bjp vs Nalapad : ಯುವ ನಾಯಕ ನಲಪಾಡ್ ಮಾಡೋದೆಲ್ಲ ಎಡವಟ್ಟು: ಗೂಂಡಾ ಶಿಷ್ಯರು ಎಂದು ಬಿಜೆಪಿ ಟ್ವೀಟ್

ಬೆಂಗಳೂರು : ಕಾಂಗ್ರೆಸ್ 2023 ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಕನಸಿನಲ್ಲಿದೆ. ಹೀಗಾಗಿ ಚಿಕ್ಕಪುಟ್ಟ ವಿಚಾರಕ್ಕೂ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಆಳುವ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡುವ ಕೆಲಸ ಮಾಡ್ತಿದೆ. ಆದರೇ ಈ ಪ್ರತಿಭಟನೆ,ಹೋರಾಟ ಹಾಗೂ ಅದರ ನಾಯಕರೇ ಕಾಂಗ್ರೆಸ್ ಪಾಲಿಗೆ ಮುಳ್ಳಾಗಿದ್ದಾರೆ. ಹೌದು ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ (bjp vs Nalapad )ಮತ್ತೆ ಮತ್ತೆ ಎಲ್ಲರ ಟೀಕೆಗೆ ಗುರಿಯಾಗುತ್ತಿದ್ದು, ಅವರ ಮಾತು ,ನಡೆ, ಹೋರಾಟದ ವೈಖರಿ ಕಾಂಗ್ರೆಸ್ ಗೆ ಮುಜುಗರ ತಂದಿಡುತ್ತಿದೆ.

ಸಾಕಷ್ಟು ಹೋರಾಟಗಳ ಬಳಿಕ ಮೊಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ ನಾಯಕರಾಗಿ ಅಧಿಕಾರ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಡಿಕೆಶಿ ಅಪ್ಪಟ ಶಿಷ್ಯರಂತೆ ವರ್ತಿಸುತ್ತಿರುವ ನಲಪಾಡ್ ಒಂದಿಲ್ಲೊಂದು ಹೋರಾಟ, ಪ್ರತಿಭಟನೆ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ. ಆದರೆ ಅದ್ಯಾಕೋ ಅವರ ಪ್ರತಿಭಟನೆ ಹಾಗೂ ಹೇಳಿಕೆಗಳು ಪಕ್ಷಕ್ಕೆ ಬಲ ತುಂಬುವ ಬದಲು ಪಕ್ಷಕ್ಕೆ ಮುಜುಗರ ತರುತ್ತಿದೆ. ಆರ್ ಎಸ್ ಎಸ್ ಚಡ್ಡಿ ವಿಚಾರ ಹಾಗೂ ರಾಹುಲ್ ಗಾಂಧಿ ಇಡಿ ವಿಚಾರಣೆ ಹೀಗೆ ಎಲ್ಲ ಸಂದರ್ಭದಲ್ಲೂ ನಲಪಾಡ್ ಹೇಳಿಕೆ ತೀವ್ರ ಹಾಸ್ಯಾಸ್ಪದ ಎನ್ನಿಸಿದೆ.

ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ನಡೆದಿದೆ ಎಂದು ನಲಪಾಡ್ ಹೇಳಿದ್ದು, ಬಿಜೆಪಿ ಸೇರಿದಂತೆ ಎಲ್ಲರಿಂದಲೂ ಟೀಕೆಗೆ ಗುರಿಯಾಗಿದೆ. ನಲಪಾಡ್ ಮೊದಲು ಕನ್ನಡ ಕಲಿಯಲಿ, ಶಬ್ದ ಬಳಕೆ ಬಗ್ಗೆ ಮೊದಲು ತಿಳಿದುಕೊಳ್ಳಲಿ ಎಂದು ಬಿಜೆಪಿ ಹಿರಿಯ ನಾಯಕ ಆರ್.ಆಶೋಕ್ ನಲಪಾಡ್ ಗೆ ಕಿವಿಮಾತು ಹೇಳಿದ್ದಾರೆ. ಇನ್ನೊಂದೆಡೆ ನಲಪಾಡ್ ರೌಡಿ ವರ್ತನೆ ಹಾಗೂ ಕ್ರೈಂ ಹಿನ್ನೆಲೆ ನಲಪಾಡ್ ಗೆ ಮೈನಸ್ ಆಗಿದ್ದು ಬಿಜೆಪಿ ಸಾಮಾಜಿಕ ಜಾಲ ತಾಣ ಸೇರಿದಂತೆ ಕಮಲಪಡೆಯ ನಾಯಕರು ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಡ್ತಿದ್ದಾರೆ.

ರಾಹುಲ್ ಗಾಂಧಿ ಬೆಂಬಲಿಸಿ ನಲಪಾಡ್ ಹೇಳಿಕೆ ಹಾಗೂ ಹೋರಾಟಕ್ಕೆ ಸಖತ್ ತಿರುಗೇಟು ನೀಡಿರೋ ಬಿಜೆಪಿ ಪಬ್ ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಟಾಂಟ್ ನೀಡಿದೆ. ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತವೆ. ಬೀದಿ ರೌಡಿಗಳು ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು ಎಂದು ಬಿಜೆಪಿ ಕುಟುಕಿದೆ.

ಒಟ್ಟಿನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಾಂಗ್ರೆಸ್ ಪಾಲಿಗೆ ವರವಾಗೋ ಬದಲು ಶಾಪವಾಗಿದ್ದು, ಇದು ಸ್ವತಃ ಕೆಲ ಕೈನಾಯಕರ ಅಸಮಧಾನಕ್ಕೆ ಕಾರಣವಾಗಿದೆ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರು ಗುಟ್ಟು ಗುಟ್ಟಾಗಿ ಹೇಳ್ತಿದ್ದಾರೆ.

ಇದನ್ನೂ ಓದಿ : Siddaramaiah : ಸೋತು ಗೆದ್ದ ಸಿದ್ದರಾಮಯ್ಯ ; ಒಂದೇ ಕಲ್ಲಿಗೆ 3 ಹಕ್ಕಿ ಹೊಡೆದ ಟಗರು

ಇದನ್ನೂ ಓದಿ : d k shivakumar : ಇಡಿ ವಿಚಾರಣೆ ಕಾಂಗ್ರೆಸ್ಸಿಗರಿಗೆ ಮಾತ್ರ ಸೀಮಿತವೇ, ಬಿಜೆಪಿಗಿಲ್ಲವೇ : ಡಿಕೆಶಿ ಪ್ರಶ್ನೆ

bjp vs Nalapad, bjp twitter war against congress leader Mohammed Haris Nalapad

Comments are closed.