್ದಾರೆ ಮತ್ತು ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರು.
ದಿಲ್ಶನ್ ಮಧುಶಂಕ (ಶ್ರೀಲಂಕಾ): ಟೂರ್ನಿಯಲ್ಲಿ 12ನೇ ಆಟಗಾರನಾಗಿ ಆಯ್ಕೆಯಾಗಿರುವ ದಿಲ್ಶಾನ್ ಆಡಿರುವ 9 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ.
World Cup 2023 Squad Announced: Virat Kohli Captain, indian Captain Rohit Sharma Not In Team