Intergange plant : ಕರಾವಳಿಯಲ್ಲಿ ಹೆಚ್ಚಾಯ್ತು ‘ಅಂತರಗಂಗೆ’ ಅವಾಂತರ : ಪಾಳು ಬಿದ್ದ ರೈತರ ಜಮೀನುಗಳು

ಉಡುಪಿ: Intergange plant : ಸಿಹಿ ಜಾಸ್ತಿಯಾದ್ರೆ ವಾಕರಿಕೆ ಬರುತ್ತೆ. ಅತೀ ಆದ್ರೆ ಅಮೃತಾನೂ ವಿಷವಾಗುತ್ತೆ. ಮನೆಯ ಸೌಂದರ್ಯ ಹೆಚ್ಚಿಸಬೇಕಾದ ಅಂತರಗಂಗೆ ಊರನ್ನೇ ಕುರೂಪಗೊಳಿಸುತ್ತಿದೆ. ಉಡುಪಿಯ ಕುಂದಾಪುರ, ಕಾರ್ಕಳದಲ್ಲಿ ಕಳೆದ 12 ವರ್ಷಗಳಿಂದ ಅಂತರಗಂಗೆಯ ಅವಾಂತರ ಜಾಸ್ತಿಯಾಗುತ್ತಿದೆ. ಜಮೀನನ್ನು ಪಾಳಾದ್ರೂ ಬಿಡ್ತೇವೆ ಬೇಸಾಯ ಮಾಡೋ ಗೋಜಿಗೆ ಹೋಗಲ್ಲ ಅಂತಿದ್ದಾರೆ ಇಲ್ಲಿನ ರೈತರು.

ಹೌದು..ಈ ಚಿತ್ರದಲ್ಲಿ ಕಾಣಿಸುತ್ತಿರುವ ಗಿಡದ ಹೆಸರು ಅಂತರಗಂಗೆ. ನೋಡಲು ತಾವರೆಯ ಎಲೆಯಷ್ಟೇ ಚಂದ. ಕೊಳದಲ್ಲಿ ಹರಡಿ ಬಿಟ್ಟರೆ ಮನೆಯ ಸೌಂದರ್ಯವನ್ನೇ ಹೆಚ್ಚಿಸುವಷ್ಟು ಅಂದ. ಅತೀಯಾದ್ರೆ ಅಮೃತಾನೂ ವಿಷವಾಗುತ್ತೆ ಅಂತಾರಲ್ಲ ಹಾಗಾಗಿದೆ ಇದ್ರ ಸ್ಥಿತಿ. ಯಾರೋ ಮನೆಯ ಶೃಂಗಾರಕ್ಕೆ ತಂದ ಈ ಗಿಡ ಇಡೀ ಊರನ್ನೇ ನುಂಗಿ ನೀರು ಕುಡಿಯುತ್ತಿದೆ. ಊರಿನ ಗದ್ದೆಗಳ ತುಂಬಾ ಹರಡಿಕೊಂಡು ಯಾವುದೇ ಬೆಳೆ ಬೆಳೆಯದಂತಾಗಿದೆ. ಒಂದು ಗಿಡ ದಿನಕ್ಕೆ ನಾಲ್ಕು ಕವಲೊಡೆಯುತ್ತದೆ. ಹೀಗಾಗಿ ಅಂತರಗಂಗೆ ಕಳೆದ 12 ವರ್ಷದಲ್ಲಿ ಕುಂದಾಪುರ, ಕಾರ್ಕಳ ತಾಲೂಕಿನಾದ್ಯಂತ ಆವರಿಸಿಬಿಟ್ಟಿದೆ. ಬೇಕಾಬಿಟ್ಟಿ ಬೆಳೆದು ರೈತರ ನೆಮ್ಮದಿಗೆಡಿಸಿದೆ.

ಕೆದೂರು,ಒಳ್ತೂರು,ಕೋಟ,ತೆಕ್ಕಟ್ಟೆ ಪರಿಸರದ ಸಾವಿರಾರು ಎಕರೆ ಭತ್ತದ ಗದ್ದೆಯಲ್ಲಿ ಅಂತರಗಂಗೆ ಪಸರಿಸಿದೆ. ಗದ್ದೆಯಿಂದ ಮೇಲೆತ್ತಿ ಹಾಕಿದರೆ ಅಂತರಗಂಗೆ ಸಾಯುತ್ತದೆ. ಮಳೆಗಾಲ ಬಂತೆಂದ್ರೆ ಮರುಜೀವ ಪಡೆಯುತ್ತದೆ.ಈ ಭಾರೀಯ ಮಳೆಗೆ ನೆರೆಯಲ್ಲಿ ಮತ್ತಷ್ಟು ಅಂತರಗಂಗೆ ತೇಲಿ ಬಂದಿದೆ. ಗದ್ದೆಗಿಳಿದು ಪಾಚಿಜಾತಿಯ ಗಿಡವನ್ನು ಬಾಚಿ ತೆಗೆದರೂ ಅದರಿಂದ ಮುಕ್ತಿ ಸಿಗುತ್ತಿಲ್ಲ. ರೈತರು ಉತ್ತಮ ಇಳುವರಿ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸಾವಿರಾರು ಎಕ್ರೆ ಕೃಷಿಭೂಮಿ ಹಾಳಾದ್ರೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸ್ಲೇ ಇಲ್ಲ.

ಒಂದೊಂದು ಗಿಡದಲ್ಲೂ ನೂರಾರು ಬೀಜಗಳಿರುತ್ತದೆ. ನಿರಂತರವಾಗಿ ಅವು ಕವಲೊಡೆದು ಗಿಡಗಳಾಗುತ್ತದೆ. ಬೇಸಿಗೆಯಲ್ಲಿ ರಾಸಾಯನಿಕ ಸಿಂಪಡಿಸಿ- ಗಿಡಗಳನ್ನು ಕೊಳೆಸಿದರೆ ಅಂತರಗಂಗೆಯನ್ನು ನಿರ್ಮೂಲನ ಮಾಡಬಹುದಂತೆ. ಆದರೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಧಿಕಾರಿಗಳೇ ಬಾಯ್ಮುಚ್ಚಿ ಸುಮ್ಮನಿರುವುದು ಮಾತ್ರ ದುರಾದೃಷ್ಟಕರ.

ಇದನ್ನು ಓದಿ : grandson who killed his grandfather :ಆಸ್ತಿ ಆಸೆಗಾಗಿ ತಾತನನ್ನೇ ಕೊಂದ ಪಾಪಿ ಮೊಮ್ಮಗ ಅಂದರ್​​

ಇದನ್ನೂ ಓದಿ : fell into the water :ಕಲಬುರಗಿಯಲ್ಲಿ ಮಿತಿ ಮೀರಿದ ವರುಣನ ಅಬ್ಬರ : ಬಟ್ಟೆ ತೊಳೆಯಲು ಹೋದ ಯುವತಿ ನೀರುಪಾಲು

In the coastal districts, the problem is caused by Intergange plant

Comments are closed.