ಮಣಿಪುರ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕಲು ರಾಜ್ಯಪಾಲರ ಸಮ್ಮತಿ

ಮಣಿಪುರ : (Manipur Violence) ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ನಡುವೆ ರಾಜ್ಯಾದ್ಯಂತ ಘರ್ಷಣೆ ಬುಗಿಲೆದ್ದಿದೆ. ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಬುಡಕಟ್ಟು ಗುಂಪುಗಳಿಂದ ಬೃಹತ್‌ ಪ್ರತಿಭಟನೆ ನಡೆದು, ಹಿಂಸಾಚಾರಕ್ಕೆ ತಿರುಗಿತ್ತು. ಹಿಂಸಾಚಾರದ ಬೆನ್ನಲ್ಲೇ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಮಣಿಪುರ ರಾಜ್ಯಪಾಲರು ಗಂಡಕ್ಕಿ ಗುಂಡಿಕ್ಕಲು ( ಶೂಟ್‌ ಆಂಡ್‌ ಸೈಟ್‌ ಆದೇಶ) ರಾಜ್ಯ ಗೃಹ ಇಲಾಖೆಗೆ ಆದೇಶಿಸಿದ್ದಾರೆ.

ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ಸಲುವಾಗಿ ಎಲ್ಲಾ ಸಮುದಾಯದ ಸುಮಾರು 7 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಮಣಿಪುರ ರಾಜ್ಯದ ವಿವಿದ ಪ್ರದೇಶಗಳಲ್ಲಿ ಸುಮಾರು 9 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಸೇನಾ ಶಿಬಿರಗಳಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ಆಶ್ರಯ ನೀಡಲಾಗಿದೆ.

ಮಣಿಪುರ ಮುಖ್ಯಮಂತ್ರಿ ಎನ್.‌ ಬಿರೇನ್‌ ಸಿಂಗ್‌ ಅವರು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಬೇಕಾಗಿದ್ದ ಸ್ಥಳವನ್ನು ಧ್ವಂಸಗೊಳಿಸಲಾಗಿದೆ. ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕೇಂದ್ರದಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ತರಿಸಿಕೊಳ್ಳಲಾಗಿದೆ. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಖ್ಯಮಂತ್ರಿ ಎನ್.ಬಿರೇನ್‌ ಸಿಂಗ್‌ ಜೊತೆಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೇ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ರಾಪಿಡ್‌ ಆಕ್ಷನ್‌ ಪೋರ್ಸ್‌ ತಂಡಗಳನ್ನು ರವಾನಿಸಲಾಗಿದೆ.

ಮಣಿಪುರದಲ್ಲಿ ಮೇಟಿ ಸಮುದಾಯದ ಜನಸಂಖ್ಯೆ ಸುಮಾರು ಶೇ.53 ರಷ್ಟಿದೆ. ಪ್ರಾಥಮಿಕವಾಗಿ ಮಣಿಪುರ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗವಲ್ಲದ ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದಕ್ಕೆ ಮಣಿಪುರದಲ್ಲಿ ವಿರೋಧ ವ್ಯಕ್ತವಾಗಿದೆ. ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್‌ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಆದಿವಾಸಿಗಳು ಹಾಗೂ ಬುಡಕಟ್ಟು ಜನರ ನಡುವೆ ಹಿಂಸಾಚಾರ ನಡೆದಿದೆ.

ಇದನ್ನೂ ಓದಿ : ಮೌನವಾಗಿದ್ಯಾಕೇ ಮೋಹಕ ತಾರೆ ! ಕೊನೆಗೂ ಅಜ್ಞಾತವಾಸಕ್ಕೆ ಕಾರಣ ಕೊಟ್ಟ ರಮ್ಯ

ಇದನ್ನೂ ಓದಿ : ಬಜರಂಗದಳ ನಿಷೇಧದಿಂದ ಹಿಂದುತ್ವಕ್ಕೆ ಧಕ್ಕೆ, ಕಾಂಗ್ರೆಸ್‌ಗೆ ಪ್ರಣಾಳಿಕೆ ತಂತು ಪ್ರಾಣಸಂಕಟ

ಇದನ್ನೂ ಓದಿ : ಮಣಿಪುರ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕಲು ರಾಜ್ಯಪಾಲರ ಸಮ್ಮತಿ

Manipur Violence Govt Issues Shoot-At-Sight Order

Comments are closed.