bjp mla uday garudachar : ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ : ಬಿಜೆಪಿ ಶಾಸಕ ಉದಯ್​ ಗರುಡಾಚಾರ್​ಗೆ 2 ತಿಂಗಳು ಜೈಲು ಶಿಕ್ಷೆ

ಬೆಂಗಳೂರು : bjp mla uday garudachar : ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿಯನ್ನು ನಮೂದಿಸಿದ್ದಾರೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಸಕ ಉದಯ್​ ಗರುಡಾಚಾರ್​​ಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು 2 ತಿಂಗಳುಗಳ ಕಾಲ ಶಿಕ್ಷೆಗೆ ಒಳಪಡಿಸಿದೆ. ಇದರ ಜೊತೆಯಲ್ಲಿ ಹತ್ತು ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ಬಿಜೆಪಿಯ ಉದಯ್​ ಗರುಡಾಚಾರ್​ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಶಾಸಕರಾಗಿದ್ದಾರೆ .

2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಶಾಸಕ ಉದಯ್​​ ಗರುಡಾಚಾರ್​ ತಮ್ಮ ವಿರುದ್ಧ ಇರುವ ಕ್ರಿಮಿನಲ್​ ಕೇಸುಗಳನ್ನು ಮುಚ್ಚಿಟ್ಟಿದ್ದರು. ಆರ್​ಒಸಿಯಿಂದ ಉದಯ್​ ಗರುಡಾಚಾರ್​ ಹಾಗೂ ಅವರ ಪತ್ನಿ ಅನರ್ಹಗೊಂಡಿದ್ದ ವಿಚಾರವನ್ನು ಉದಯ್​ ಗರುಡಾಚಾರ್​ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿದ್ದರು. ಈ ಸಂಬಂಧ ಬೆಂಗಳೂರಿನ ಅಶೋಕ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕಾಶ್​ ಎಂ. ಶೆಟ್ಟಿ ಎಂಬವರು ದೂರನ್ನು ದಾಖಲಿಸಿದ್ದರು .

ಕೇವಲ ಆರ್​ಒಸಿಯಿಂದ ಅನರ್ಹಗೊಂಡಿದ್ದ ವಿಚಾರ ಮಾತ್ರವಲ್ಲದೇ ಪತ್ನಿಯ ಬ್ಯಾಂಕಿಂಗ್​ ವಿವರಗಳನ್ನು ಉದಯ್​ ಗರುಡಾಚಾರ್​ ಮುಚ್ಚಿಟ್ಟಿದ್ದರು. ಮೆವರಿಕ್​ ಹೋಲ್ಡಿಂಗ್ಸ್​ನಲ್ಲಿ ಎಂಡಿಯಾಗಿದ್ದರೂ ಸಹ ಹೂಡಿಕೆದಾರ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲಾ ವಿಚಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕಾಶ್​ ಎಂ ಶೆಟ್ಟಿ ಎಂಬವರು ದೂರನ್ನು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿದ್ದ 42ನೇ ಎಸಿಎಂಎಂ ನ್ಯಾಯಾಲಯವು ಬಿಜೆಪಿ ನಾಯಕ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್​ ಗರುಡಾಚಾರ್​​ಗೆ ಎರಡು ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ.

ಇದನ್ನು ಓದಿ : Olavina Nildana:ತಾರಿಣಿಯ ಕಡೆ ವಾಲುತ್ತಿದ್ದಾನೆ ಸಿದ್ದಾಂತ್, ಕುತೂಹಲ ಹುಟ್ಟಿಸಿದ ಒಲವಿನ ನಿಲ್ದಾಣ

ಇದನ್ನೂ ಓದಿ : Ramesh Aravind : ಯಕ್ಷಗಾನ ವೇಷತೊಟ್ಟ ನಟ ರಮೇಶ್ ಅರವಿಂದ್ : ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ಯಾಕೆ ?

bengaluru 42 ac mm court orders 2 month jail for bjp mla uday garudachar

Comments are closed.