ಯುವರಾಜ್ ಸಿಂಗ್, ಯೂಸೂಪ್ ಪಠಾಣ್ ಅಬ್ಬರ : ಶ್ರೀಲಂಕಾ ಲೆಜೆಂಡ್ಸ್ ಗೆ 182 ರನ್ ಟಾರ್ಗೆಟ್

ರಾಯ್ ಪುರ : ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಹಾಗೂ ಯೂಸೂಫ್ ಪಠಾಣ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಲೆಜೆಂಡ್ಸ್ ತಂಡ ಶ್ರೀಲಂಕಾ ಲೆಜೆಂಡ್ಸ್ ತಂಡಕ್ಕೆ 182 ರನ್ ಟಾರ್ಗೆಟ್ ನೀಡಿದೆ.

ರಾಯ್ ಪುರದ ಶಾಹೀದ್ ವೀರ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಡ್ ಸೇಫ್ಟಿ ವಲ್ಡ್ ಸೀರಿಸ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಲೆಜೆಂಡ್ಸ್ ತಂಡಕ್ಕೆ ರಂಗನಾ ಹೆರಾತ್ ಆರಂಭಿಕ ಆಘಾತ ನೀಡಿದ್ರು. 10 ರನ್ ಗಳಿಸಿದ್ದ ವೀರೇಂದ್ರ ಸೆಹವಾಗ್ ಗೆ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಬದ್ರಿನಾಥ್ 7 ರನ್ ಗಳಿಸಿದಾ ಜಯಸೂರ್ಯಗೆ ವಿಕೆಟ್ ಒಪ್ಪಿಸಿದ್ರು. ನಂತರ ಸಚಿನ್ ತೆಂಡೂಲ್ಕರ್ ಗೆ ಜೊತೆಯಾದ ಯುವರಾಜ್ ಸಿಂಗ್ ಸ್ಪೋಟಕ ಆಟಕ್ಕೆ ಮನಮಾಡಿದ್ರು. 23 ಎಸೆತಗಳಲ್ಲಿ 30 ರನ್ ಗಳಿಸಿದ್ದ ಸಚಿನ್ ಮಹಾರೂಪ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ನಂತರ ಯುವರಾಜ್ ಸಿಂಗ್ ಜೊತೆಯಾದ ಯೂಸೂಫ್ ಪಠಾಣ್ ಭರ್ಜರಿ ಜೊತೆಯಾಟವಾಡಿದ್ರು. 41 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 60 ರನ್ ಗಳಿಸಿದ್ರೆ, ಯೂಸೂಫ್ ಪಠಾಣ್ 36 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ 62 ರನ್ ಬಾರಿಸಿದ್ದಾರೆ. ಇರ್ಫಾನ್ ಪಠಾಣ್ ಸಿಡಿಸಿದ 8 ರನ್ ನೆರವಿನಿಂದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 181ರನ್ ಗಳಿಸಿದ್ದಾರೆ.

https://kannada.newsnext.live/hotel-police-raid-23-persons-arrest-greater-noida/

ಶ್ರೀಲಂಕಾ ಪರ ರಂಗನ ಹೆರಾತ್, ಸನತ್ ಜಯಸೂರ್ಯ, ಮಹಾರೂಪ್ ಹಾಗೂ ವೀರ ರತ್ನೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.

Comments are closed.