ನಟ ದರ್ಶನ್ ತೂಗುದೀಪ್ ನಟನೆಯ ಕಾಟೇರ ಸಿನಿಮಾದಲ್ಲಿ ವಿಜಯ್ ಸೇತುಪತಿ !

ಸ್ಯಾಂಡಲ್‌ವುಡ್‌ ನಟ ದರ್ಶನ್ ಇತ್ತೀಚೆಗಷ್ಟೇ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ನೆಚ್ಚಿನ ಅಭಿಮಾನಿಗಳೊಂದಿಗೆ ಬಹಳಷ್ಟು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಆ ಸಂಭ್ರಮದಲ್ಲೇ ದರ್ಶನ್‌ ಅಭಿನಯದ ‘D56’ ಸಿನಿಮಾ ಟೈಟಲ್ ರಿವೀಲ್ ಮಾಡಲಾಗಿದೆ. ಈ ಸಿನಿಮಾ70ರ ದಶಕದ ಕಥೆಗೆ ತರುಣ್ ಸುಧೀರ್ ‘ಕಾಟೇರ’ಎನ್ನುವ ಟೈಟಲ್‌ನ್ನು ಸೂಚಿಸಿದ್ದಾರೆ. ಸಿನಿಮಾ ಟೈಟಲ್‌ ಫೋಸ್ಟರ್‌ನಲ್ಲಿ ಲುಂಗಿ ಉಟ್ಟು, ಮಚ್ಚು ಹಿಡಿದು ‘ಕಾಟೇರ’ ಆಗಿ ದರ್ಶನ್ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್‌ ಅಭಿನಯದ ಕಾಟೇರದಲ್ಲಿ ಕಾಲಿವುಡ್ ನಟ ವಿಜಯ್ ಸೇತುಪತಿ (Darshan Thoogudeep – Vijay Sethupathi) ನಟಿಸುತ್ತಾರೆ ಎನ್ನುವ ಗುಸು ಗುಸು ಹರಿದಾಡುತ್ತಿದೆ. ಸದ್ಯದಲ್ಲೇ ಇದರ ಬಗ್ಗೆ ಸಿನಿತಂಡ ಮಾಹಿತಿ ನೀಡಲಿದ್ದಾರೆ.

ಇದೀಗ ‘ಕಾಟೇರ’ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಟ ದರ್ಶನ್ 46ನೇ ವಸಂತಕ್ಕೆ ಕಾಲಿಟ್ಟ, ಸಂಭ್ರಮದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ‘D56’ ಟೈಟಲ್ ಅನೌನ್ಸ್ ಆಗಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸುಧಾಕರ್ ಸಿನಿಮಾಟೋಗ್ರಫಿ ಸಿನಿಮಾಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ‘ಕಾಟೇರ’ ಸಿನಿಮಾಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಮಾಸ್ತಿ ಸಂಭಾಷಣೆ ಸಿನಿಮಾಕ್ಕಿದೆ. ಮೋಷನ್ ಪೋಸ್ಟರ್‌ನಲ್ಲಿ ‘ಪ್ರತಿ ಮಚ್ಚು ಎರಡು ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ’ ಎನ್ನುವ ಡೈಲಾಗ್ ಅಭಿಮಾನಿಗಳಿಗೆ ಸಖತ್‌ ಕಿಕ್ ಕೊಡುತ್ತಿದೆ. ಇದು 1974ರಲ್ಲಿ ‘ಕಾಟೇರ’ ಕಥೆ ನಡೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ : ನಟ ರಕ್ಷಿತ್‌ ಶೆಟ್ಟಿ, ಸಿಂಪಲ್‌ ಸುನಿ ಕಾಂಬಿನೇಷನ್‌ ಸಿನಿಮಾ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಗೆ ದಶಕದ ಸಂಭ್ರಮ

ಇದನ್ನೂ ಓದಿ : ಅರ್ಥಪೂರ್ಣ ಹೋಳಿ ಆಚರಿಸಿದ ಹಿರಿಯ ನಟಿ ಶ್ರುತಿ : ಕ್ಯೂಟ್ ವಿಡಿಯೋ ವೈರಲ್

ಇದನ್ನೂ ಓದಿ : ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ಇನ್ನಿಲ್ಲ : ಸಂತಾಪ ಸೂಚಿಸಿದ ಬಾಲಿವುಡ್‌ ಸಿನಿತಾರೆಯರು

‘ಕಾಟೇರ’ ಸಿನಿಮಾದಲ್ಲಿ ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ಇಲ್ಲಿಯವರೆಗೆ ಈ ಸಿನಿಮಾದ ನಾಯಕಿಯನ್ನು ಹೊರತುಪಡಿಸಿ ಬೇರೆ ಯಾವ ಪಾತ್ರದ ಬಗ್ಗೆ ಮಾಹಿತಿಯನ್ನು ಸಿನಿತಂಡ ಹಂಚಿಕೊಂಡಿರುವುದಿಲ್ಲ. ಹಾಗಾಗಿ ಕಾಲಿವುಡ್ ನಟ ವಿಜಯ್ ಸೇತುಪತಿ ನಟ ದರ್ಶನ್‌ ಅಭಿನಯದ ಕಾಟೇರದಲ್ಲಿ ಅಭಿನಯಿಸುವ ಬಗ್ಗೆ ಅಧಿಕೃತವಾಗಿ ಹೇಳಬೇಕಾಗಿದೆ ಅಷೇ. ಈಗಾಗಲೇ ಎರಡು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. ‘ರಾಬರ್ಟ್’ ಸಿನಿಮಾದಲ್ಲಿ ನಟ ದರ್ಶನ್ ಬಹಳ ವಿಭಿನ್ನವಾಗಿ ತೋರಿಸಿ ಗೆದ್ದಿದ್ದ ತರುಣ್ ಮತ್ತೊಮ್ಮೆ ಅದೇ ಪ್ರಯತ್ನ ಮಾಡುತ್ತಿದ್ದಾರೆ. ತನ್ನ ಊರಿನ ಜನರಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗುತ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

Darshan Thoogudeep – Vijay Sethupathi : Vijay Sethupathi in Katera movie starring actor Darshan Thoogudeep !

Comments are closed.