WTC Final : ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ

ಸೌಂಥಾಪ್ಟನ್ : ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ರೋಹಿತ್ ಶರ್ಮಾ, ಗಿಲ್ ಹಾಗೂ ಪೂಜಾರ ನಿರಾಸೆ ಮೂಡಿಸಿದ್ದಾರೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಟೀಂ ಇಂಡಿಯಾ ಪರ ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಜೊತೆಯಾಟದ ಭರವಸೆಯನ್ನು ನೀಡಿದ್ರು. ಆದ್ರೆ 68 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 34 ರನ್ ಗಳಿಸಿದ್ದ ರೋಹಿತ್ ಶರ್ಮಾ ಕೈಲ್ ಜಮ್ಮಿಸನ್ ಎಸೆತದಲ್ಲಿ ಟೀಮ್ ಸೌಥಿಗೆ ವಿಕೆಟ್ ಒಪ್ಪಿಸಿದ್ರು.

ನಂತರ ಶುಭಮನ್ ಗಿಲ್ ಗೆ ಜೊತೆಯಾದ ಚೆತೇಶ್ವರ ಪೂಜಾರಾ ವಿಕೆಟ್ ಕಚ್ಚಿಕೊಂಡು ಆಡೋದಕ್ಕೆ ಮುಂದಾದ್ರು. ಆದರೆ ಶುಭಮನ್ ಗಿಲ್ 64 ಎಸೆತಗಳನ್ನು ಎದುರಿಸಿ 24 ರನ್ ಗಳಿಸಿ ವಾಗ್ನರ್ ಗೆ ವಿಕೆಟ್ ಒಪ್ಪಿಸಿದ್ರೆ, 54 ಎಸೆತಗಳನ್ನು ಎದುರಿಸಿ ಕೇವಲ 2 ಬೌಂಡರಿ ನೆರವಿನಿಂದ 8 ರನ್ ಗಳಿಸಿದ್ದ ಚೇತೇಶ್ವರ ಪೂಜಾ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಎಲ್ ಬಿ ಬಲೆ ಬಿದ್ರು.

ನಾಯಕ ವಿರಾಟ್ ಕೊಯ್ಲಿ ಜೊತೆಗೆ ಅಜ್ಯಂಕೆ ರಹಾನೆ ಟೀಂ ಇಂಡಿಯಾವನ್ನು ಆಧರಿಸಿದ್ದಾರೆ. ವಿರಾಟ್ ಕೊಯ್ಲಿ 59 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 17 ರನ್ ಗಳಿಸಿದ್ರೆ, ರಹಾನ್ 3 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಭಾರತ ತಂಡ 41 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 91 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

Comments are closed.