Ross Taylor reveals Shocking Incident: ನ್ಯೂಜಿಲೆಂಡ್ ಕ್ರಿಕೆಟರ್ ರಾಸ್ ಟೇಲರ್ ಕೆನ್ನೆಗೆ ಬಾರಿಸಿದ್ದ ರಾಜಸ್ಥಾನ್ ರಾಯಲ್ಸ್ ಟೀಮ್ ಓನರ್

ಬೆಂಗಳೂರು: ಕ್ರಿಕೆಟ್’ನಲ್ಲಿ ಪರದೆಯ ಹಿಂದೆ ಸಾಕಷ್ಟು ಇಂಟ್ರೆಸ್ಟಿಂಗ್ ಘಟನೆಗಳು ನಡೆಯುತ್ತವೆ. ಕೆಲ ಘಟನೆಗಳು ಹೊರ ಬರುತ್ತವೆ, ಮತ್ತೆ ಕೆಲ ಘಟನೆಗಳು ಹಾಗೇ ಮುಚ್ಚಿ ಹೋಗುತ್ತವೆ. ಅಂಥದ್ದೇ ಒಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ನ್ಯೂಜಿಲೆಂಡ್’ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ಬಹಿರಂಗ ಪಡಿಸಿದ್ದಾರೆ ( Ross Taylor autobiography “Black & White”)

2011ರ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ರಾಸ್ ಟೇಲರ್ ಅವರ ಕಪಾಳಕ್ಕೆ ರಾಜಸ್ಥಾನ್ ರಾಯಲ್ಸ್ (Rajastan Royals Team Owner Slapped Ross Taylor) ತಂಡದ ಮಾಲೀಕರೊಬ್ಬರು ನಾಲ್ಕು ಏಟುಗಳನ್ನು ಬಾರಿಸಿದ್ದರಂತೆ. ಈ ಸ್ಫೋಟಕದ ಸಂಗತಿಯನ್ನು ತಮ್ಮ “ಬ್ಲ್ಯಾಕ್ & ವೈಟ್” ಹೆಸರಿನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
“2011ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದಾಗ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದೆ. ನಮ್ಮ ತಂಡ ಆಗ 195 ರನ್’ಗಳನ್ನು ಚೇಸ್ ಮಾಡುತ್ತಿತ್ತು. ಆದರೆ ನಾನು ಯಾವುದೇ ರನ್ ಗಳಿಸದೆ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದೆ. ಇದಾದ ನಂತರ ಇಡೀ ತಂಡ ಹೋಟೆಲ್’ನ ಟಾಪ್ ಫ್ಲೋರ್’ನಲ್ಲಿ ಸೇರಿದ್ದೆವು. ತಂಡದ ನಾಯಕ ಶೇನ್ ವಾರ್ನ್ ಹಾಗೂ ಅವರ ಗೆಳತಿ ಲಿಜ್ ಹರ್ಲೀ ಕೂಡ ಅಲ್ಲಿದ್ದರು. ಇದೇ ವೇಳೆ ನನ್ನ ಬಳಿ ಬಂದ ತಂಡದ ಮಾಲೀಕರೊಬ್ಬರು ‘ರಾಸ್, ಸೊನ್ನೆಗೆ ಔಟಾಗಲು ನಾವು ನಿನಗೆ ಮಿಲಿಯನ್ ಡಾಲರ್’ಗಳನ್ನು ನೀಡುತ್ತಿಲ್ಲ’ ಎಂದು ಹೇಳಿ ಮೂರರಿಂದ ನಾಲ್ಕು ಬಾರಿ ನನ್ನ ಕೆನ್ನೆಗೆ ಬಾರಿಸಿದರು” ಎಂದು ತಮ್ಮ ಆತ್ಮಕಥೆ ಬ್ಲ್ಯಾಕ್ & ವೈಟ್’ನಲ್ಲಿ ರಾಸ್ ಟೇಲರ್ ಬರೆದುಕೊಂಡಿದ್ದಾರೆ.

“ಕೆನ್ನೆಗೆ ಬಾರಿಸಿದ ನಂತರ ಆ ವ್ಯಕ್ತಿ ನಗಲು ಆರಂಭಿಸಿದರು. ನಾನು ತಮಾಷೆ ಮಾಡಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ನಾನು ಅದನ್ನು ದೊಡ್ಡ ವಿವಾದ ಮಾಡಲು ಹೋಗಲಿಲ್ಲ. ಆ ವ್ಯಕ್ತಿ ನಾಟಕ ಮಾಡುತ್ತಿರುವುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅವತ್ತು ನನಗೆ ಆಘಾತವಾಗಿದ್ದು ಸತ್ಯ” ಎಂದು 11 ವರ್ಷಗಳ ಹಿಂದಿನ ಘಟನೆಯನ್ನು ರಾಸ್ ಟೇಲರ್ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ.

ನ್ಯೂಜಿಲೆಂಡ್ ತಂಡದ ಪರ ಆಡುವ ಸಂದರ್ಭದಲ್ಲೂ ರಾಸ್ ಟೇಲರ್ ಅವರಿಗೆ ಅವಮಾನವಾಗಿದ್ದ ಅಂಶಗಳೂ ಆತ್ಮಕಥೆಯಲ್ಲಿ ದಾಖಲಾಗಿವೆ. 38 ವರ್ಷದ ರಾಸ್ ಟೇಲರ್ 2008ರಿಂದ 2010ರವರೆಗೆ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2011ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಾಣಿಸಿಕೊಂಡಿದ್ದ ಟೇಲರ್, ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ಪುಣೆ ವಾರಿಯರ್ಸ್ ತಂಡಗಳ ಪರ ಆಡಿದ್ದರು.

ಇದನ್ನೂ ಓದಿ : India Tour of Zimbabwe : ಇಂದು ಜಿಂಬಾಬ್ವೆಗೆ ಹಾರಲಿದೆ ಕೆ.ಎಲ್ ರಾಹುಲ್ ಸಾರಥ್ಯದ ಟೀಮ್ ಇಂಡಿಯಾ

ಇದನ್ನೂ ಓದಿ : Sachin scored First International Century : 100 ಶತಕಗಳ ಸರದಾರ ಮೊದಲ ಶತಕ ಬಾರಿಸಿದ ದಿನ, ಇಂದು ಸಚಿನ್ ಕ್ರಿಕೆಟ್ ಜೀವನದ ಮಹತ್ವದ ದಿನ

Ross Taylor autobiography “Black & White Rajasthan Royals Team Owner Slapped Ross Taylor in IPL

Comments are closed.