ಕೆ.ಎಲ್ ರಾಹುಲ್‌ಗೆ ಅವನೊಬ್ಬ ದುಷ್ಮನ್ ; ಕನ್ನಡಿಗನ ಬೆನ್ನು ಬಿದ್ದ ಬೇತಾಳ ಯಾರು ?

ಬೆಂಗಳೂರು: ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್ ರಾಹುಲ್ (KL Rahul), ಸದ್ಯ ಭಾರತದ ಟಾಪ್-3 ಬ್ಯಾಟರ್”ಗಳಲ್ಲಿ ಒಬ್ಬರು. ಮೂರು ಫಾರ್ಮ್ಯಾಟ್’ನಲ್ಲಿ ಇನ್ನಿಂಗ್ಸ್ ಆರಂಭಿಸುವ ರಾಹುಲ್ ತಂಡದ ಆಧಾರಸ್ಥಂಭವೂ ಹೌದು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು (India Cricket Team) ಮುನ್ನಡೆಸಬೇಕಿದ್ದ ರಾಹುಲ್, ಗಾಯದ (Rahul Injury report) ಕಾರಣ ಸರಣಿಯಿಂದಲೇ ಹೊರ ಬಿದ್ದಿದ್ರು. ಈಗಿನ ಬ್ರೇಕಿಂಗ್ ನ್ಯೂಸ್ ಏನಂದ್ರೆ ಗಾಯದಿಂದ ಚೇತರಿಸಿಕೊಳ್ಳುವುದು ತಡವಾಗುತ್ತಿರುವ ಕಾರಣ, ಇಂಗ್ಲೆಂಡ್ ಪ್ರವಾಸದಿಂದಲೂ ರಾಹುಲ್ ಹೊರಗುಳಿಯುವ ಸಾಧ್ಯತೆಯಿದೆ.

ಹಾಗೆ ನೋಡಿದ್ರೆ ಕಳೆದ ಕೆಲ ವರ್ಷಗಳಲ್ಲಿ ಕೆ.ಎಲ್ ರಾಹುಲ್ ಅವರನ್ನು ಇನ್ನಿಲ್ಲದೆ ಕಾಡಿದ್ದು ಇದೇ ದುಷ್ಮನ್. ಅದೇ ಗಾಯದ ಸಮಸ್ಯೆ. 30 ವರ್ಷದ ರಾಹುಲ್ ಕಳೆದ ಏಳು ವರ್ಷಗಳಲ್ಲಿ ನಿರಂತರವಾಗಿ ಗಾಯಕ್ಕೆ ತುತ್ತಾಗುತ್ತಲೇ ಇದ್ದಾರೆ. ಗಾಯದ ಕಾರಣ ಹಲವಾರು ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ.

ರಾಹುಲ್ ಗಾಯದ (Rahul Injury report) ಸರಮಾಲೆ

2015: ಗಾಯದ ಕಾರಣ ಬಾಂಗ್ಲಾದೇಶ ವಿರುದ್ಧ ಟೆಸ್ಟ್’ನಿಂದ ಔಟ್.
2016: ಸ್ನಾಯು ಸೆಳೆತದ ಕಾರಣ, ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್, ಏಕದಿನ ಸರಣಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಔಟ್.
2017: ಭುಜದ ನೋವಿಗೆ ಶಸ್ತ್ರಚಿಕಿತ್ಸೆಗೊಳಗಾದ ಕಾರಣ ಐಪಿಎಲ್ ಟೂರ್ನಿಯಿಂದ ಔಟ್.
2017: ಭುಜದ ನೋವಿನ ಕಾರಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಔಟ್.
2017: ಅನಾರೋಗ್ಯದ ಕಾರಣ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಔಟ್.
2021: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯಿಂದ ಔಟ್.
2021: ಎಡತೊಡೆಯ ನೋವಿನ ಕಾರಣ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಔಟ್.
2022: ಸ್ನಾಯು ಸೆಳೆತದ ಕಾರಣ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಸರಣಿಯಿಂದ ಔಟ್.
2022: ತೊಡೆಸಂಧು ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಔಟ್.

ಸದ್ಯ ತೊಡೆ ಸಂಧು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕೆ.ಎಲ್ ರಾಹುಲ್ ಶನಿವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್”ಗೊಳಗಾಗಲಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ಇಂಗ್ಲೆಂಡ್ ಪ್ರವಾಸಕ್ಕೆ ರಾಹುಲ್ ಲಭ್ಯರಾಗಲಿದ್ದಾರೆ. 2014ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ರಾಹುಲ್, ಭಾರತ ಪರ 43 ಟೆಸ್ಟ್ ಪಂದ್ಯಗಳನ್ನಾಡಿದ್ದು 7 ಶತಕಗಳ ಸಹಿತ 2,547 ರನ್ ಗಳಿಸಿದ್ದಾರೆ. 42 ಏಕದಿನ ಪಂದ್ಯಗಳಿಂದ 5 ಶತಕಗಳ ಸಹಿತ 1,634 ರನ್ ಮತ್ತು 56 ಟಿ20 ಪಂದ್ಯಗಳಿಂದ 2 ಶತಕ ಸಹಿತ 1,831 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Successor of Rohit Sharma : ಈ ಹುಡುಗನಿಗೆ ಸಪೋರ್ಟ್ ಮಾಡಿದ್ರೆ ಮತ್ತೊಬ್ಬ ರೋಹಿತ್ ಶರ್ಮಾ ಆಗ್ತಾನೆ

ಇದನ್ನೂ ಓದಿ : ನ್ಯೂಜಿಲೆಂಡ್ ಬೆನ್ನಿಗೆ ಇರಿದ ಇಂಗ್ಲೆಂಡ್ ತಂಡದ ಕಟ್ಟಪ್ಪ

KL Rahul has one Dushman Rahul Injury report

Comments are closed.