wrestlers Protest : ಪದಕ, ಪ್ರಶಸ್ತಿ ಹಿಂದಿರುಗಿಸುವುದಾಗಿ ಕುಸ್ತಿಪಟುಗಳ ಎಚ್ಚರಿಕೆ

ಹೊಸದಿಲ್ಲಿ: ದಿಲ್ಲಿ ಪೊಲೀಸರ ವರ್ತನೆಯಿಂದ ಬೇಸತ್ತ ಪ್ರತಿಭಟನೆ ನಿರತ (wrestlers Protest) ಕುಸ್ತಿಪಟುಗಳು ಪದ್ಮಪ್ರಶಸ್ತಿ ಸೇರಿದಂತೆ ತಾವು ಗೆದ್ದಿರುವ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲೈಂಗಿಕ ಕಿರುಕುಳ ನೀಡಿರುವ ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಒಲಿಂಪಿಕ್‌ ಪಕದ ವಿಜೇತ ಕುಸ್ತಿಪಟು ವಿನೇಶ್‌ ಫೋಗತ್‌, ಸಾಕ್ಷಿ ಮಲಿಕ್‌ ಹಾಗೂ ಬಜರಂಗ್‌ ಪೂನಿಯಾ ಸೇರಿಂದತೆ ಅನೇಕ ಕುಸ್ತಿಪಟುಗಳು ದೆಹಲಿ ಜಂತರ್‌ಮಂತರ್‌ನಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತದ್ದಾರೆ. ಈ ರೀತಿಯಲ್ಲಿ ಅವಮಾನ ಮಾಡುತ್ತಿರುವುದನ್ನು ಗಮನಿಸಿದಾಗ ನಾವು ಗೆದ್ದಿರುವ ಪದಕ ಹಾಗೂ ಸರಕಾರ ನೀಡಿರುವ ಪ್ರಶಸ್ತಿಗಳಿಗೆ ಬೆಲೆ ಇಲ್ಲ ಎಂದು ನಿರಶನ ನಿರತ ಕುಸ್ತಿಪಟುಗಳು ಆರೋಪಿಸಿದ್ದಾರೆ.

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕುಸ್ತಿಪಟುಗಳು ಹಾಸಿಗೆಯೊಂದಿಗೆ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿದಾಗ ಪೊಲೀಸರು ಅವರನ್ನು ತಡೆದು ಈ ಸ್ಥಳಕ್ಕೆ ಹಾಸಿಗೆಗಳನ್ನು ತರುವಂತಿಲ್ಲ ಎನ್ನುತ್ತಾರೆ. ಅಲ್ಲದೆ ಸಾಕ್ಷಿ ಮಲಿಕ್‌ ಹಾಗೂ ವಿನೇಶ್‌ ಫೊಗತ್‌ ಅವರನ್ನು ಪುರುಷ ಪೊಲೀಸ್‌ ಅಧಿಕಾರಿಗಳು ಮೈಮೇಲೆ ಕೈ ಹಾಕಿ ತಳ್ಳಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಇತರ ಇಬ್ಬರು ಕುಸ್ತಿಪಟುಗಳು ಗಾಯಗೊಂಡರು.

“ಕುಸ್ತಿಪಟುಗಳನ್ನು ಈ ರೀತಿಯಲ್ಲಿ ನೋಡಿಕೊಂಡರೆ ನಾವು ಗೆದ್ದ ಪಕದಗಳಿಂದ ಏನು ಪ್ರಯೋಜನ? ನಾವು ಇದುವರೆಗೂ ಗೆದ್ದಿರುವ ಪದಕ ಹಾಗೂ ಪ್ರಶಸ್ತಿಗಳನ್ನು ಭಾರತ ಸರಕಾರಕ್ಕೆ ಹಿಂದಿರುಗಿಸಿ ಸಾಮಾನ್ಯ ಜನರಂತೆ ಬದುಕಬೇಕಾಗಿದೆ,” ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪೂನಿಯಾ ಹೇಳಿದ್ದಾರೆ.

ವಿನೇಶ್‌, ಸಾಕ್ಷಿ ಮತ್ತು ಬಜರಂಗ್‌ ದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಖೇಲ್‌ ರತ್ನ ಗೌರವಕ್ಕೆ ಪಾತ್ರರಾದವರು. ಅಲ್ಲದೆ ಸಾಕ್ಷಿ ಹಾಗೂ ಬಜರಂಗ್‌ ಕ್ರೀಡಾ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಗಳಿಸಿದವರು. “ನಮ್ಮನ್ನು ತಳ್ಳುತ್ತ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೊಲೀಸರಿಗೆ ನಾವು ಪದಕ ಗೆದ್ದವರು, ಪದ್ಮ ಪ್ರಶಸ್ತಿ ವಿಜೇತರು, ಮಹಿಳಾ ಕುಸ್ತಿಪಟುಗಳು ಎಂಬ ಸಾಮಾನ್ಯ ಅರಿವೂ ಇಲ್ಲ, ನಾವು ನ್ಯಾಯದ ಭಿಕ್ಷೆ ಬೇಡುತ್ತಿದ್ದರೆ ಅವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.” ಎಂದು ಬಜರಂಗ್‌ ಆರೋಪಿಸಿದ್ದಾರೆ.

ಒಬ್ಬ ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿದಂತೆ ಒಟ್ಟು ಏಳು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕುಸ್ತಿಪಟುಗಳು ಏಪ್ರಿಲ್‌ 23 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. “ನಾವು ಗೆದ್ದಿರುವ ಎಲ್ಲ ಪದಕ, ಸರಕಾರ ನೀಡಿರುವ ಎಲ್ಲ ಪ್ರಶಸ್ತಿ ಮಾತ್ರವಲ್ಲ ನಮ್ಮ ಜೀವವನ್ನೇ ನೀಡುತ್ತೇವೆ ಆದರೆ ನಮಗೆ ನ್ಯಾಯಬೇಕು,” ಎಂದು ವಿನೇಶ್‌ ನೊಂದು ನುಡಿದರು.

ಇದನ್ನೂ ಓದಿ : India WTC final: ಭಾರತ ಈ ಬಾರಿಯೂ ಟೆಸ್ಟ್ ವಿಶ್ವಕಪ್ ಗೆಲ್ಲೋದು ಡೌಟ್.. ಕಾರಣ ಇಲ್ಲಿದೆ..!

ಇದನ್ನೂ ಓದಿ : Commentators in RCB team: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುತ್ತಿದ್ದಾರೆ ಇಬ್ಬರು ಕಾಮೆಂಟೇಟರ್ಸ್ !

Comments are closed.