ಕಾವೇರಿ ಮರೆತ್ರೂ ತಮಿಳು ಒಲೈಕೆ ಮರೆಯದ ಪ್ರಕಾಶ್ ರಾಜ್: ಟ್ವೀಟ್ ಮೂಲಕ ಹೊಸ ವಿವಾದ ಸೃಷಿಸಿದ ಬಹುಭಾಷಾ ನಟ

ಕಾವೇರಿ ನದಿ ನೀರು ವಿವಾದ (Cauvery Water Contravercy) ಉಲ್ಬಣಿಸಿದೆ. ಬಹುಭಾಷಾ ನಟ ಪ್ರಕಾಶ್ ರಾಜ್‌ (Prakash Raj). ಕರ್ನಾಟಕದಲ್ಲಿ ತಮಿಳು ನಟನಿಗೆ ಅವಮಾನವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರು : ಕಾವೇರಿ ನದಿ ನೀರು ವಿವಾದ (Cauvery Water Contravercy) ಉಲ್ಬಣಿಸಿದೆ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಬಿಡೋದನ್ನು ವಿರೋಧಿಸಿ ರೈತ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ ಹೀಗೆ ನಾನಾಸಂಘಟನೆಗಳು ಬೀದಿಗಿಳಿದಿವೆ (Karnataka Bandh). ಆದರೇ ಈ ವಿವಾದದ ವೇಳೆಯೆಲ್ಲ ಮೌನವಹಿಸಿ, ಕಾವೇರಿ ಅಥವಾ ಕರ್ನಾಟಕದ ಪರ ಒಂದೂ ಮಾತನಾಡದ ಬಹುಭಾಷಾ ನಟ ಪ್ರಕಾಶ್ ರಾಜ್‌ (Prakash Raj). ಕರ್ನಾಟಕದಲ್ಲಿ ತಮಿಳು ನಟನಿಗೆ ಅವಮಾನವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕರ್ನಾಟಕದಲ್ಲಿ ಸಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಸೇರಿದಂತೆ ನೂರಾರು ಸಂಘಟನೆ ಗಳು, ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರು ಹೀಗೆ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಕರುನಾಡು ಕಾವೇರಿಗಾಗಿ ಸ್ತಬ್ಧವಾಗಿದೆ. ಹೀಗೆ ಕಾವೇರಿ ಹೋರಾಟಕ್ಕೆ ಸಿದ್ಧವಾಗುತ್ತಿದ್ದ ವೇಳೆ ನಗರದಲ್ಲಿ ನಡೆದಿದ್ದ ತಮಿಳು ಸಿನಿಮಾದ ಸುದ್ದಿ ಗೋಷ್ಟಿ ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಕೆರಳಿಸಿದೆ.

ಹೀಗಾಗಿ ನಗರದಲ್ಲಿ ನಡೆಯುತ್ತಿದ್ದ ತಮಿಳು ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಚಿಕ್ಕು ಪತ್ರಿಕಾಗೋಷ್ಠಿಗೆ ಅಡ್ಡಿ ಪಡಿಸಿದ್ದಾರೆ. ಚಿಕ್ಕು ಸಿನಿಮಾದ ರಿಲೀಸ್ ಕುರಿತಂತೆ ನಟ ಸಿದ್ಧಾರ್ಥ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಸಿದ್ಧಾರ್ಥ ಸುದ್ದಿಗೋಷ್ಠಿಗೆ ಅಡ್ಡಿ ಪಡಿಸಿದರು.

ಇದನ್ನೂ ಓದಿ : ಕರ್ನಾಟಕ ಬಂದ್‌ : ಕರಾವಳಿಗೆ ತಟ್ಟದ ಬಂದ್‌ ಬಿಸಿ, ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಬೆಂಗಳೂರಲ್ಲಿ ಬಾರೀ ಆಕ್ರೋಶ

ಸಿನಿಮಾ ಪ್ರದರ್ಶನಕ್ಕಿಂತ ಕಾವೇರಿ ವಿವಾದ ಬಗೆಹರಿಸೋದು ಮುಖ್ಯ ನಾವು 15 ದಿನಗಳಿಂದ ಹೋರಾಟ ಮಾಡ್ತಿದ್ದೇವೆ. ನಿಮಗೆ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಪ್ರಮೋಶನ್ ಮಾಡಲು ಮನಸ್ಸು ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಟ ಸಿದ್ಧಾರ್ಥ ಅಲ್ಲಿಂದ ಹೊರಟು ಹೋಗುವಂತೆಯೂ ಹೇಳಿದ್ದಾರೆ. ತಕ್ಷಣ ನಟ ಸಿದ್ಧಾರ್ಥ ಸುದ್ದಿಗೋಷ್ಠಿಯಿಂದ ಹೊರನಡೆದಿದ್ದಾರೆ.

