WTC final 2023 : ಭಾರತಕ್ಕೆ ಐಸಿಸಿ ಟ್ರೋಫಿ ಮತ್ತೆ ಮರೀಚಿಕೆ, WTC ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಸೋಲು

ಲಂಡನ್ : 10 ವರ್ಷಗಳ ನಂತರ ಮತ್ತೊಮ್ಮೆ ಐಸಿಸಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ಮತ್ತೆ ಭಗ್ನಗೊಂಡಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ (ICC World test championship final – WTC final 2023) ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳ ಸೋಲು ಅನುಭವಿಸಿತು.

ಗೆಲ್ಲಲು 464 ರನ್‌ಗಳ ಕಠಿಣ ಗುರಿ ಪಡೆದಿದ್ದ ಟೀಮ್ ಇಂಡಿಯಾ 4ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದ ಭಾರತ ಹೋರಾಟದ ಹಾದಿಯಲ್ಲಿತ್ತು. ಆದರೆ 5ನೇ ದಿನದಾಟದ 7ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ (49) ಔಟಾಗುತ್ತಿದ್ದಂತೆ ಭಾರತದ ಕುಸಿತ ಆರಂಭವಾಯಿತು. ಫಸ್ಟ್ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುತ 89 ರನ್ ಗಳಿಸಿ ಭಾರತವನ್ನು ಫಾಲೋ ಆನ್ ಸುಳಿಯಿಂದ ಪಾರು ಮಾಡಿದ್ದ ಅಜಿಂಕ್ಯ ರಹಾನೆ 2ನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿ ಔಟಾದರು. ಜಡೇಜ ಮತ್ತು ಶಾರ್ದೂಲ್ ಶೂನ್ಯಕ್ಕೆ ಔಟಾಗುವುದರೊಂದಿಗೆ ಭಾರತದ ಗೆಲುವಿನ ಕನಸು ಕಮರಿತು. ಅಂತಿಮವಾಗಿ 234 ರನ್‌ಗಳಿಗೆ ಆಲೌಟಾದ ಭಾರತ 209 ರನ್‌ಗಳ ದೊಡ್ಡ ಅಂತರದಲ್ಲಿ ಕಾಂಗರೂಗಳಿಗೆ ಶರಣಾಯಿತು.

ಇದನ್ನೂ ಓದಿ : HS Sharath : ಮಂಡ್ಯ ಎಕ್ಸ್‌ಪ್ರೆಸ್ ಎಚ್.ಎಸ್ ಶರತ್ ಬಾಳಲ್ಲಿ ಹೊಸ ಇನ್ನಿಂಗ್ಸ್, ನಿಶ್ಚಿತಾರ್ಥ ಮಾಡಿಕೊಂಡ ಕರ್ನಾಟಕ ಕ್ರಿಕೆಟರ್

ಇದರೊಂದಿಗೆ ಸತತ 2ನೇ WTC ಫೈನಲ್ ಪಂದ್ಯದಲ್ಲೂ ಭಾರತ ಮುಗ್ಗರಿಸಿತು. 2021ರ WTC ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ಮತ್ತೊಂದೆಡೆ ಇದೇ ಮೊದಲ ಬಾರಿ WTC ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ತಂಡವೆಂಬ ವಿಶ್ವದಾಖಲೆ ನಿರ್ಮಿಸಿತು. ಆಸ್ಟ್ರೇಲಿಯಾ ತಂಡ ಇಲ್ಲಿಯವರೆಗೆ ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ಟಿ20 ವಿಶ್ವಕಪ್ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ.

WTC final 2023 : ICC trophy again for India, defeat against Aussies in WTC final match

Comments are closed.