India To Tour West Indies : ಭಾರತ ವೆಸ್ಟ್‌ ಇಂಡಿಸ್‌ ಸರಣಿ : T20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸದ ಬೆನ್ನಲ್ಲೇ ವೆಸ್ಟ್‌ ಇಂಡಿಸ್‌ಗೆ ( India To Tour West Indies ) ಪ್ರಯಾಣ ಬೆಳೆಸಲಿದೆ. ವೆಸ್ಟ್‌ ಇಂಡಿಸ್ ವಿರುದ್ದ ಜುಲೈ 22 ರಿಂದ 5 ಪಂದ್ಯಗಳ ಟಿ 20 ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇಂಗ್ಲೆಂಡ್‌ ಪ್ರವಾಸದ ಬೆನ್ನಲ್ಲೇ ಭಾರತ ತಂಡ ವೆಸ್ಟ್‌ ಇಂಡಿಸ್‌ಗೆ ಪ್ರಯಾಣ ಬೆಳೆಸಲಿದೆ.

ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 22 ರಂದು ನಡೆಯಲಿದೆ. ಎರಡನೇ ಪಂದ್ಯ ಜುಲೈ 24 ಮತ್ತು ಅಂತಿಮ ಏಕದಿನ ಪಂದ್ಯ ಜುಲೈ 27 ರಂದು ನಡೆಯಲಿದೆ. ಮೊದಲ T20I ಜುಲೈ 29 ರಂದು ಬ್ರಿಯಾನ್ ಲಾರಾ ಸ್ಟೇಡಿಯಂ (ಪೋರ್ಟ್ ಆಫ್ ಸ್ಪೇನ್) ನಲ್ಲಿ ನಡೆಯಲಿದೆ ಮತ್ತು ನಂತರ ಕ್ರಮವಾಗಿ ಆಗಸ್ಟ್ 1 ಮತ್ತು 2 ರಂದು ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್‌ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯರಿಗಾಗಿಯೇ ಅಂತಿಮ ಎರಡು ಪಂದ್ಯಗಳು ಆಗಸ್ಟ್ 6 ಮತ್ತು 7 ರಂದು ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ವೆಸ್ಟ್‌ ಇಂಡಿಸ್‌ ತಂಡ ನಿಕೋಲಸ್‌ ಪೂರನ್‌ ನೇತೃತ್ವದಲ್ಲಿ ತಂಡವು ಕಣಕ್ಕೆ ಇಳಿಯಲಿದೆ. ಮುಂಬರುವ ವಿಶ್ವಕಪ್‌ ಗಾಗಿ ವೆಸ್ಟ್‌ ಇಂಡಿಸ್‌ ಹಾಗೂ ಭಾರತ ತಂಡಗಳಿಗೆ ಈ ಪಂದ್ಯ ಹೆಚ್ಚು ಮಹತ್ವದ್ದಾಗಿದೆ. ವೆಸ್ಟ್‌ ಇಂಡಿಸ್‌ ಹಾಗೂ ಭಾರತ ನಡುವಿನ ಸರಣಿಯನ್ನು ಪ್ರಸಾರ ಮಾಡಲು ಯಾವುದೇ ಖಾಸಗಿ ಕ್ರೀಡಾ ವಾಹಿನಿಗಳು ಮುಂದೆ ಬಂದಿಲ್ಲ. ಹೀಗಾಗಿ ಫ್ಯಾನ್‌ ಕೋಡ್‌ ಭಾರತೀಯ ಅಭಿಮಾನಿಗಳಿಗೆ ಡಿಜಿಟಲ್ ಮೂಲಕ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಏಕದಿನ ಸರಣಿ (India To Tour West Indies ) ವೇಳಾಪಟ್ಟಿ

1 ನೇ ODI: ಜುಲೈ 22 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)

2ನೇ ODI: ಜುಲೈ 24 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)

3ನೇ ODI: ಜುಲೈ 27 (ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್)

ಎಲ್ಲಾ ODI ಪಂದ್ಯಗಳು ಸಂಜೆ 7 ರಿಂದ ನೇರ ಪ್ರಸಾರ

T20 ಪಂದ್ಯಗಳ ಸರಣಿ (India To Tour West Indies ) ವೇಳಾಪಟ್ಟಿ

1 ನೇ T20: ಜುಲೈ 29 : ( ಬ್ರಿಯಾನ್ ಲಾರಾ ಸ್ಟೇಡಿಯಂ, ಪೋರ್ಟ್ ಆಫ್ ಸ್ಪೇನ್)

2 ನೇ T20: ಆಗಸ್ಟ್ 1 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)

3 ನೇ T20: ಆಗಸ್ಟ್ 2 (ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್ ಮತ್ತು ನೆವಿಸ್)

4 ನೇ T20: ಆಗಸ್ಟ್ 6 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)

5 ನೇ T20: ಆಗಸ್ಟ್ 7 (ಬ್ರೋವರ್ಡ್ ಕೌಂಟಿ ಗ್ರೌಂಡ್, ಫ್ಲೋರಿಡಾ, USA)

ಎಲ್ಲಾ T20 ಪಂದ್ಯಗಳು 8 ರಿಂದ ನೇರ ಪ್ರಸಾರ

ಇದನ್ನೂ ಓದಿ : Saurav Ganguly : ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ : ಸ್ಪಷ್ಟನೆ ಕೊಟ್ಟ ಶಾ

ಇದನ್ನೂ ಓದಿ : T20 World Cup Squad: ಟಿ20 ವಿಶ್ವಕಪ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕ : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಔಟ್

India To Tour West Indies T20I ODI Series Full Schedule Here

Comments are closed.