Rana Daggubati : ನಟ ರಾಣಾ ದಗ್ಗುಬಾಟಿ ಕಛೇರಿಯಲ್ಲಿ ಅಪ್ಪು ಪುತ್ಥಳಿ : ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಪುಲ್‌ಖುಷ್‌

ದೊಡ್ಮನೆ ಹುಡುಗ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ (Punith Raj kumar)ಬಾರದ ಲೋಕಕ್ಕೆ ಪಯಣಿಸಿ ವರ್ಷ ಸಮೀಪಿಸುತ್ತಿದೆ. ಆದರೆ ಅಭಿಮಾನಿಗಳ ಮನದಲ್ಲಿ ಅವರ ಇಲ್ಲ ಅನ್ನೋ ನೋವು ಇನ್ನೂ ಕಡಿಮೆಯಾಗಿಲ್ಲ. ಮನದಲ್ಲಿಯೇ ಅವರನ್ನು ಸ್ಮರಿಸುತ್ತಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೇವಲ ಅಭಿಮಾನಿಗಳಷ್ಟೇ ಅಲ್ಲದೇ ಹೆಚ್ಚಿನ ಸ್ಟಾರ್‌ ನಟರು ಕೂಡ ಪುನೀತ್‌ ಸ್ಮರಣೆ ಮಾಡುತ್ತಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಅನೇಕ ಸ್ಟಾರ್‌ ನಟರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇದೀಗ ನಟ ರಾಣಾ ದಗ್ಗುಬಾಟಿ (Rana Daggubati) ತಮ್ಮ ಕಚೇರಿಯಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಪುತ್ಥಳಿಯನ್ನು ಇರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಣಾ ದಗ್ಗುಬಾಟಿ(Rana Daggubati) ತಮ್ಮ ಕಛೇರಿಯಲ್ಲಿ ಪುನೀತ್‌ ರಾಜ್‌ ಕುಮಾರ್‌ (Punith Raj kumar) ಪುತ್ಥಳಿ ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸ್ಮರಣಿಕೆ ರೂಪದಲ್ಲಿ ಪಡೆದ ಅಪ್ಪು ಪುತ್ಥಳಿಕೆ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಟೋವನ್ನು ಹಂಚಿಕೊಳ್ಳುವುದರ ಮೂಲಕ ” ತುಂಬ ಸುಂದರವಾದ ಸ್ಮರಿಣಿಕೆ ಇಂದು ನನ್ನ ಕಛೇರಿಗೆ ಬಂತು. ಮಿಸ್‌ ಯೂ ಮೈ ಫ್ರೆಂಡ್‌ ಪುನೀತ್‌ ರಾಜ್‌ ಕುಮಾರ್”‌ ಎಂದು ಪೋಸ್ಟ್‌ನ್ನು ಶೇರ್‌ ಮಾಡಿದ್ದಾರೆ.

ರಾಣಾ ದಗ್ಗುಬಾಟಿಯವರು ಹಂಚಿಕೊಂಡು ಈ ಪೋಸ್ಟ್‌ನ್ನು ನೋಡಿ ಅಪ್ಪು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ (Punith Raj kumar)ನಿಧನದ ನಂತರ ಪರಭಾಷೆಯ ಹಲವಾರು ಸೆಲೆಬ್ರಿಟಿಗಳು ಕಂಬನಿಯನ್ನು ಮಿಡಿದಿದ್ದಾರೆ. ಅಷ್ಟೇ ಅಲ್ಲದೇ ಅನೇಕ ಸೆಲೆಬ್ರಿಟಿಗಳು ಪುನೀತ್‌ ಮನೆಗೆ ಆಗಮಿಸಿ ಅವರ ಕುಟುಂಬದವರಿಗೆ ಸಾಂತ್ವನವನ್ನು ಹೇಳಿದ್ದಾರೆ. ಇವತ್ತಿಗೂ ಪರಭಾಷೆ ಸೆಲೆಬ್ರಿಟಿಗಳು ಹಲವಾರು ವೇದಿಕೆಯಲ್ಲಿ ಅಪ್ಪುವನ್ನು ನೆನೆಸಿಕೊಂಡು ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ : Ranveer Singh: ದೀಪಿಕಾ -ರಣವೀರ್​ ದಾಂಪತ್ಯ ವಿರಸದ ವದಂತಿಗೆ ತೆರೆ ಎಳೆದ ದೀಪ್​ವೀರ್​ ದಂಪತಿ

ಇದನ್ನೂ ಓದಿ : Bhagyalakshmi Serial : ಸೀರಿಯಲ್ ಪ್ರಿಯರಿಗೆ ಸಿಹಿಸುದ್ದಿ- ಅಕ್ಟೋಬರ್ 10ರಿಂದ ಬರ್ತಿದ್ದಾಳೆ ಭಾಗ್ಯಲಕ್ಷ್ಮೀ

ಇದನ್ನೂ ಓದಿ : Meghana Raj Sarja : ಮೊದಲು ಸ್ಕೂಲ್, ಆಮೇಲೆ‌ ನಟನೆ: ಮಗ ರಾಯನ್ ಸರ್ಜಾ ಬಗ್ಗೆ ತಮ್ಮ ಕನಸು ಹಂಚಿಕೊಂಡ ನಟಿ ಮೇಘನಾ ರಾಜ್ ಸರ್ಜಾ

ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಕುರಿತಾಗಿ ಅಪ್ಪು ಬಹಳಷ್ಟು ಕಾಳಜಿ ವಹಿಸಿ ತಯಾರಿಸಿದ “ಗಂಧದ ಗುಡಿ” ಸಿನಿಮಾವು ಬಿಡುಗಡೆಗೆ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿದೆ. ಇದೇ ಬರುವ ಅಕ್ಟೋಬರ್‌ 28 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಕುರಿತು ಹಲವಾರು ಸೆಲೆಬ್ರಿಟಿಗಳು ಟ್ವೀಟ್‌ ಮಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ನಮ್ಮೊಂದಿಗೆ ಜೀವಂತವಾಗಿ ಇರದಿದ್ದರೂ, ಅವರು ಮಾಡಿದ ಸಾಮಾಜಿಕ ಕಾರ್ಯಗಳ ಮೂಲಕ ಹಾಗೂ ಸಿನಿಮಾಗಳ ಮೂಲಕ ಅಭಿಮಾನಿಗಳ ಎದೆಯಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇವರ ನೆನೆಪಿಗಾಗಿ ಹಲವು ಊರಿನ ರಸ್ತೆ, ವೃತ್ತ, ಹಾಗೂ ಪಾರ್ಕ್‌ಗಳಿಗೆ ಪುನೀತ್‌ ರಾಜ್‌ಕುಮಾರ್‌ ಎಂದು ಹೆಸರು ಇಟ್ಟು ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.‌

Puneeth Rajkumar Putthali in actor Rana Daggubati office

Comments are closed.