ಏಕದಿನ ವಿಶ್ವಕಪ್ ಕ್ರಿಕೆಟ್‌ 2023: ಇಂದಿನಿಂದ ಅಭ್ಯಾಸ ಪಂದ್ಯ, ಪಾಕ್‌ಗೆ ನ್ಯೂಜಿಲ್ಯಾಂಡ್‌, ಶ್ರೀಲಂಕಾಕ್ಕೆ ಬಾಂಗ್ಲಾ ಸವಾಲು

ಏಕದಿನ ವಿಶ್ವಕಪ್‌ ಕ್ರಿಕೆಟ್‌ (ICC World Cup 2023 ODI) ಇಂದಿನಿಂದ ಅಭ್ಯಾಸ ಪಂದ್ಯಗಳು (Warm- Up Match ) ಆರಂಭಗೊಳ್ಳುತ್ತಿದೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ ತಂಡವನ್ನು (PAK Vs NZ), ಶ್ರೀಲಂಕಾ ತಂಡಕ್ಕೆ ಬಾಂಗ್ಲಾ ದೇಶ (SL Vs BAN) ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಪ್ಘಾನಿಸ್ತಾನದ (SA Vs AFG) ವಿರುದ್ದ ಸೆಣೆಸಾಡಲಿದೆ.

ಏಕದಿನ ವಿಶ್ವಕಪ್‌ ಕ್ರಿಕೆಟ್‌ (ICC World Cup 2023 ODI)  ಪಂದ್ಯಾವಳಿಗೆ ಈಗಾಗಲೇ ತಂಡಗಳು ಸಜ್ಜಾಗುತ್ತಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು (Warm- Up Match ) ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ ತಂಡವನ್ನು (PAK Vs NZ) ಎದುರಿಸಲಿದೆ. ಶ್ರೀಲಂಕಾ ತಂಡಕ್ಕೆ ಬಾಂಗ್ಲಾ ದೇಶ (SL Vs BAN) ಸವಾಲೊಡ್ಡಲಿದೆ. ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಪ್ಘಾನಿಸ್ತಾನದ (SA Vs AFG) ವಿರುದ್ದ ಸೆಣೆಸಾಡಲಿದೆ.

ಬಿಸಿಸಿಐ (BCCI)  ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ (ICC ODi Cricke World Cup) ಆತಿಥ್ಯ ವಹಿಸಿದೆ. ಈಗಾಗಲೇ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಭಾರತಕ್ಕೆ ಬಂದಿಳಿದಿವೆ. ಸಾಂಪ್ರದಾಯಿಕ ಎದುರಾಗಿ ಪಾಕಿಸ್ತಾನ ತಂಡ ಕೂಡ ದಶಕದ ತರುವಾಯ ಭಾರತಕ್ಕೆ ಬಂದಿಳಿದಿದೆ. ಇಂದು ಪಾಕಿಸ್ತಾನ (Pakistan) , ದಕ್ಷಿಣ ಆಫ್ರಿಕಾ ( South Africa) , ನ್ಯೂಜಿಲೆಂಡ್‌ (New Zealand), ಬಾಂಗ್ಲಾದೇಶ (Bangladesh), ಶ್ರೀಲಂಕಾ (Srilanka), ಅಪ್ಘಾನಿಸ್ತಾನ (Afghanistan) ತಂಡಗಳು ಅಭ್ಯಾಸ ನಡೆಸಲಿವೆ.

ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ (Guwahati Barsapara cricket Stadium )ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ ತಂಡವು ಬಾಂಗ್ಲಾದೇಶ (Sri Lanka Vs Bangladesh) ತಂಡವನ್ನು ಎದುರಿಸಲಿದೆ. ಬಾಂಗ್ಲಾದೇಶವು ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ದ ಮೂರು ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಿತ್ತು.

Icc world cup cricket warm-up match start today pak vs nz, sa va afg and sl vs ban live stream star sports
Image credit to original source

ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಸೋಲನ್ನು ಅನುಭವಿಸಿತ್ತು. ಇನ್ನು ಶ್ರೀಲಂಕಾ ತಂಡ ಸಾಕಷ್ಟು ಬಲಿಷ್ಟವಾಗಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತಂಡ ಫೈನಲ್‌ಗೆ ಪ್ರವೇಶವನ್ನು ಕಂಡಿತ್ತು. ಹೀಗಾಗಿ ಇಂದು ಬಾಂಗ್ಲಾದೇಶ ತಂಡ ಬಲಿಷ್ಠ ಶ್ರೀಲಂಕಾ ವಿರುದ್ದ ಅಭ್ಯಾಸ ಪಂದ್ಯವನ್ನು ಆಡಲಿದೆ.

ವಿಶ್ವಕಪ್‌ ಅಭ್ಯಾಸ ಪಂದ್ಯ : ಸಂಭವನೀಯ ತಂಡಗಳು :

ಬಾಂಗ್ಲಾದೇಶ ತಂಡ :
ಶಕೀಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ತಂಝಿದ್ ಹಸನ್, ತೌಹಿದ್ ಹೃದಯ್, ಮಹ್ಮುದುಲ್ಲಾ ರಿಯಾದ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್

ಶ್ರೀಲಂಕಾ ತಂಡ :
ಕುಸಾಲ್ ಪೆರೇರಾ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ ), ಧನಂಜಯ ಡಿ ಸಿಲ್ವಾ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ಮತೀಶ ಪತಿರಾನ

ಇನ್ನು ತಿರುವನಂತಪುರಂನ ಗ್ರೀನ್‌ಫೀಲ್ಡ್‌ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ( Greenfield International Stadium Thiruvananthapuram ) ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಫ್ಘಾನಿಸ್ತಾನ ತಂಡವನ್ನು (Afghanistan vsSouth Africa ) ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡ ಕೂಡ ವಿಶ್ವಕಪ್‌ನ ಬಲಿಷ್ಟ ತಂಡಗಳಲ್ಲೊಂದು. ದಕ್ಷಿಣ ಆಫ್ರಿಕಾ ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್‌ ಸರಣಿಯನ್ನು ಆಯೋಜಿಸಿತ್ತು.

