10 ಸಾವಿರ ಗಣೇಶ ಮೂರ್ತಿ ಪೂಜೆ : ವಿಶ್ವದಾಖಲೆ ಬರೆಯಲು ಬೆಂಗಳೂರು ಗಣೇಶೋತ್ಸವ ಸಮಿತಿ ಸಿದ್ಧತೆ

ಬೆಂಗಳೂರು : (Bangalore Ganeshotsava world record) ಗಣೇಶ ಚತುರ್ಥಿ ಅಂದ್ರೇನೇ ಅದು ಗಣೇಶೋತ್ಸವದ ಸಂಭ್ರಮ. ಸಾರ್ವಜನಿಕ ಗಣೇಶೋತ್ಸವ ಇಲ್ಲದೇ ಗಣೇಶ ಚತುರ್ಥಿ ಕೊನೆಗೊಳ್ಳೋದೇ ಇಲ್ಲ. ಈ ಭಾರಿ ಸಿಲಿಕಾನ್ ಸಿಟಿ ಬೆಂಗಳೂರು ಭರ್ಜರಿ ಗಣೇಶೋತ್ಸವಕ್ಕೆ ಸಜ್ಜಾಗುತ್ತಿದೆ. ಹೌದು ಗಣೇಶ ಸ್ಥಾಪನೆ ಹಾಗೂ ಪೂಜೆ ವಿಚಾರದಲ್ಲಿ ವಿಶ್ವದಾಖಲೆ ಬರೆಯಲು ಮಹಾನಗರ ಬೆಂಗಳೂರು ಸಜ್ಜಾಗಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಗಣೇಶ ಉತ್ಸವ ಸಮಿತಿ ಜಂಟಿಯಾಗಿ ವಿಶ್ವ ದಾಖಲೆ ನಿರ್ಮಿಸಲಿದ್ದು, ಹತ್ತು ಸಾವಿರ ಗಣೇಶನ ಮೂರ್ತಿ ನಿರ್ಮಿಸಿ ಪೂಜೆಗೆ ಒದಗಿಸಲು ಬೆಂಗಳೂರು ಗಣೇಶ ಉತ್ಸವ ಸಮಿತಿ ಸಿದ್ಧತೆ ನಡೆಸಿದೆ. ಆಗಸ್ಟ್ 28ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಿನ್ನಸ್ ದಾಖಲೆಗೆ ವೇದಿಕೆ ಸಜ್ಜಾಗಿದ್ದು ಭರದಿಂದ ಸಿದ್ಧತೆ ನಡೆದಿದೆ. 2019ರಲ್ಲಿ 3 ಸಾವಿರ ಮಣ್ಣಿನ ಗಣಪನ ಮೂರ್ತಿ ತಯಾರಿಸಿ ಬೆಂಗಳೂರು ಗಣೇಶೋತ್ಸವ ಸಮಿತಿ ಗಿನ್ನಿಸ್ ದಾಖಲೆ ಮಾಡಿತ್ತು.

ಈ ಭಾರಿ ತನ್ನ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಲು 10 ಸಾವಿರ ಮಣ್ಣಿನ ಮೂರ್ತಿಗಳ ತಯಾರಿಗೆ ಸಿದ್ಧತೆ ನಡೆಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಗಣೇಶೋತ್ಸವ ಸಮಿತಿಗೆ ಸಾಥ್ ನೀಡಿದ್ದು, ವಿಶೇಷ ಹಾಗೂ ವಿಭಿನ್ನವಾಗಿ ಮಣ್ಣಿನ ಮೂರ್ತಿ ತಯಾರಿಸಲು ಬೆಂಗಳೂರು ಗಣೇಶ ಉತ್ಸವ ಸಮಿತಿ ಪ್ಲ್ಯಾನ್ ಮಾಡಿದೆ. ಈ ಮಣ್ಣಿನ ಗಣೇಶ್‌ಮೂರ್ತಿ ಸಿದ್ಧಪಡಿಸೋದರಲ್ಲಿ ಯಾವೆಲ್ಲ ವಿಶೇಷತೆಗಳಿವೆ ಅನ್ನೋದನ್ನು ಗಮನಿಸೋದಾದರೇ,

  • ಹತ್ತು ಸಾವಿರ ಮಣ್ಣಿನ ಗಣೇಶನ ಮೂರ್ತಿ ತಯಾರು
  • ಪ್ರತಿ ಗಣಪತಿಯೂ ಮೂರು ಕೆಜಿ ಮಣ್ಣಿನಿಂದ ತಯಾರಿ
  • ಪ್ರತಿ ಗಣಪತಿ ಮೂರ್ತಿಗೂ ಬೀಜಗಳ ಅಳವಡಿಕೆ
  • ತುಳಸಿ ಹಾಗೂ ಬಗೆ ಬಗೆಯ ಹೂವುಗಳ ಬೀಜಗಳನ್ನು ಮಣ್ಣಿಗೆ ಮಿಶ್ರಣ
  • ಚೌತಿ ಮುಗಿದ ಬಳಿಕ ಮನೆಯಲ್ಲೇ ಸಣ್ಣ ಸಣ್ಣ ಪಾಟ್ ಗಳಲ್ಲಿ ವಿಸರ್ಜನೆ
  • ಇದರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ನಿರ್ಮಾಣ
  • ಜೊತೆಗೆ ಮನೆಯಲ್ಲೇ ಹೂವು, ಗಿಡಗಳನ್ನು ಬೆಳೆಸಲು ಪ್ರೋತ್ಸಾಹ.

ಈಗಾಗಲೇ ನಗರದಲ್ಲಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಬಳಕೆಯನ್ನು ಬಿಬಿಎಂಪಿ ನಿಷೇಧಿಸಿದೆ. ಹೀಗಾಗಿ ಪರಿಸರ ಸ್ನೇಹಿ‌ಮಣ್ಣಿನ ಗಣಪತಿ ಬಳಕೆಗೆ ಜನರು ಒಲವು ತೋರಿದ್ದಾರೆ. ಸಾರ್ವಜನಿಕ ಗಣೇಶೋತ್ಸವದಲ್ಲೂ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನಿವಾರ್ಯವಾಗಿದೆ. ಇದರ ಬೆನ್ನಲ್ಲೇ ಈಗ ಬೆಂಗಳೂರು ಸಾರ್ವತ್ರಿಕ ಸಮಿತಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಜೊತೆಗೆ ದಾಖಲೆ ಬರೆಯಲು ಸಿದ್ಧವಾಗಿದೆ.

ಇದನ್ನೂ ಓದಿ : ಅಗಸ್ಟ್ 15 ರಂದು ಬೆಂಗಳೂರಿನಲ್ಲಿ ರಸ್ತೆಗಿಳಿಯೋ ಮುನ್ನ ಈ ಸುದ್ದಿ ಓದಿ

ಇದನ್ನೂ ಓದಿ : Sarvakar’s portrait : ದೇಶಪ್ರೇಮಿಗಳ ಸಾಲಿನಲ್ಲಿ ಸಾರ್ವಕರ್​ ಫೋಟೋವಿಟ್ಟಿದ್ದಕ್ಕೆ ಎಸ್​ಡಿಪಿಐ ವಿರೋಧ : ​ ಫೋಟೋ ತೆಗೆಯದಂತೆ ಬಿಜೆಪಿ ಪಟ್ಟು

Bangalore Ganeshotsava world record 10000 Ganesha idols worshiped in Basavanagudi National College premises

Comments are closed.