BBMP : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಒತ್ತುವರಿ ತೆರವು : ಜೆಸಿಬಿ ಜೊತೆ ಸಜ್ಜಾಗ್ತಿದೆ ಬಿಬಿಎಂಪಿ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಜೆಸಿಬಿ ಘರ್ಜನೆ ಕೇಳಿಸುದು ಖಚಿತವಾಗಿದೆ. ಮಳೆ ಆರಂಭವಾದಾಗ, ಪ್ರವಾಹ ಸ್ಥಿತಿ ಎದುರಾದಾಗ ಮಾತ್ರ ತೆರವು ಕಾರ್ಯಾಚರಣೆ ನಡೆಸಿ ಸುಮ್ಮನಾಗುತ್ತದೆ ಬಿಬಿಎಂಪಿ (BBMP)ಎಂಬ ಆರೋಪದ ಬಳಿಕ ಎಚ್ಚೆತ್ತಿರೋ ನಗರಾಢಳಿತ ದಸರಾ ಬಳಿಕ ಆಫರೇಶನ್ ಬುಲ್ಡೋಜರ್ ಚಾಪ್ಟರ್ -3 ನಡೆಸಲು ಸಿದ್ಧವಾಗಿದೆ.

ತೆರವು ಕಾರ್ಯಾಚರಣೆ ನಡೆಸದ ಹಾಗೂ ರಾಜಕಾಲುವೆ ಒತ್ತುವರಿ ಸಮಸ್ಯೆಗೆ ಸೂಕ್ತ ಪರಿಹಾರ ನೀಡದೆ ಕೈಬಿಟ್ಟ ಕಾರಣಕ್ಕೆ ಬಿಬಿಎಂಪಿ (BBMP)ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ಸೇರಿದಂತೆ ಎಲ್ಲ ಬಗೆಯ ಒತ್ತುವರಿಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿತ್ತು. ಹೈಕೋರ್ಟ್ ಚಾಟಿ ಬಳಿಕ ಎಚ್ಚೆತ್ತ ಬಿಬಿಎಂಪಿ ದಸರಾ ಹಬ್ಬದ ಬಳಿಕ ಮತ್ತೊಮ್ಮೆ ಜೆಸಿಬಿಯನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸಿದೆ.

ಅಕ್ಟೋಬರ್ 25 ರ ಒಳಗೆ ತೆರವು ಕಾರ್ಯಾಚರಣೆ ಪೂರ್ತಿಗೊಳಿಸಲು ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ದಸರಾ ಬಳಿಕ ಕಾರ್ಯಾಚರಣೆಗೆ ಮುಹೂರ್ತ ಫಿಕ್ಸ್ ಮಾಡಿರೋ ಬಿಬಿಎಂಪಿ ಅದಕ್ಕಾಗಿ ಸಿದ್ಧತೆ ಆಧರಿಸಿದೆ. ಈಗಾಗಲೇ ತೆರವು ಕಾರ್ಯಾಚರಣೆ ವಿರುದ್ಧ ಹಲವರು ಕೋರ್ಟ್‌ನಲ್ಲಿ ಸ್ಟೇ ತಂದಿದ್ದಾರೆ. ಹೀಗೆ ತಡೆಯಾಜ್ಞೆ ತಂದಿರೋ ಮಾಲೀಕರ ಸಮ್ಮುಖದಲ್ಲೇ ಮತ್ತೊಮ್ಮೆ ಸರ್ವೇ ನಡೆಸಿ ಮನೆ ಹಾಗೂ ಕಟ್ಟಡಗಳ ಮಾಲೀಕರಿಗೆ ಮಾಹಿತಿ ನೀಡಿ ತೆರವುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಈಗಾಗಲೇ ಸರ್ವೆ ಹಾಗೂ ತೆರವಿಗೆ ಅಗತ್ಯವಾಗಿರೋ ಸಿಬ್ಬಂದಿ, ಜೆಸಿಬಿ, ಹಿಟಾಚಿ ಸಜ್ಜುಗೊಳಿಸ್ತಿರೋ ಬಿಬಿಎಂಪಿ 602 ಒತ್ತುವರಿ ತೆರವಿಗೆ ಪ್ಲ್ಯಾನ್ ಮಾಡಿದೆ. ಈ ಬಗ್ಗೆ ಬಿಬಿಎಂಪಿ ಮಹದೇವಪುರ ವಲಯ ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ ಮಾಹಿತಿ ನೀಡಿದ್ದು, ದಸರಾ ಬಳಿಕ ತೆರವು ಮತ್ತೆ ನಡೆಯಲಿದೆ ಎಂದಿದ್ದಾರೆ.

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಗೆ ಜನರು ಬರ್ತಾ ಇಲ್ಲ, ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ: ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪ

ಇದನ್ನೂ ಓದಿ : ಕಾಂಗ್ರೆಸ್‌ ಅಧ್ಯಕ್ಷರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ : ಭವಿಷ್ಯ ನುಡಿದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ಇದನ್ನೂ ಓದಿ : ಮಂಗಳೂರಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ, ಮೊದಲ ದಾಳಿಯಲ್ಲೇ ಮಂಗಳೂರು ತಹಸೀಲ್ದಾರ್​​​ ಲಾಕ್

ಇನ್ನು ಎಲ್ಲೆಲ್ಲಿ ತೆರವು ಕಾರ್ಯಾಚಣೆ ಬಾಕಿ ಇದೆ ಅನ್ನೋದನ್ನು ಗಮನಿಸೋದಾದರೇ,

  • ಪೂರ್ವ 0 – 110
  • ಪಶ್ಚಿಮ 1 – 58
  • ದಕ್ಷಿಣ 0 – 20
  • ಕೋರಮಂಗಲ ಕಣಿವೆ 0 – 3
  • ಯಲಹಂಕ 12 – 84
  • ಮಹದೇವಪುರ 48 – 88
  • ಮಹದೇವಪುರ ಹೊಸ 0 – 45
  • ಬೊಮ್ಮನಹಳ್ಳಿ 17 – 9
  • ಬೊಮ್ಮನಹಳ್ಳಿ ಹೊಸ 0 – 66
  • ಆರ್ ಆರ್ ನಗರ 3 – 6
  • ದಾಸರಹಳ್ಳಿ 13 – 113
  • ಒಟ್ಟು 94 – 602


ಒಟ್ಟಿನಲ್ಲಿ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಜೆಸಿಬಿ ಘರ್ಜಿಸೋದು ಬಹುತೇಕ ಖಚಿತವಾಗುತ್ತಿದೆ.

BBMP is gearing up with JCB to clear encroachments again in Silicon City

Comments are closed.