Bharat Jodo Yatra :ಎರಡು ದಿನಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಭಾರತ್​ ಜೋಡೋ ಯಾತ್ರೆ : ರಾಹುಲ್​ ಗಾಂಧಿಗೆ ಸೋನಿಯಾ ಸಾಥ್​​

ಮಂಡ್ಯ :Bharat Jodo Yatra : ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿರುಸಿನ ಭಾರತ್​ ಜೋಡೋ ಯಾತ್ರೆಯಲ್ಲಿಂದು ರಾಹುಲ್​ ಗಾಂಧಿ ಜೊತೆಯಲ್ಲಿ ತಾಯಿ ಸೋನಿಯಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದಾರೆ. ಎರಡು ದಿನಗಳ ವಿರಾಮ ತೆಗೆದುಕೊಂಡಿದ್ದ ಕಾಂಗ್ರೆಸ್​ ನಾಯಕರು ಇಂದು ಮಂಡ್ಯದಲ್ಲಿ ಮತ್ತೆ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ರಾಹುಲ್​ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ. ಪಾಂಡವಪುರ ತಾಲೂಕಿನ ರಾಮನಹಳ್ಳಿಯ ಬಳಿಯಲ್ಲಿ ಸೋನಿಯಾ ಗಾಂಧಿ ಭಾರತ್​ ಜೋಡೋ ಯಾತ್ರೆಯನ್ನು ಸೇರಿಕೊಂಡಿದ್ದಾರೆ.

ಭಾರತ್​ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದ ದೃಶ್ಯ ಕಂಡು ಬಂತು. ನಾಗಮಂಗಲ ತಾಲೂಕಿನ ಕರಾಡ್ಯ ರಸ್ತೆ ಬದಿಯಲ್ಲಿ ನಿಂತ ಮಹಿಳೆಯರು ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿಗೆ ಪೂರ್ಣಕುಂಭ ಸ್ವಾಗತ ಕೋರಿದ್ದಾರೆ.

ಭಾರತ್​ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಒಟ್ಟೂ 12 ನಿಮಿಷ ಹೆಜ್ಜೆ ಹಾಕಿದರು. ಸುಮಾರು ಮುಕ್ಕಾಲು ಕಿಲೋಮೀಟರ್​ವರೆಗೆ ರಾಹುಲ್​ ಗಾಂಧಿಯ ಜೊತೆಗೆ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗಿಯಾದರು. ಇಂದೇ ಸೋನಿಯಾ ಗಾಂಧಿ ದೆಹಲಿಗೆ ಮರಳಲಿದ್ದಾರೆ.

ಭಾರತ್​ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗುಲಾಬಿ ಹೂ ನೀಡಲು ಕಾಯುತ್ತಿದ್ದ ವಿಶೇಷ ಚೇತನರನ್ನು ರಾಹುಲ್​ ಗಾಂಧಿ ರಸ್ತೆ ಮಧ್ಯೆ ಕರೆಸಿದರು. ಅಮೃತಿ ಗ್ರಾಮದ ಬಳಿ ವ್ಹೀಲ್​ ಚೇರ್​ನಲ್ಲಿ ರಾಹುಲ್​ ಗಾಂಧಿ ಆಗಮನಕ್ಕಾಗಿ ವಿಶೇಷ ಚೇತನರು ಕಾಯುತ್ತಿದ್ದರು. ವಿಶೇಷ ಚೇತನರನ್ನು ನೋಡಿ ರಸ್ತೆ ಮಧ್ಯೆ ವ್ಹೀಲ್​ ಚೇರ್​ ತಳ್ಳಿಕೊಂಡು ಬರುವಂತೆ ಟ್ರಸ್ಟ್​ವೊಂದರ ಸದಸ್ಯರಿಗೆ ರಾಹುಲ್​ ಸೂಚನೆ ನೀಡಿದರು. ಪಾದಯಾತ್ರೆ ಮಾಡುತ್ತಲೇ ವಿಶೇಷ ಚೇತನರನ್ನು ಸುಮಾರು 2 ನಿಮಿಷಗಳ ಕಾಲ ರಾಹುಲ್​ ಗಾಂಧಿ ಮಾತನಾಡಿಸಿದರು.

ಇಂದಿನ ಪಾದಯಾತ್ರೆ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾದರು. ಬೆಳಗ್ಗೆಯಿಂದಲೇ ಭಾರತ್​ ಜೋಡೋ ಯಾತ್ರೆಯಲ್ಲಿ ಜನರು ಜಮಾಯಿಸಲು ಆರಂಭಿಸಿದರು. ದಾರಿಯುದ್ದಕ್ಕೂ ಜನರು ಪಾದಯಾತ್ರೆಯನ್ನು ಸೇರುತ್ತಲೇ ಹೋಗಿದ್ದಾರೆ.ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಸೇರಿದಂತೆ ಹಲವು ನಾಯಕರು ಭಾರತ್​ ಜೋಡೋ ಯಾತ್ರೆಯಲ್ಲಿ ಇಂದು ಭಾಗಿಯಾಗಿದ್ದಾರೆ.

ಇದನ್ನು ಓದಿ : 12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್​​

ಇದನ್ನೂ ಓದಿ : Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

Bharat Jodo Yatra restarted after a two-day break: Sonia Saath for Rahul Gandhi

Comments are closed.