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೂ ಕೂಡ, ನಂತರದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿ ಕಂಬ್ಯಾಕ್‌ ಮಾಡಿತ್ತು. ಆದರೆ ಅಪ್ಘಾನಿಸ್ತಾನ ತಂಡವು ಬಲಿಷ್ಠವಾಗಿದ್ದರೂ ಕೂಡ, ಏಷ್ಯಾಕಪ್‌ ಪಂದ್ಯಾವಳಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಸೂಪರ್‌ 4 ಹಂತ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ : ಏಕದಿನ ವಿಶ್ವಕಪ್2023 : ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ಬದಲು ರವಿಚಂದ್ರನ್‌ ಅಶ್ವಿನ್‌

ವಿಶ್ವಕಪ್‌ ಅಭ್ಯಾಸ ಪಂದ್ಯ : ಸಂಭವನೀಯ ತಂಡಗಳು :
ದಕ್ಷಿಣ ಆಫ್ರಿಕಾ ತಂಡ :
ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಹೆನ್ರಿಚ್ ಕ್ಲಾಸೆನ್, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಗಿಸೊ ರಬಾಡ

Icc world cup cricket warm-up match start today pak vs nz, sa va afg and sl vs ban live stream star sports
Image credit to original source

ಅಫ್ಘಾನಿಸ್ತಾನ ತಂಡ:
ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಇಬ್ರಾಹಿಂ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್, ರಶಿ ಖಾನೌಕಿ.

ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವು ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ (ew Zealand vs Pakistan )ತಂಡದ ವಿರುದ್ದ ಸೆಣೆಸಾಡಲಿದೆ. ಹೈದ್ರಾಬಾದ್‌ನ ರಾಜೀವಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Hyderabad Rajiv Gandhi International Stadium ) ಹೈಲೋಲ್ಟೇಜ್‌ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ. ನ್ಯೂಜಿಲೆಂಡ್‌ ತಂಡ ಬಲಿಷ್ಠವಾಗಿದೆ. ಇನ್ನೊಂದೆಡೆಯಲ್ಲಿ ಪಾಕಿಸ್ತಾನ ಕೂಡ ಹೆಚ್ಚು ಬಲಿಷ್ಠವಾಗಿದೆ.

ಇದನ್ನೂ ಓದಿ : ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಏಕದಿನ ಕ್ರಿಕೆಟ್‌ನ ನಂ.1 ಆಟಗಾರ ಬಾಬರ್‌ ಅಜಂ ಪಾಕಿಸ್ತಾನ ತಂಡದಲ್ಲಿದ್ದು, ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಇನ್ನೊಂದೆಡೆಯಲ್ಲಿ ಯುವ ಆಟಗಾರರಿಂದಲೇ ತುಂಬಿಕೊಂಡಿರುವ ನ್ಯೂಜಿಲೆಂಡ್‌ ತಂಡ ವಿಶ್ವಕಪ್‌ ಗೆಲ್ಲುವ ಫೇವರೇಟ್‌ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ವಿಶ್ವಕಪ್‌ ಅಭ್ಯಾಸ ಪಂದ್ಯ : ಸಂಭವನೀಯ ತಂಡಗಳು :

ನ್ಯೂಜಿಲೆಂಡ್ ತಂಡ :
ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡಿಜೆ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಮ್ (ವಿಕೆಟ್‌ ಕೀಪರ್), ಎಂಜೆ ಹೆನ್ರಿ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್

ಪಾಕಿಸ್ತಾನ ತಂಡ :
ಬಾಬರ್ ಅಜಮ್ (ನಾಯಕ), ಅಘಾ ಸಲ್ಮಾನ್, ಎಫ್‌ಕೆ ಜಮಾನ್, ಐಯು ಹಕ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಎಸ್‌ಎಚ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಎಸ್ ಅಫ್ರಿದಿ, ಉಸಾಮಾ ಮಿರ್‌

ಐಸಿಸಿ ಏಕದಿನ ವಿಶ್ವಕಪ್‌ ಅಭ್ಯಾಸ ಪಂದ್ಯದ ನೇರಪ್ರಸಾರ :
ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಅಭ್ಯಾಸ ಪಂದ್ಯಗಳನ್ನು ಸ್ಟಾರ್‌ ಸ್ಪೋರ್ಟ್‌ ನೆಟ್‌ವಕ್ಸ್‌ ನೇರಪ್ರಸಾರ ಮಾಡಲಿದೆ. ಅಲ್ಲದೇ ಆನ್‌ಲೈನ್‌ ಮೂಲಕವೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ICC ODI ವರ್ಲ್ಡ್ ಕಪ್ 2023 ಅಭ್ಯಾಸ ಪಂದ್ಯಗಳನ್ನು ಉಚಿತ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿನ Disney+Hotstar ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ICC World Cup Cricket Warm-up match Start today PAK vs NZ, SA Va AFG and SL Vs BAN Live Stream Star Sports

Comments are closed.