ಪ್ಲ್ಯಾಟ್ ಗಳ ಬೆಲೆಯನ್ನು ಇಳಿಸದ ಬಿಲ್ಡರ್ಸ್ ಗಳಿಗೆ ಬಿಗ್ ಶಾಕ್ ..!!!

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಹಲವು ಉದ್ಯಮಗಳು ಚೇತರಿಕೆಯನ್ನು ಕಾಣುತ್ತಿಲ್ಲ. ಅದ್ರಲ್ಲೂ ಜಿಎಸ್ ಟಿ ಜಾರಿಯಾದರೂ ಬೆಲೆ ಇಳಿಸದ ಬಿಲ್ಡರ್ಸ್ ಗಳಿಗೆ ಬಿಸಿ ಮುಟ್ಟಿಸಲು ಎನ್ ಎಎ ಮುಂದಾಗಿದೆ.

ಆರ್ಥಿಕ ಸಂಕಷ್ಟದಿಂದಾಗಿ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲ ಹೂಡಿಕೆದಾರರನ್ನು ಕಾಡುತ್ತಿದೆ. ಅದ್ರಲ್ಲೂ ಜಿಎಸ್ ಟಿ ಜಾರಿಯಾದ ನಂತರದಲ್ಲಿ ಪ್ಲ್ಯಾಟ್ ಗಳ ಬೆಲೆಯನ್ನು ಇಳಿಕೆ ಮಾಡಬೇಕಾಗಿತ್ತು. ಆದರೆ ಬಿಲ್ಡರ್ಸ್ ಗಳು ಮಾತ್ರ ಬೆಲೆಯನ್ನು ಇಳಿಕೆ ಮಾಡಿಲ್ಲ. ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ ಬಿಲ್ಡರ್ಸ್ ಗಳಿಗೆ ಛಾಟಿಯೇಟು ನೀಡಿದೆ.. ಫ್ಲ್ಯಾಟ್ ಗಳ ಬೆಲೆಯನ್ನು ಕಡಿಮೆ ಮಾಡದ ಬಿಲ್ಡರ್ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಇಬ್ಬರು ಬಿಲ್ಡರ್ಸ್ ಗಳ ವಿರುದ್ದ ಆದೇಶ ಹೊರಡಿಸಿದೆ.

ಇದುವರೆಗೆ ಒಟ್ಟು ಶೇ.80ರಷ್ಟು ಪ್ರಕರಣಗಳಲ್ಲಿ ಬಿಲ್ಡರ್ಸ್ ಗಳು ದೋಷಿಗಳೆಂದು ಪರಿಗಣಿಸಲಾಗಿದೆ. ಈ ಬಿಲ್ಡರ್ಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನಲ್ಲಿ ಬರುವ ಲಾಭವನ್ನು ತಾವೇ ಪಡೆದುಕೊಂಡಿದ್ದಾರೆ. ಈ ಲಾಭಾಂಶವನ್ನು ಮನೆ ಖರೀದಿದಾರರಿಗೆ ಕೊಟ್ಟಿಲ್ಲ. ಹೀಗಾಗಿ ಅವರ ಮೇಲೆ ಪ್ರಾಫಿಟಿಯರಿಂಗ್ ಚಾರ್ಜ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಲ್ಡರ್ಸ್ ಗಳಿಗೆ ಸಂಕಷ್ಟ ಎದುರಾಗಲಿದೆ.

Comments are closed.