ಸೋಮವಾರ, ಏಪ್ರಿಲ್ 28, 2025
HomeSportsCricketWTC Final 2023 : ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಫ್ಯಾನ್’ಗೆ ಆಟೋಗ್ರಾಫ್ ನೀಡಿದ ಹರ್ಭಜನ್ ಸಿಂಗ್

WTC Final 2023 : ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಫ್ಯಾನ್’ಗೆ ಆಟೋಗ್ರಾಫ್ ನೀಡಿದ ಹರ್ಭಜನ್ ಸಿಂಗ್

- Advertisement -

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಲಂಡನ್”ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯದಲ್ಲಿ ಭಾರತ ತಂಡ ಫಾಲೋ ಆನ್ ಸುಳಿಯಲ್ಲಿದೆ.

ಆಸ್ಟ್ರೇಲಿಯಾದ 469 ರನ್’ಗಳಿಗೆ ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ, ದ್ವಿತೀಯ ದಿನದಾಟದ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. ಫಾಲೋ ಆನ್’ನಿಂದ ಪಾರಾಗಲು ಭಾರತ ತಂಡ ಇನ್ನೂ 118 ರನ್ ಗಳಿಸಬೇಕಿದೆ.

ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ (India Vs Australia) ಟೀಮ್ ಇಂಡಿಯಾದ ಮಾಜಿ ದಿಗ್ಗಜ ಆಫ್’ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದಿ ಭಾಷೆಯಲ್ಲಿ ಕಾಮೆಂಟರಿ ಮಾಡುತ್ತಿರುವ ಟರ್ಬನೇಟರ್, ಪಂದ್ಯದ ವಿರಾಮದ ವೇಳೆ ಪಾಕಿಸ್ತಾನದ ಅಂಗವಿಕಲ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಆಟೋಗ್ರಾಫ್ ನೀಡಿ ಗಮನ ಸೆಳೆದಿದ್ದಾರೆ. WTC ಫೈನಲ್ ಪಂದ್ಯದ 2ನೇ ದಿನದಾಟದಲ್ಲಿ ಈ ಘಟನೆ ನಡೆದಿದೆ.

ಪಾಕಿಸ್ತಾನ ತಂಡದ ಜರ್ಸಿ ಹಾಕಿಕೊಂಡಿದ್ದ ಆ ಕ್ರಿಕೆಟ್ ಅಭಿಮಾನಿ ಶೋಯೆಬ್ ಅಖ್ತರ್ ಅವರ ದೊಡ್ಡ ಅಭಿಮಾನಿಯೂ ಹೌದು. ವ್ಹೀಲ್ ಚೇರ್’ನಲ್ಲಿ ಕೂತಿದ್ದ ಪಾಕ್ ಕ್ರಿಕೆಟ್ ಫ್ಯಾನ್ ಬಳಿಗೆ ಹೋದ ಹರ್ಭಜನ್ ಸಿಂಗ್, ಪುಟ್ಟ ಬ್ಯಾಟ್’ಗೆ ತಮ್ಮ ಹಸ್ತಾಕ್ಷರ ಹಾಕಿ ಆ ಕ್ರಿಕೆಟ್ ಅಭಿಮಾನಿಗೆ ನೀಡಿದ್ದಾರೆ. ಆತನ ಜೊತೆ ಕೆಲ ಹೊತ್ತು ಕುಶಲೋಪರಿ ನಡೆಸಿದ ಹರ್ಭಜನ್ ಸಿಂಗ್, ನಂತರ ಬೆನ್ನು ತಟ್ಟಿದ್ದಾರೆ. ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿರುವ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : Virat Kohli: WTC ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರಬೇಕಿತ್ತು ಅಂದ ಕ್ರಿಕೆಟ್ ಫ್ಯಾನ್ಸ್, ಕಾರಣ ಗೊತ್ತಾ?

ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ಫಾಲೋ ಆನ್ ಸುಳಿಗೆ ಸಿಲುಕಿರುವ ಟೀಮ್ ಇಂಡಿಯಾ 151 ರನ್ನಿಗೆ ಪ್ರಮುಖ 5 ವಿಕೆಟ್’ಗಳನ್ನು ಕಳೆದುಕೊಂಡಿದೆ. ನಾಯಕ ರೋಹಿತ್ ಶರ್ಮಾ (15), ಶುಭಮನ್ ಗಿಲ್ (13), ಚೇತೇಶ್ವರ್ ಪೂಜಾರ (14), ಮಾಜಿ ನಾಯಕ ವಿರಾಟ್ ಕೊಹ್ಲಿ (14) ಮತ್ತು ಆಲ್ರೌಂಡರ್ ರವೀಂದ್ರ ಜಡೇಜ (48) ಈಗಾಗಲೇ ಪೆವಿಲಿಯನ್ ಸೇರಿಕೊಂಡಿದ್ದಾರೆ. 71 ರನ್ನಿಗೆ 4 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ರವೀಂದ್ರ ಜಡೇಜ ಮತ್ತು ಅಜಿಂಕ್ಯ ರಹಾನೆ 5ನೇ ವಿಕೆಟ್’ಗೆ 71 ರನ್ ಸೇರಿಸಿ ಕೊಂಚ ಚೇತರಿಕೆ ನೀಡಿದರು. ಆದರೆ 2ನೇ ದಿನದಾಟದ ಕೊನೆಯಲ್ಲಿ ಜಡೇಜ ಔಟಾಗಿದ್ದು ಭಾರತಕ್ಕೆ ಹಿನ್ನಡೆ ತಂದಿಟ್ಟಿದೆ. ಇದೀಗ ಅಜೇಯ 29 ರನ್ ಗಳಿಸಿರುವ ಅಜಿಂಕ್ಯ ರಹಾನೆ ಜೊತೆ ವಿಕೆಟ್ ಕೀಪರ್ ಕೆ.ಎಸ್ ಭರತ್ ಅಜೇಯ 5 ರನ್’ಗಳೊಂದಿಗೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

WTC Final 2023: Harbhajan Singh autographs disabled cricket fan of Pakistan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular