Mayank Agarwal : ಡಿಯರ್ ಮಯಾಂಕ್ ; “ಹೀಗೇ ಆಡಿದ್ರೆ ಟೀಮ್ ಇಂಡಿಯಾ ಕಂಬ್ಯಾಕ್ ಕನಸು ಮರೆತು ಬಿಡಿ”

ಬೆಂಗಳೂರು: (Mayank Agarwal poor form) ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್’ಮನ್ ಮಯಾಂಕ್ ಅಗರ್ವಾಲ್ ಮತ್ತೆ ಟೀಮ್ ಇಂಡಿಯಾಗೆ ಮರಳುವ ಕನಸು ಕಾಣುತ್ತಿದ್ದಾರೆ. ಆದರೆ ಈಗ ಮಯಾಂಕ್ ಆಡುತ್ತಿರುವ ಆಟವನ್ನು ನೋಡಿದ್ರೆ ಕಂಬ್ಯಾಕ್ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಗಳು ಕಂಡು ಬರುತ್ತಿವೆ.

ಒಮ್ಮೆ ಟೀಮ್ ಇಂಡಿಯಾದಿಂದ ಹೊರ ಬಿದ್ದರೆ ಮತ್ತೆ ಕಂಬ್ಯಾಕ್ ಅಷ್ಟು ಸುಲಭವಲ್ಲ. ಯಾಕಂದ್ರೆ ಅವಕಾಶಕ್ಕಾಗಿ ಕಾಯುತ್ತಿರುವ ಯುವ ಆಟಗಾರರ ದೊಡ್ಡ ದಂಡೇ ಇದೆ. ಮಯಾಂಕ್ ಅಗರ್ವಾಲ್ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಆ ಸ್ಥಾನಕ್ಕೆ ಪಂಜಾಬ್’ನ ಯುವ ಓಪನರ್ ಶುಭಮನ್ ಗಿಲ್ ಲಗ್ಗೆ ಹಾಕಿದ್ದಾರೆ. ಟೆಸ್ಟ್ ಓಪನರ್’ಗಳಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಇಧ್ದು, ಗಿಲ್ 3ನೇ ಓಪನರ್ ಆಗಿ ತಂಡದಲ್ಲಿದ್ದಾರೆ. ಹೀಗಾಗಿ ಮಯಾಂಕ್ ಅಗರ್ವಾಲ್ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ದೇಶೀಯ ಕ್ರಿಕೆಟ್’ನಲ್ಲಿ ಸಾಲಿಡ್ ಪ್ರದರ್ಶನ ತೋರಲೇಬೇಕು. ಆದರೆ ಸಿಕ್ಕ ಅವಕಾಶಗಳನ್ನು ಮಯಾಂಕ್ ಕೈಚೆಲ್ಲುತ್ತಿದ್ದಾರೆ.

ದೇಶೀಯ ಕ್ರಿಕೆಟ್’ನಲ್ಲಿ ಉತ್ತಮ ಪ್ರದರ್ಶನ ತೋರಿ ಮತ್ತೆ ಭಾರತ ಟೆಸ್ಟ್ ತಂಡದ ಕದ ತಟ್ಟುವ ಯೋಚನೆಯಲ್ಲಿದ್ದ ಮಯಾಂಕ್ ಲೆಕ್ಕಾಚಾರಗಳೆಲ್ಲಾ ಬುಡಮೇಲಾಗಿದೆ. ಮಯಾಂಕ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದ ದುಲೀಪ್ ಟ್ರೋಫಿ (Duleep Trophy) ಟೂರ್ನಿಯಲ್ಲಿ ಮಯಾಂಕ್ ವಿಫಲರಾಗಿದ್ದಾರೆ. ಉತ್ತರ ವಲಯ ವಿರುದ್ಧದ ಸೆಮಿಫೈನಲ್’ನಲ್ಲಿ 49 ಹಾಗೂ 64 ರನ್ ಗಳಿಸಿ ಮಿಂಚಿದ್ದ ಮಯಾಂಕ್, ಪಶ್ಚಿಮ ವಲಯ ವಿರುದ್ಧದ ಫೈನಲ್’ನಲ್ಲಿ ಮುಗ್ಗರಿಸಿದ್ದಾರೆ. ಫೈನಲ್ ಪಂದ್ಯದ ಎರಡೂ ಇನ್ನಿಂಗ್ಸ್ ಸೇರಿ ಮಯಾಂಕ್ ಗಳಿಸಿದ್ದು ಕೇವಲ 23 ರನ್.

ಇನ್ನು ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಸೌರಾಷ್ಟ್ರ ವಿರುದ್ಧದ ಇರಾನಿ ಕಪ್ (Irani Cup) ಪಂದ್ಯದ ಪ್ರಥಮ ಇನ್ನಿಂಗ್ಸ್’ನಲ್ಲೂ ಮಯಾಂಕ್ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದು ಕೇವಲ 11 ರನ್ ಗಳಿಸಿ ಔಟಾಗಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್’ನ ಕಳೆದ ಐದು ಇನ್ನಿಂಗ್ಸ್’ಗಳಲ್ಲಿ ಮಯಾಂಕ್ ಅಗರ್ವಾಲ್ ಕೇವಲ 147 ರನ್ ಗಳಿಸಿದ್ದು, ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ.

ಸದ್ಯ ಭಾರತ ತಂಡಕ್ಕೆ ಯಾವುದೇ ಟೆಸ್ಟ್ ಪಂದ್ಯಗಳಿಲ್ಲ. ಹೀಗಾಗಿ ಮುಂದಿನ ಸರಣಿ ಆರಂಭಕ್ಕೂ ಮುನ್ನ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಟೀಮ್ ಇಂಡಿಯಾಗೆ ಮರಳುವ ಕೊನೇ ಅವಕಾಶ ಮಯಾಂಕ್ ಅಗರ್ವಾಲ್ ಮುಂದಿದೆ. ಭಾರತ ಪರ ಒಟ್ಟು 21 ಟೆಸ್ಟ್ ಪಂದ್ಯಗಳನ್ನಾಡಿರುವ 31 ವರ್ಷದ ಮಯಾಂಕ್ ಅಗರ್ವಾಲ್ 41.33ರ ಸರಾಸರಿಯಲ್ಲಿ 4 ಶತಕಗಳ ಸಹಿತ 1488 ರನ್ ಗಳಿಸಿದ್ದಾರೆ.

ಕಳೆದ 5 ಪ್ರಥಮದರ್ಜೆ ಇನ್ನಿಂಗ್ಸ್’ಗಳಲ್ಲಿ ಮಯಾಂಕ್ ಅಗರ್ವಾಲ್ ಗಳಿಸಿದ ರನ್
ದುಲೀಪ್ ಟ್ರೋಫಿ:
ಉತ್ತರ ವಲಯ ವಿರುದ್ಧ (ಸೆಮಿಫೈನಲ್): 49, 64
ಪಶ್ಚಿಮ ವಲಯ ವಿರುದ್ಧ (ಫೈನಲ್): 9, 14
ಇರಾನಿ ಕಪ್ (ಸೌರಾಷ್ಟ್ರ ವಿರುದ್ಧ): 11

ಇದನ್ನೂ ಓದಿ : India vs South Africa T20 Series : ವಿಶ್ವಕಪ್‌ಗೂ ಮುನ್ನ ಕೊನೇ ಎರಡು ಪಂದ್ಯ; ಇನ್ನೂ ಸೆಟ್ಲ್ ಆಗಿಲ್ಲ ಟೀಮ್ ಇಂಡಿಯಾ ಪ್ಲೇಯಿಂಗ್ XI

ಇದನ್ನೂ ಓದಿ : Virat Kohli Retirement : ನಿವೃತ್ತಿಗೂ ಮೊದಲು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡ್ಬೇಕಂತೆ

Mayank Agarwal poor form, forget the dream of Team India comeback

Comments are closed.