disha patani : ಸೀರೆಯನ್ನುಟ್ಟು ಹಾಟ್​ ಆಗಿ ಕಾಣಿಸಿದ ನಟಿ ದಿಶಾ ಪಠಾಣಿ : ಫಿದಾ ಆದ ನೆಟ್ಟಿಗರು

disha patani : ಬಾಲಿವುಡ್​​ನಲ್ಲಿ ತೆರೆಕಂಡ ಎಂಎಸ್​ ಧೋನಿ ಸಿನಿಮಾದ ಮೂಲಕ ಹೆಸರು ಮಾಡಿರುವ ನಟಿ ದಿಶಾ ಪಠಾಣಿ ಅದಾದ ಬಳಿಕ ಮಾಡಿದ ಯಾವುದೇ ಸಿನಿಮಾಗಳು ಅಷ್ಟರ ಮಟ್ಟಿಗೆ ಸದ್ದು ಮಾಡಿಲ್ಲ. ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದೇ ಇದ್ದರೂ ಸಹ ನಟಿ ದಿಶಾ ಪಠಾಣಿ ತಮ್ಮ ಸೋಶಿಯಲ್​ ಮಿಡಿಯಾ ಖಾತೆಗಳ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಎಂದಿಗೂ ವಿಫಲರಾಗಿಲ್ಲ. ಫಿಟ್​ನೆಟ್​​​ ವಿಡಿಯೋಗಳು, ಹಾಟ್​ ಲುಕ್​ಗಳ ಮೂಲಕ ನಟಿ ದಿಶಾ ಪಠಾಣಿ ಪಡ್ಡೆ ಹುಡುಗರ ಮನ ಕದಿಯುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ. ಫಿಟ್​ನೆಸ್​ ಒಂದನ್ನು ಕಾಯ್ದುಕೊಂಡರೆ ನೀವು ಬಿಕಿನಿಯಲ್ಲ ಸೀರೆ ಧರಿಸಿದರೂ ಸಹಾ ಸೆಕ್ಸಿಯಾಗೇ ಕಾಣುತ್ತೀರಿ ಎಂಬುದನ್ನು ಸಾಬೀತುಪಡಿಸಿದ್ದಾರೆ ನಟಿ ದಿಶಾ ಪಠಾನಿ.

ತಮ್ಮ ಸೋಶಿಯಲ್​ ಮೀಡಿಯಾ ಖಾತೆ ಇನ್​ಸ್ಟಾಗ್ರಾಂನಲ್ಲಿ ನಟಿ ದಿಶಾ ಪಠಾಣಿ ಗುಲಾಬಿ ಬಣ್ಣದ ನೇಟೆಡ್​ ಸೀರೆಯನ್ನುಟ್ಟು ಕಂಗೊಳಿಸಿದ್ದಾರೆ. ಬೆಳ್ಳಿ ಬಣ್ಣದ ಸ್ಲೀವ್​ಲೆಸ್​ ಬ್ಲೌಸ್​​ ದಿಶಾ ಪಠಾಣಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಕೂದಲನ್ನು ಕಟ್ಟದೇ ಹಾಗೇ ಬಿಟ್ಟಿರುವ ದಿಶಾ ಅತ್ಯಂತ ಸಿಂಪಲ್​ ಆಗಿ ಮೇಕಪ್​ ಮಾಡಿಕೊಂಡಿದ್ದಾರೆ.

ಕತ್ತಿಗೆ ಯಾವುದೇ ಆಭರಣವನ್ನು ಧರಿಸದೇ ಕಿವಿಯೋಲೆಯನ್ನು ಮಾತ್ರ ಹಾಕಿರುವ ದಿಶಾ ಪಠಾಣಿ ಮತ್ತಷ್ಟು ಹಾಟ್​ ಆಗಿ ಕಾಣ್ತಿದ್ದಾರೆ.

ಸದಾ ಗ್ಲಾಮರಸ್​ ಲುಕ್​ ಮೂಲಕ ಗಮನ ಸೆಳೆಯುವ ದಿಶಾ ಪಠಾಣಿ ಈ ಬಾರಿ ಸೀರೆಯನ್ನುಟ್ಟು ಪಡ್ಡೆ ಹುಡುಗರ ಎದೆ ಝಲ್​ ಎನಿಸುವಂತೆ ಮಾಡಿದ್ದಾರೆ.

disha patani cuts a sensuous figure in pink net saree

ದಿಶಾ ಪಠಾಣಿ ಸೀರೆ ಲುಕ್​​ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಅನೇಕರು ನೀವು ವೆಸ್ಟರ್ನ್​ ಬಟ್ಟೆಗಳಿಗಿಂತ ಸೀರೆಯಲ್ಲಿಯೇ ಹೆಚ್ಚು ಚಂದ ಕಾಣುತ್ತೀರಿ ಅಂತಾ ಕೂಡ ಹೇಳ್ತಿದ್ದಾರೆ.

disha patani cuts a sensuous figure in pink net saree

ನಟಿ ದಿಶಾ ಪಠಾಣಿ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಬಾಲಿವುಡ್​​ನ ಕೇ ಟಿನಾ, ಯೋಧಾ ಹಾಗೂ ತೆಲುಗಿನ ಕೆ ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ.

ಇದನ್ನು ಓದಿ : Sachin Vs Kohli 33 phobia: ಅಂದು ಸಚಿನ್, ಇಂದು ವಿರಾಟ್.. ಬ್ಯಾಟಿಂಗ್ ದಿಗ್ಗಜರಿಗೆ ‘33’ ಫೋಬಿಯಾ

ಇದನ್ನೂ ಓದಿ : man arrested for rape : ನಿರಂತರ ಅತ್ಯಾಚಾರವೆಸಗಿ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ 50ರ ಕಾಮುಕ ಅರೆಸ್ಟ್​

disha patani cuts a sensuous figure in pink net saree

Comments are closed.