WWE Elimination Chamber 2022: WWE ರಣರೋಚಕ ಹೋರಾಟಕ್ಕೆ ಕ್ಷಣಗಣನೆ; ಎಲಿಮಿನೇಷನ್ ಚೇಂಬರ್ ಪಂದ್ಯಗಳನ್ನು ಎಲ್ಲಿ ನೋಡಬಹುದು?

WWE ಎಲಿಮಿನೇಷನ್ ಚೇಂಬರ್ 2022 ಲೈವ್ ಸ್ಟ್ರೀಮ್ ಆರಂಭವಾಗಲಿದ್ದು ಭಾರತ, ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿರುವ ಜನರು ಟಿವಿ ಮತ್ತು ಆನ್‌ಲೈನ್‌ನಲ್ಲಿ ಈ ಶೋವನ್ನು ವೀಕ್ಷಿಸುವುದಾಗಿದೆ. ಈ ಶೋವನ್ನು (WWE Elimination Chamber 2022) ವೀಕ್ಷಿಸುವುದು ಹೇಗೆ? ಎಂಬ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಜೆಡ್ಡಾ ಸೂಪರ್ ಡೋಮ್‌ನಲ್ಲಿ ನಡೆಯಲಿರುವ WWE ಎಲಿಮಿನೇಷನ್ ಚೇಂಬರ್ 2022 ಕುರಿತು ಲೈವ್ ಟೆಲಿಕಾಸ್ಟ್ ಮತ್ತು ಸ್ಟ್ರೀಮಿಂಗ್ (Watch Live WWE Elimination Chamber 2022) ವಿವರಗಳನ್ನು ತಿಳಿಯಿರಿ.

ಇಂದು ಶನಿವಾರ, ಫೆಬ್ರವರಿ 19ರಂದು ರಾತ್ರಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಜೆಡ್ಡಾ ಸೂಪರ್ ಡೋಮ್‌ನಲ್ಲಿ WWE ಎಲಿಮಿನೇಷನ್ ಚೇಂಬರ್ 2022 ರ ಎಲಿಮಿನೇಷನ್ ಚೇಂಬರ್ ಪ್ರೀಮಿಯಂ ಲೈವ್ ಈವೆಂಟ್‌ನ 12 ನೇ ಆವೃತ್ತಿಯನ್ನು ನಡೆಯಲಿದೆ.  ಇದು ಪೇ-ಪರ್-ವ್ಯೂ ಈವೆಂಟ್ ಅನೇಕ ರೋಮಾಂಚಕಾರಿ ಪಂದ್ಯಗಳು ನಡೆಯುವ ನಿರೀಕ್ಷೆ ಅಭಿಮಾನಿಗಳಲ್ಲಿ ಗರಿಗೆದರಿದೆ. WWE ಸೂಪರ್‌ಸ್ಟಾರ್‌ಗಳಾದ ರೋಮನ್ ರೀನ್ಸ್, ಬ್ರಾಕ್ ಲೆಸ್ನರ್, ಗೋಲ್ಡ್‌ಬರ್ಗ್, ರೋಂಡಾ ರೌಸಿ, ರೇ ಮಿಸ್ಟೀರಿಯೊ ಇತರರು ಇಂದು ರಾತ್ರಿ ವಿವಿಧ ಪಂದ್ಯಗಳಲ್ಲಿ ಹೋರಾಡುತ್ತಿದ್ದಾರೆ. ಪುರುಷರ ಎಲಿಮಿನೇಷನ್ ಚೇಂಬರ್ ಪಂದ್ಯದಲ್ಲಿ ಬಾಬಿ ಲ್ಯಾಶ್ಲಿ WWE ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಬ್ರಾಕ್ ಲೆಸ್ನರ್, ಸೇಥ್ ರೋಲಿನ್ಸ್, ಆಸ್ಟಿನ್ ಥಿಯರಿ, ಎಜೆ ಸ್ಟೈಲ್ಸ್ ಮತ್ತು ರಿಡಲ್ ವಿರುದ್ಧ ಸೆಣಸಾಡಿ ಉಳಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಭಾರತದಲ್ಲಿನ ಕುಸ್ತಿ ಅಭಿಮಾನಿಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗೆ ತಮ್ಮ ಟಿವಿಯನ್ನು ಟ್ಯೂನ್ ಮಾಡುವ ಮೂಲಕ ಎಲಿಮಿನೇಷನ್ ಚೇಂಬರ್ 2022 ರ ನೇರ ಪ್ರಸಾರವನ್ನು ಆನಂದಿಸಬಹುದು. ಸೋನಿ ಭಾರತದಲ್ಲಿ WWE ಯ ಅಧಿಕೃತವಾಗಿ ಪ್ರಸಾರ ಮಾಡುವ ಚಾನಲ್ ಆಗಿದೆ. SONY TEN 1, SONY TEN 3 ಮತ್ತು SONY TEN 4 ಚಾನೆಲ್‌ಗಳಲ್ಲಿ ಸಹ ನಾಲ್ಕು ಭಾಷೆಗಳಲ್ಲಿ WWE ಪ್ರಸಾರವು ಲಭ್ಯವಿರುತ್ತದೆ. ಅದೇ ಸಮಯದಲ್ಲಿ, SonyLIV ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಈವೆಂಟ್ ಭಾರತದಲ್ಲಿ ಶನಿವಾರ 10:30 PM IST ಕ್ಕೆ ಪ್ರಾರಂಭವಾಗುತ್ತದೆ.

ಈ ಮಧ್ಯೆ, ಮಹಿಳೆಯರ ಎಲಿಮಿನೇಷನ್ ಚೇಂಬರ್ ಪಂದ್ಯದ ಫಲಿತಾಂಶವು WWE ಸ್ಮ್ಯಾಕ್‌ಡೌನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಯಾರು ಪಡೆಯುತ್ತಾರೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸ್ಮ್ಯಾಕ್‌ಡೌನ್ ಟ್ಯಾಗ್ ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿ ವಿಭಾಗದಲ್ಲಿ ಎಲಿಮಿನೇಷನ್ ಚೇಂಬರ್ 2022 ರಲ್ಲಿ ವೈಕಿಂಗ್ ರೈಡರ್ಸ್ ಮತ್ತು ದ ಯುಸೋಸ್ ಪ್ರಶಸ್ತಿಗಾಗಿ ಹೋರಾಡಲಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(WWE Elimination Chamber 2022 how to watch live streaming in India)

Comments are closed.