CSK : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್‌ ಶಾಕ್‌ : ರುತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ಆಡುವುದೇ ಅನುಮಾನ

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಮಾರ್ಚ್‌ 26 ರಿಂದ ಭಾರತೀಯ ಮೆಗಾ ಕ್ರಿಕೆಟ್ ಹಬ್ಬ IPL 2022 ಪ್ರಾರಂಭವಾಗಲಿದೆ. ಈಗಾಗಲೇ ಹತ್ತು ತಂಡಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಆದರೆ ಈ ನಡುವಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ( CSK ) ತಂಡಕ್ಕೆ ಬಿಗ್‌ ಶಾಕ್‌ವೊಂದು ಎದುರಾಗಿದೆ. ಕಳೆದ ಬಾರಿಯ ಸಿಎಸ್‌ಕೆ ತಂಡದ ಪರ ಅತೀ ಹೆಚ್ಚು ರನ್‌ಗಳಿಸಿ ಯುವ ಆಟಗಾರ ರುತುರಾಜ್‌ ಗಾಯಕ್ವಾಡ್‌ ಈ ಬಾರಿ ಐಪಿಎಲ್‌ನಲ್ಲಿ ಆಡುವುದೇ ಅನುಮಾನವಾಗಿದೆ.

ಐಪಿಎಲ್‌ನಲ್ಲಿ ತೋರಿದ್ದ ಅದ್ಬುತ ಆಟದಿಂದಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರಿಗೆ ದುರದೃಷ್ಟವಶಾತ್ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಶ್ರೀಲಂಕಾ ವಿರುದ್ದ ಸರಣಿಗೆ ಆಯ್ಕೆಯಾಗಿದ್ದ ಗಾಯಕ್ವಾಡ್‌ ಅವರ ಬದಲು ಮಯಾಂಕ್‌ ಅಗರ್ವಾಲ್‌ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಗಾಯಕ್ವಾಡ್‌ ಇನ್ನೂ ಚೇತರಿಸಿಕೊಳ್ಳದಿರುವುದು ಚೆನ್ನೈ ಪಾಳಯಕ್ಕೆ ಆತಂಕ ಮೂಡಿಸಿದೆ.

ಐಪಿಎಲ್‌ ( IPL 2022 ) ರ ಆರಂಭಕ್ಕೆ ಮೊದಲು ದೀಪಕ್ ಚಹಾರ್ ಅವರು ಹೊರಬಿದ್ದಿದ್ದು, IPL 2022 ರ ಮೆಗಾ ಹರಾಜಿನಲ್ಲಿ ವೇಗದ ಬೌಲರ್ ದೀಪಕ್ ಚಹಾರ್ ಅವರನ್ನು 14 ಕೋಟಿ ರೂಪಾಯಿಗಳ ಬೃಹತ್ ಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮರಳಿ ಕರೆತಂದಿತ್ತು. ಆದರೆ ಇನ್ನೂ ವಿಶ್ರಾಂತಿ ಅವಶ್ಯಕತೆಯಿರುವ ಹಿನ್ನೆಲೆಯಲ್ಲೀಗ ದೀಪಕ್‌ ಚಹರ್‌ ಐಪಿಎಲ್‌ ಆಡುವುದು ಅನುಮಾನವಾಗಿದೆ. ಇದರ ಬೆನ್ನಲ್ಲೇ ಇದೀಗ ಗಾಯಕ್ವಾಡ್‌ ಕೂಡ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಕಳೆದ ಬಾರಿಯ ಐಪಿಎಲ್‌ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮಾರ್ಚ್ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಚಾಂಪಿಯನ್ಸ್ ತಮ್ಮ ಐಪಿಎಲ್ 2022 ರ ಅಭಿಯಾನವನ್ನು ಆರಂಭಿಸಲಿದೆ. ಸಿಎಸ್‌ಕೆ ತಂಡದ ಸಿಇಒ, ಕಾಸಿ ವಿಶ್ವನಾಥನ್ ಅವರು ಭಾನುವಾರ ಚಹಾರ್ ಮತ್ತು ಗಾಯಕ್ವಾಡ್ ಅವರ ಫಿಟ್ನೆಸ್ ಕುರಿತು ಮಾಹಿತಿ ನೀಡಿದ್ದಾರೆ. ತಂಡದ ನಿರ್ವಹಣೆಯು ತನ್ನ ಪ್ರಮುಖ ಆಟಗಾರರ ಫಿಟ್‌ನೆಸ್ ಮಟ್ಟವನ್ನು ನವೀಕರಿಸಲು ಇನ್ನೂ ಕಾಯುತ್ತಿದೆ ಎಂದು ಅವರು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೂರತ್‌ನಲ್ಲಿ ತರಬೇತಿ ಪಡೆಯುತ್ತಿದೆ. “ನಮಗೆ ಅವರ ಪ್ರಸ್ತುತ ಫಿಟ್‌ನೆಸ್ ಸ್ಥಿತಿಯ ಬಗ್ಗೆ ತಿಳಿದಿಲ್ಲ ಮತ್ತು ಅವರು ಯಾವಾಗ ತಂಡಕ್ಕೆ ಸೇರುತ್ತಾರೆ ಎಂದು ನಿಮಗೆ ಹೇಳಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಒಂದೊಮ್ಮೆ ಅವರು ಫಿಟ್‌ ಆಗಿದ್ದರೆ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ನಮಗೆ ಹೇಳಿದೆ. ಸದ್ಯ ಅವರು ಎನ್‌ಸಿಎ ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಎಲ್ಲಾ ಭಾರತ ತಂಡದ ಆಟಗಾರರು ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಲು NCA ಯಲ್ಲಿ ಹಾಜರಿರಬೇಕು. ಎನ್‌ಸಿಎಯಲ್ಲಿ ಸಂಪೂರ್ಣ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆದವರಿಗೆ ಮಾತ್ರವೇ ಫಿಟ್ನೆಸ್‌ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದಿದ್ದಾರೆ.

CSK ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ:

ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ದೀಪಕ್ ಚಾಹರ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡೆವೊನ್ ಕಾನ್ವೆ, ಸುಭ್ರಾಂಶು ಸೇನಾಪತಿ, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಆಡಮ್ ಚೋವ್ಯ್, ಮುಕೆಶ್ನೇಹ್, ಮುಕೆಶ್ನೇಹ್, ಬಿ. , ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಎನ್ ಜಗದೀಸನ್, ಹರಿ ನಿಶಾಂತ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ

ಇದನ್ನೂ ಓದಿ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಡು ಪ್ಲೆಸಿಸ್‌ ನಾಯಕ

ಇದನ್ನೂ ಓದಿ : IPL 2022 : RCBಯ ಖ್ಯಾತ ಆಟಗಾರ ಕೆಕೆಆರ್‌ಗೆ ಸೇರ್ಪಡೆ

(After Deepak Chahar another CSK Top Player to miss IPL 2022)

Comments are closed.