fell into the water :ಕಲಬುರಗಿಯಲ್ಲಿ ಮಿತಿ ಮೀರಿದ ವರುಣನ ಅಬ್ಬರ : ಬಟ್ಟೆ ತೊಳೆಯಲು ಹೋದ ಯುವತಿ ನೀರುಪಾಲು

ಕಲಬುರಗಿ : fell into the water : ಕಲಬುರಗಿ ಜಿಲ್ಲೆಯ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ‌. ಈ ನಡುವೆ ಬಟ್ಟೆ ತೊಳೆಯಲು ಹೋದ ಯುವತಿಯೊಬ್ಬಳು ಹಳ್ಳದಲ್ಲಿ ಕೊಚ್ಚಿ ಹೋದ ದುರ್ಘಟನೆ ನಡೆದಿದೆ. ಕಮಲಾಪುರ ತಾಲೂಕಿನ ಲಾಡ ಮುಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಚ್ಚಿ ಹೋದ ಯುವತಿಯನ್ನು ಲಾಡಮುಗಳಿ ಗ್ರಾಮದ ಹದಿನೆಂಟು ವರ್ಷ ವಯಸ್ಸಿನ ದಾನೇಶ್ವರಿ ಎಂದು ಹೆಸರಿಸಲಾಗಿದೆ. ಮಧ್ಯಾಹ್ನ ತನ್ನ ತಾಯಿಯ ಜೊತೆ ದಾನೇಶ್ವರಿ ಬಟ್ಟೆ ತೊಳೆಯುವುದಕ್ಕೆ ಹಳ್ಳಕ್ಕೆ ಹೋಗಿದ್ದಳು. ಆದ್ರೆ ಬಟ್ಟೆ ತೊಳೆಯುವ ಸಂದರ್ಭದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ನೀರಿನ ರಭಸ ಹೆಚ್ಚಾಗಿ ಯುವತಿ ಕೊಚ್ಚಿಕೊಂಡು ಹೋಗಿದ್ದಾಳೆ. ಹಳ್ಳದಲ್ಲಿ ಕೊಚ್ಚಿ ಹೋದ ಯುವತಿಗಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಆಳಂದ ತಾಲೂಕಿನ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಮಧ್ಯಾಹ್ನ ನಂತರ ಸುರಿದ ಧಾರಾಕಾರ ಮಳೆಯಿಂದಾಗಿ ಚಿಚಂನಸೂರ ಗ್ರಾಮಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತವಾಗಿದೆ‌. ಕಲ್ಲಹಂಗರಗಾ ಗ್ರಾಮದ ಹೊರ ವಲಯದಲ್ಲಿರುವ ಬ್ರಿಡ್ಜ್ ಮಳೆ ನೀರಿನಿಂದ ಜಲಾವೃತಗೊಂಡ ಪರಿಣಾಮ ಜಂಬಗಾ ಕ್ರಾಸ್ ಕಲ್ಲಹಂಗರಗಾ ಮಾರ್ಗವಾಗಿ ಚಿಚಂನಸೂರ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಮಳೆ ನೀರಿನಿಂದ ಜಲಾವೃತವಾಗಿದೆ. ಆಳಂದ ತಾಲೂಕಿನ ಚಿಚಂನಸೂರ ಗ್ರಾಮ ಸೇರಿದಂತೆ ಲಿಂಗನವಾಡಿ ತೋಳನವಾಡಿ ಬೋಧನ ಕಮಲಾನಗರ ಸೇರಿದಂತೆ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ.

ಇನ್ನು ಮಾದನ ಹಿಪ್ಪರಗಾ- ಕೆಲಗೇರಾ ಗ್ರಾಮದ ನಡುವಿನ ಸಂಪರ್ಕವೂ ಕಡಿತಗೊಂಡಿದ್ದು ಎರಡು ಗ್ರಾಮದ ನಡುವೆ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಸೇತುವೆ ಜಲಾವೃತವಾಗಿರುವ ಪರಿಣಾಮ ಕೆಲಗೇರಾದಿಂದ ಮಾದನ ಹಿಪ್ಪರಗಾ
ಮಾದನ ಹಿಪ್ಪರಗಾದಿಂದ ಕೆಲಗೇರಾ ಗ್ರಾಮಕ್ಕೆ ಹೋಗಲು ಜನರ ಪರದಾಟ ನಡೆಸುವಂತಾಗಿದೆ.

ಕಲಬುರಗಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 12ರವರೆಗೆ ಭಾರಿ ಮಳೆಯಾಗೋ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ‌. ಹೀಗಾಗಿ ಕಲಬುರಗಿ ಜಿಲ್ಲಾಡಳಿತ ಭೀಮಾ ನದಿ ತೀರದ ಜನರಿಗೆ ನದಿಗೆ ಇಳಿಯದಂತೆ ಸೂಚನೆ ನೀಡಿದೆ. ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ಸೇರಿ ಭೀಮಾ ಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನದಿ ದಂಡೆಗೆ ಹೋಗದಂತೆ ಜಿಲ್ಲಾಧಿಕಾರಿ ಯಶವಂತ್ ಸೂಚನೆ ನೀಡಿದ್ದಾರೆ.

ಇದನ್ನು ಓದಿ : coconut shell : ಕಸದಿಂದ ರಸ : ತೆಂಗಿನ ಚಿಪ್ಪಿನಿಂದ ನಿರ್ಮಾಣವಾಗ್ತಿದೆ ಸುಂದರ ಪೀಠೋಪಕರಣ

ಇದನ್ನೂ ಓದಿ : grandson who killed his grandfather :ಆಸ್ತಿ ಆಸೆಗಾಗಿ ತಾತನನ್ನೇ ಕೊಂದ ಪಾಪಿ ಮೊಮ್ಮಗ ಅಂದರ್​​

A young woman who went to wash her clothes fell into the water and died

Comments are closed.