Arrested For Raping Cows: ಹಸುಗಳ ಮೇಲೆ ಅತ್ಯಾಚಾರ : ಬೆಂಗಳೂರಿನಲ್ಲಿ ಕಾಮುಕ ಅರೆಸ್ಟ್‌

ಬೆಂಗಳೂರು: ಹಸುಗಳೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಈತ 34 ವರ್ಷದ ವ್ಯಕ್ತಿ ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ಸ್ನೇಹಿತನ ದೂರಿನ ಮೇರೆಗೆ ಚಂದ್ರಾ ಲೇಔಟ್ ಪೊಲೀಸರು ಆತನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ(Arrested For Raping Cows).

ಪೊಲೀಸರ ಪ್ರಕಾರ, ಆರೋಪಿಯು ಹಸುಗಳೊಂದಿಗೆ ಅಸ್ವಾಭಾವಿಕ ಲೈಂಗಿಕತೆಯನ್ನು ಬೆಳೆಸಿಕೊಂಡಿದ್ದಾನೆ. ಅದಕ್ಕಾಗಿ ಅವನು ತನ್ನ ಹಳ್ಳಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ಗೆ ಹೋಗುತ್ತಿದ್ದನು ಎನ್ನಲಾಗಿದೆ. ಈತ ಕ್ಯಾಂಪಸ್‌ನ ಹೊಲಗಳಲ್ಲಿ ಮೇಯುತ್ತಿದ್ದ ಹಸುಗಳನ್ನು ಪ್ರತ್ಯೇಕ ಸ್ಥಳಗಳಿಗೆ, ಪೊದೆಗಳಿಗೆ ಕರೆದೊಯ್ದು ಅಪರಾಧದಲ್ಲಿ ಪಾಲ್ಗೊಳ್ಳುತ್ತಿದ್ದ.ಅವನ ವಿಕೃತ ಮನಸ್ಥಿತಿಯಿಂದಾಗಿ, ಮಂಜುನಾಥ್ ಕುಟುಂಬ ಅವನನ್ನು ನಿರಾಕರಿಸಿತು. ಕೆಲಸವಿಲ್ಲದ ಆರೋಪಿ, ನಂತರ ಬೆಂಗಳೂರಿಗೆ ಬಂದು ತನ್ನ ಸ್ನೇಹಿತನ ಸ್ಥಳದಲ್ಲಿ ತಂಗಿದ್ದ.ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದ ಶಶಿಕುಮಾರ್ ಎಂಬಾತನೊಂದಿಗೆ ವಾಸವಿದ್ದ ಆರೋಪಿಗಳು ಹಸುಗಳ ಬಾಲ ಕತ್ತರಿಸಿ ಅಸ್ವಾಭಾವಿಕ ಸಂಭೋಗ ನಡೆಸಿದ್ದರು. ಅನುಮಾನಗೊಂಡ ಶಶಿಕುಮಾರ್ ಅವರ ಚಲನವಲನಗಳನ್ನು ಗಮನಿಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಆರೋಪಿಯನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಹಿಂದೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹಸುವಿನ ಜೊತೆ ಅಸಹಜ ಕೃತ್ಯ ಎಸಗಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ನಗರದ ದೀನದಯಾಳ್ ನಗರದಲ್ಲಿ ಆಗಸ್ಟ್ 4 ರಂದು ಈ ಘಟನೆ ನಡೆದಿದ್ದು, ಆ ಪ್ರದೇಶದ ಸಮೀಪದ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ ಎಂದು ಗ್ವಾಲಿಯರ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರವಿ ಭಡೋರಿಯಾ ತಿಳಿಸಿದ್ದಾರೆ.

ಈ ಭೀಕರ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ, ಸ್ಥಳೀಯ ಗೋಸಂರಕ್ಷಣಾ ಸಂಘಟನೆಯಾದ ರಾಷ್ಟ್ರೀಯ ಗೌರಕ್ಷಾ ವಾಹಿನಿಯ ವಿಭಾಗೀಯ ಅಧ್ಯಕ್ಷ ನಿರ್ಪತ್ ಸಿಂಗ್ ತೋಮರ್ ಅವರು ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ.ದೂರಿನ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಪಿಟಿಐ ವರದಿ ಮಾಡಿದೆ.
ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ಹಸುವಿನ ಮೇಲೆ ಅತ್ಯಾಚಾರ ಎಸಗಿದ್ದ. ಆರೋಪಿಯನ್ನು ಮಜೀದ್ ಎಂದು ಗುರುತಿಸಲಾಗಿದ್ದು, ಏಪ್ರಿಲ್ 26 ರಂದು ಲಕ್ನೋದ ಸರೋಜನಿ ನಗರದ ದರೋಗಾ ಖೇರಾದಿಂದ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: Cow Dung Rakhi: ಜೈಪುರದಿಂದ ಅಮೆರಿಕಕ್ಕೆ ರಫ್ತಾಗುತ್ತಿದೆ ‘ಹಸುವಿನ ಸಗಣಿ ರಾಖಿ’

(Arrested For Raping Cows in Bangalore)

Comments are closed.