Actor Praksha Raj Contravecy Tweet About Cauvery Water Karnataka Bandh
Image Credit To Original Source

ಈ ಘಟನೆಗೆ ನಟ ಪ್ರಕಾಶ್ ರಾಜ್ ತಮಿಳು ನಟನ ಪರ ಕಮೆಂಟ್ ಮಾಡಿದ್ದು, ಕನ್ನಡಿಗರ ಪರವಾಗಿ ಕ್ಷಮೆ ಕೋರುತ್ತೇನೆ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.
“ಕಾವೇರಿ ನಮ್ಮದು ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು . ನಾಯಕರನ್ನು ಪ್ರಶ್ನಿಸದೆ, ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ ಸಹ್ರುದಯ ಕನ್ನಡಿಗರ ಪರವಾಗಿ ಕ್ಷಮಿಸಿ ಎಂದು ಪೋಸ್ಟ್ ಹಾಕಿದ್ದಾರೆ.

ಪ್ರಕಾಶ್ ರಾಜ್ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಜನರು ಪ್ರಕಾಸ್ ರಾಜ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ದಲ್ಲಿ ದಶಕದಿಂದ ಕಾವೇರಿ ವಿವಾದವಿದೆ. ಜನರು ಕುಡಿಯುವ ನೀರಿಲ್ಲದೇ, ರೈತರು ಬೆಳೆಗೆ ನೀರಿಲ್ಲದೇ ಸಾಯುತ್ತಿದ್ದಾರೆ. ನಿಮಗೆ ಕಾವೇರಿ ವಿವಾದಕ್ಕೆ ಬೆಂಬಲ ನೀಡುವ ಅಥವಾ ಕನ್ನಡಿಗರಿಗೆ ಬೆಂಬಲ ನೀಡುವ ಮನಸ್ಸಾಗಲಿಲ್ಲ.

ಇದನ್ನೂ ಓದಿ : ನಾಳೆ ಕರ್ನಾಟಕ ಬಂದ್‌ ಗೆ 1900 ಸಂಘಟನೆಗಳ ಬೆಂಬಲ : ಆಟೋ, ಬಸ್ ಸಂಚಾರ ಇಲ್ಲ, ಬೆಂಗಳೂರಲ್ಲಿ ನಿಷೇಧಾಜ್ಞೆ

ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರ ಪರವಾಗಿ, ಹೋರಾಟವನ್ನು ಬೆಂಬಲಿಸಿ, ರೈತರ ಸಾಂತ್ವನಿಸಿ ಒಂದಕ್ಷರ ಬರಲಿಲ್ಲ . ಆದರೆ ತಮಿಳು ನಟನಿಗೆ ತೊಂದರೆಯಾದಾಗ ಮಾತ್ರ ನಿಮ್ಮ ಹೃದಯ ಸ್ಪಂದಿಸಿತೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಇನ್ನೂ ಹಲವರು ನಿಮಗೆ ಬೇರೆ ಭಾಷೆಗಳ ಸಿನಿಮಾಗಳು ತಂದುಕೊಟ್ಟಷ್ಟೇ ಹಣ ,ಪ್ರಸಿದ್ಧಿ, ಪ್ರೀತಿ ಹಾಗೂ ಕೀರ್ತಿಯನ್ನು ಕನ್ನಡ ಭಾಷೆ ಹಾಗೂ ಕನ್ನಡಿಗರು ಕೊಟ್ಟಿದ್ದಾರೆ.

Actor Praksha Raj Contravecy Tweet About Cauvery Water Karnataka Bandh
Image Credit to Original Source

 

ಬೇರೆ ಭಾಷೆಯನ್ನು ಓಲೈಸುವ ಭರದಲ್ಲಿ ಕನ್ನಡಿಗರನ್ನು ಕಡೆಗಣಿಸಬೇಡಿ. ಮತ್ತೊಮ್ಮೆ ಕರ್ನಾಟಕಕ್ಕೆ ನೀವು ಬರೋದೇ ಕಷ್ಟವಾಗಬಹುದು ಹುಶಾರ್ ಎಂದು ಕೆಲವರು ಎಚ್ಚರಿಕೆ ನೀಡಿದ್ದಾರೆ. ಪ್ರಕಾಶ್ ರಾಜ್ ತಮಿಳು ನಟನ ಓಲೈಸುವ ಭರದಲ್ಲಿ ಮಾಡಿದ ಟ್ವೀಟ್ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ವಿವಾದ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.

Actor Praksha Raj Contravecy Tweet About Cauvery Water Karnataka Bandh

Comments are closed.