Chinnaswamy Stadium : ಸೌತ್ ಆಫ್ರಿಕಾ-ಇಂಡಿಯಾ ಪಂದ್ಯ : ಬೆಂಗಳೂರಲ್ಲಿ ಭದ್ರತೆ ಪರಿಶೀಲಿಸಿದ ಗೃಹ ಸಚಿವರು

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರೋ ಟಿ20 ಸರಣಿಯ ಕೊನೆಯ ಪಂದ್ಯಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಕೊರೋನಾ ಸೇರಿದಂತೆ ಹಲವು ಕಾರಣದಿಂದ ಕ್ರಿಕೇಟ್ ಮ್ಯಾಚ್ ಗಳನ್ನು ಮಿಸ್ ಮಾಡಿಕೊಂಡಿದ್ದ ಕ್ರಿಕೇಟ್ ಪ್ರಿಯರು ಈ ವಾರಾಂತ್ಯದಲ್ಲಿ ಟಿ20 ಸರಣಿಯ (Ind vs SA 4th T20) ಕೊನೆಯ ಪಂದ್ಯಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಈ ಪಂದ್ಯಾವಳಿಯ ಸಿದ್ಧತೆ ಹಾಗೂ ಭದ್ರತೆಯನ್ನು ಸ್ವತಃ ಹೋಂ ಮಿನಿಸ್ಟರ್ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಕ್ರಿಕೇಟ್ ಪ್ರೇಮಿಗಳಿಗೆ ರಸದೌತಣ ನೀಡಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಜೂನ್ 19 ಭಾನುವಾರ ಭಾರತ ಹಾಗೂ ಸೌತ್ ಆಫ್ರಿಕಾ ನಡುವೆ ಕ್ರಿಕೇಟ್ ಪಂದ್ಯ ನಡೆಯಲಿದ್ದು ಇದಕ್ಕಾಗಿ ನಗರದಾದ್ಯಂತ ಹಾಗೂ ಪಂದ್ಯಾವಳಿ ನಡೆಯುವ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭದ್ರತೆ ಹೆಚ್ಚಿಸಲಾಗಿದೆ.

ಈ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬುಧವಾರ ಭೇಟಿ ನೀಡಿದ್ದು ಅಲ್ಲಿನ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಕ್ರಿಕೇಟ್ ಮ್ಯಾಚ್ ಹಿನ್ನೆಲೆಯಲ್ಲಿ ಒದಗಿಸಲಾದ ಭದ್ರತೆಯ ವಿವರ ಪಡೆದಿದ್ದಾರೆ. ಈ ವೇಳೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಾದ ರೋಜರ್ ಬಿನ್ನಿ,ಸಂತೋಷ್ ಮೆನನ್,ವಿನಯ್ ಮೃತ್ಯುಂಜಯ ,ಅಭಿರಾಮ್ ಕಾರ್ತಿಕ್, ಡಿ.ಎಸ್.ಅರುಣ್ ಉಪಸ್ಥಿತರಿದ್ದರು.

ಇದೇ ವೇಳೆ KSCA ಅಧ್ಯಕ್ಷ ರೋಜರ್ ಬಿನ್ನಿಯವರು ಹೋಂ‌ಮಿನಿಸ್ಟರ್ ಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ. ಐದು ದಿನಗಳ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಪೊಲೀಸ್ ಇಲಾಖೆ ವಿಧಿಸುವ ಭದ್ರತಾ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು ಅದನ್ನು ಪರಿಷ್ಕರಿಸಬೇಕೆಂದು ಮನವಿ ಮಾಡಿದ್ದಾರೆ. ಈ ಮನವಿಗೆ ತಕ್ಷಣ ಸ್ಪಂದಿಸಿದ ಗೃಹ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇನ್ನೂ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರೋದು ಹೈವೋಲ್ಟೆಜ್ ಪಂದ್ಯವಾಗಿದ್ದು, ಇಂಡಿಯಾ ಹಾಗೂ ಸೌತ್ ಆಫ್ರೀಕಾದ ಪೈಕಿ ಯಾರು ಗೆಲ್ಲುತ್ತಾರೋ ಅವರಿಗೆ ಸರಣಿ ಒಲಿಯಲಿದೆ. ಬಹುವರ್ಷಗಳ ಬಳಿಕ ನಗರದಲ್ಲಿ ನಡೆಯುತ್ತಿರೋ ಈ ಪಂದ್ಯಾವಳಿಗೆ ಟಿಕೇಟ್ ಭರ್ಜರಿ ಪ್ರಮಾಣದಲ್ಲಿ ಸೇಲ್ ಆಗಿದ್ದು, ಕನ್ನಡಿಗ ಕೆ.ಎಲ್.ರಾಹುಲ್ ಮುನ್ನಡೆಸಲಿರೋ ಇಂಡಿಯಾದ ಆಟವನ್ನು ಕಣ್ತುಂಬಿಕೊಳ್ಳೋಕೆ ಜನರು ಕುತೂಹಲದಿಂದ ಕಾಯ್ತಿದ್ದಾರೆ.

ಇದನ್ನೂ ಓದಿ : ನ್ಯೂಜಿಲೆಂಡ್ ಬೆನ್ನಿಗೆ ಇರಿದ ಇಂಗ್ಲೆಂಡ್ ತಂಡದ ಕಟ್ಟಪ್ಪ

ಇದನ್ನೂ ಓದಿ : ಕೆ.ಎಲ್ ರಾಹುಲ್‌ಗೆ ಅವನೊಬ್ಬ ದುಷ್ಮನ್ ; ಕನ್ನಡಿಗನ ಬೆನ್ನು ಬಿದ್ದ ಬೇತಾಳ ಯಾರು ?

Ind vs SA 4th T20 Match Home Minister for Security Verification in Chinnaswamy Stadium

Comments are closed.